ಲಿಪ್‌ಲಾಕ್ ಮಾಡ್ತಾ ಉಂಗುರ ತೊಡಿಸಿಕೊಂಡ ನಟಿ – ಅಮಲಾ ಪೌಲ್ ಎರಡನೇ ಮದುವೆಗೆ ಭರ್ಜರಿ ಸಿದ್ಧತೆ

ಲಿಪ್‌ಲಾಕ್ ಮಾಡ್ತಾ ಉಂಗುರ ತೊಡಿಸಿಕೊಂಡ ನಟಿ – ಅಮಲಾ ಪೌಲ್ ಎರಡನೇ ಮದುವೆಗೆ ಭರ್ಜರಿ ಸಿದ್ಧತೆ

ಕನ್ನಡ ಸೂಪರ್ ಹಿಟ್ ಸಿನಿಮಾ ಹೆಬ್ಬುಲಿಯ ನಾಯಕಿ ಅಮಲಾ ಪೌಲ್ ಮತ್ತೊಂದು ಮದುವೆಗೆ ರೆಡಿಯಾಗಿದ್ದಾರೆ. ಅಷ್ಟೇ ಅಲ್ಲ, ಮದುವೆಯಾಗುವ ಹುಡುಗನ ಜೊತೆ ವಿಭಿನ್ನವಾಗಿ ಮದುವೆಯ ಪ್ರಪೋಸಲ್ ಸ್ವೀಕರಿಸಿದ್ದಾರೆ. ಅಮಲಾ ಅವರ ಹುಟ್ಟು ಹಬ್ಬದ ದಿನದಂದೇ ಬಾಯ್ ಫ್ರೆಂಡ್ ವಿಶೇಷವಾದ ಸನ್ನಿವೇಶವೊಂದನ್ನು ಸೃಷ್ಟಿ ಮಾಡಿ ಅಮಲಾ ಕೈಗೆ ಉಂಗುರು ತೊಡಿಸಿದ್ದಾರೆ. ಜೊತೆಗೆ ಇಬ್ಬರೂ ಸೇರಿ ಲಿಪ್‌ಲಾಕ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ಈಗ ಸದ್ಯ ಹಾಟ್ ಟಾಪಿಕ್ ಆಗಿದೆ.

ಇದನ್ನೂ ಓದಿ:  ಬಾಲಿವುಡ್‌ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ – ಅನಿಮಲ್ ಸಿನಿಮಾದಲ್ಲಿ ರಣ್‌ಬೀರ್ ಕಪೂರ್ ಜೊತೆ ಸುದೀರ್ಘ ಚುಂಬನ

ದಕ್ಷಿಣ ಭಾರತದ ಖ್ಯಾತಿ ನಟಿ ಅಮಲಾ ಪೌಲ್. ಈ ನಟಿ ಸಿನಿಮಾಗಳಿಗಿಂತ ಹೆಚ್ಚು ವಿವಾದಗಳಿಂದಲೇ ಸುದ್ದಿ ಆದವರು. ಸಿನಿಮಾದಲ್ಲೂ ಅಷ್ಟೇ ಡಿಮ್ಯಾಂಡ್ ಸೃಷ್ಟಿಮಾಡಿಕೊಂಡವರು. 2014ರಲ್ಲಿ ತಮಿಳು ನಿರ್ದೇಶಕ ವಿಜಯ್ ಅವರನ್ನು ಪ್ರೀತಿಸಿ ಮದುವೆಯಾದರು. ಆದರೆ, ಆ ಸಂಬಂಧ ತುಂಬಾ ದಿನ ಉಳಿಯಲಿಲ್ಲ. ಮದುವೆಯಾದ ಮೂರೇ ಮೂರು ವರ್ಷಕ್ಕೆ ವೈವಾಹಿಕ ಜೀವನ ಮುರಿದು ಬಿತ್ತು. ಆನಂತರ ಈ ನಟಿಯ ಹೆಸರು ಹಲವಾರು ನಟರ ಹೆಸರಿನೊಂದಿಗೆ ತಳುಕು ಹಾಕಿಕೊಂಡಿತ್ತು. ಅನೇಕ ನಿರ್ದೇಶಕರ ಹೆಸರು ಕೂಡ ಕೇಳಿ ಬಂದಿತ್ತು. ಆದರೆ, ಯಾವತ್ತೂ ಅಮಲಾ ಉತ್ತರಿಸಲಿಲ್ಲ. ಇದೀಗ ಬಾಯ್ ಫ್ರೆಂಡ್ ಜೊತೆಗಿನ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

ಜಗತ್ ದೇಸಾಯಿ ಜೊತೆ ಅಮಲಾ ಡೇಟಿಂಗ್ ನಲ್ಲಿದ್ದರು. ಅವರೇ ಹೋಟೆಲ್ ವೊಂದರಲ್ಲಿ ಅಮಲಾ ಅವರ ಹುಟ್ಟು ಹಬ್ಬಕ್ಕೆ ಸಿದ್ಧತೆ ಮಾಡಿದ್ದಾರೆ. ನೃತ್ಯ ಮಾಡುತ್ತಲೇ ನಟಿಗೆ ಪ್ರಪೋಸ್ ಮಾಡಿದ್ದಾರೆ. ಅಚ್ಚರಿಯಿಂದಲೇ ಅಮಲಾ ಕೂಡ ಬಾಯ್ ಫ್ರೆಂಡ್ ತುಟಿಗೆ ಮುತ್ತಿಡುತ್ತಾ ಉಂಗುರು ತೊಡಿಸಿದ್ದಾರೆ. ಆ ರೋಮ್ಯಾಂಟಿಕ್ ವಿಡಿಯೋವನ್ನು ದೇಸಾಯಿ ತಮ್ಮ ಇನ್ಸ್ಟಾ ಪೇಜ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಅನೇಕರು ಈ ಜೋಡಿಗೆ ಶುಭಾಶಯಗಳನ್ನೂ ತಿಳಿಸಿದ್ದಾರೆ.

ಜಗತ್ ದೇಸಾಯಿ ಯುವ ಉದ್ಯಮಿಯಾಗಿದ್ದು, ಅವರೊಂದಿಗೆ ಅಮಲಾ ಎರಡನೇ ಮದುವೆ ಆಗಲಿದ್ದಾರೆ. ಜಗತ್ ದೇಸಾಯಿ ಜೊತೆ ಅಮಲಾ ಡೇಟಿಂಗ್ ನಲ್ಲಿದ್ದರು.

Sulekha