ಪತ್ನಿಯಿಂದ ಮಾನಸಿಕ ಹಿಂಸೆ, ಆತ್ಮಹತ್ಯೆ ಯೋಚನೆ – ಎಲ್ಲವನ್ನೂ ಮೆಟ್ಟಿನಿಂತ ಮೊಹಮ್ಮದ್ ಶಮಿಯಿಂದ ವಿಶ್ವಕಪ್‌ನಲ್ಲಿ ಸಾಧನೆ
ಟೀಮ್ ಇಂಡಿಯಾದ ಗೆಲುವಿನ ರೂವಾರಿ ಮೊಹಮ್ಮದ್ ಶಮಿ..!

ಪತ್ನಿಯಿಂದ ಮಾನಸಿಕ ಹಿಂಸೆ, ಆತ್ಮಹತ್ಯೆ ಯೋಚನೆ – ಎಲ್ಲವನ್ನೂ ಮೆಟ್ಟಿನಿಂತ ಮೊಹಮ್ಮದ್ ಶಮಿಯಿಂದ ವಿಶ್ವಕಪ್‌ನಲ್ಲಿ ಸಾಧನೆಟೀಮ್ ಇಂಡಿಯಾದ ಗೆಲುವಿನ ರೂವಾರಿ ಮೊಹಮ್ಮದ್ ಶಮಿ..!

ಟೀಂ ಇಂಡಿಯಾದ ಸೀನಿಯರ್​​ ಬೌಲರ್ ಮೊಹಮ್ಮದ್ ಶಮಿ. ಈ ಬಾರಿಯ ವರ್ಲ್ಡ್​​ಕಪ್​ನಲ್ಲಿ ಆಡಿದ ಎರಡು ಮ್ಯಾಚ್​​ಗಳಲ್ಲೇ ಶಮಿ 9 ವಿಕೆಟ್​​ ಪಡೆದಿದ್ದರು. ವಿಶ್ವಕಪ್​ನಲ್ಲಿ ಆಡಿದ ಓವರ್​​ಆಲ್​ 13 ಮ್ಯಾಚ್​ಗಳಲ್ಲಿ 39 ವಿಕೆಟ್ ಪಡೆದಿದ್ದಾರೆ. ಹಾಗಾದರೆ ಶಮಿಯ ಬೌಲಿಂಗ್ ಸ್ಟೈಲ್ ಏನು?, ಶಮಿಯ ಖಾಸಗಿ ಜೀವನದಲ್ಲಿ ಆದ ಏರುಪೇರುಗಳೇನು ಎಂಬ ಬಗ್ಗೆ ವಿಸ್ತ್ರತ ವರದಿ ಇಲ್ಲಿದೆ.

ಇದನ್ನೂ ಓದಿ: ಭಾರತದ ಬೌಲರ್ಸ್‌ಗಳೇ ತಂಡದ ತಾಕತ್ತು –ಟೀಮ್ ಇಂಡಿಯಾ ಬೌಲರ್ಸ್‌ಗಳಿಂದ ಅದ್ಭುತ ಪ್ರದರ್ಶನ

ಜಗತ್ತು ಕಂಡ ದಿ ಬೆಸ್ಟ್​ ಸೀಮ್ ಬೌಲರ್​ ಅಂದ್ರೆ ಅದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಗ್ಲೇನ್ ಮೆಗ್ರಾಥ್ ಮತ್ತು ಇಂಗ್ಲೆಂಡ್​ನ ಜಿಮ್ಮಿ ಆ್ಯಂಡರ್ಸನ್. ಹಾಗೆಯೇ ಕಪಿಲ್​ದೇವ್ ಮತ್ತು ದಕ್ಷಿಣ ಆಫ್ರಿಕಾದ ಶಾನ್​ ಪೊಲಾಕ್ ಕೂಡ ಸೀಮ್​​ ಬೌಲಿಂಗ್​​ನಲ್ಲಿ ಎಕ್ಸ್​​ಪರ್ಟ್​ಗಳಾಗಿದ್ದರು. ಇಂಗ್ಲೆಂಡ್ ವಿರುದ್ಧದ ಮ್ಯಾಚ್​​ ವೇಳೆ ಮೋಹಮ್ಮದ್ ಶಮಿ ಸೀಮ್ ಬೌಲಿಂಗ್​​ನ್ನ ಫೇಸ್​​ ಮಾಡೋಕೆ ಬೆನ್​ಸ್ಟೋಕ್ಸ್​ ಯಾವ ರೀತಿ ಪರದಾಡಿದ್ದರು ಅನ್ನೋದನ್ನ ನೀವು ನೋಡಿರ್ತೀರಾ. ಬೆನ್​ಸ್ಟೋಕ್ಸ್​ ಎದುರಿಸಿದ ಎಲ್ಲಾ 10 ಬಾಲ್​ಗಳು ಕೂಡ ಬೀಟ್ ಆಗುತ್ತೆ. ಹಾಗಂತ ಈ ಸೀಮ್​ ಬಾಲ್​ ಎಸೆಯೋದು ಕೂಡ ಅಷ್ಟೊಂದು ಸುಲಭ ಅಲ್ಲ. ಹೀಗಾಗಿ ಸೀಮ್ ಬೌಲಿಂಗ್ ಅನ್ನೋದು ಒಂದು ಸ್ಪೆಷಲ್ ಟೆಕ್ನಿಕ್.. ಒಂದು ಕಲೆ.. ಈ ಕಲೆಯನ್ನ ಟೀಂ ಇಂಡಿಯಾದಲ್ಲಿ ಕರಗತ ಮಾಡಿಕೊಂಡಿರೋದು ಅಂದ್ರೆ ಒನ್​​ & ಓನ್ಲಿ ಮೊಹಮ್ಮದ್ ಶಮಿ.

ಸೀಮ್ ಬೌಲರ್ಸ್​ಗಳು ಯಾವಾಗಲೂ ಅತ್ಯಂತ ಲೈನ್ & ಲೆಂಥ್​ನಿಂದ ಬೌಲ್​ ಮಾಡ್ತಾರೆ. ಮೊಹಮ್ಮದ್ ಶಮಿಯ ಲೈನ್​ ಆ್ಯಂಡ್ ಲೆಂಥ್​ನ್ನ ನೀವು ಗಮನಿಸಿರ್ತೀರಾ. ಜೊತೆಗೆ ಸೀಮ್​ ಬೌಲರ್ಸ್​ಗಳ ಬೌಲಿಂಗ್​ ಶೈಲಿ ಸೀಮ್​ ಬೌಲಿಂಗ್​​ಗೆ ತಕ್ಕ ರೀತಿಯಲ್ಲೇ ಇರುತ್ತೆ. ಬಾಲ್ ಡೆಲಿವರಿ ಮಾಡುವಾಗ ಆಫ್ ಕಟ್ಟರ್, ಲೆಗ್ ಕಟ್ಟರ್ ಕೂಡ ಮಾಡ್ತಾರೆ. ಈ ಕಟ್ಟರ್ಸ್​ ಸೀಮ್​ ಬೌಲರ್ಸ್​​ಗಳ ಇನ್ನೊಂದು ಪ್ರಮುಖ ಅಸ್ತ್ರ. ಇವೆಲ್ಲದ್ರಲ್ಲೂ ನಮ್ಮ ಮೊಹಮ್ಮದ್ ಶಮಿ ಈಗ ಎಕ್ಸ್​​ಪರ್ಟ್ ಆಗಿದ್ದಾರೆ.

ಶಮಿ ಸ್ಪೆಷಲ್​ ಬೌಲರ್ ಆಗಿರೋದು ಹೇಗೆ?

ಮೊಹಮ್ಮದ್ ಶಮಿ ಸ್ಪೆಷಲ್ ಬೌಲರ್.. ಆದ್ರೆ ಕಳೆದ ಹಲವು ವರ್ಷಗಳಿಂದ ಶಮಿಯನ್ನ ಅಂಡರ್​ಎಸ್ಟಿಮೇಟ್ ಮಾಡಲಾಗಿತ್ತು. ಬೇಕಿದ್ರೆ ಈ ಬಾರಿಯ ವರ್ಲ್ಡ್​​ಕಪ್​ನ್ನೇ ತೆಗೆದುಕೊಳ್ಳಿ. ಹಾರ್ದಿಕ್​ ಪಾಂಡ್ಯಾಗೆ ಇಂಜುರಿಯಾಗಿದ್ರಿಂದ ಶಮಿಗೆ ನ್ಯೂಜಿಲ್ಯಾಂಡ್ ವಿರುದ್ಧ ಆಡೋಕೆ ಅವಕಾಶ ಸಿಕ್ಕಿತ್ತು. ಇಲ್ಲಾಂದ್ರೆ ಚಾನ್ಸ್ ಸಿಗೋದು ಡೌಟ್ ಆಗಿತ್ತು. ಶಮಿ ವಿಚಾರದಲ್ಲಿ ಹಲವು ವರ್ಷಗಳಿಂದ ಇದೇ ರೀತಿಯಾಗ್ತಿದೆ. ಒಬ್ಬ ವರ್ಲ್ಡ್​​ಕ್ಲಾಸ್​ ಲೆವೆಲ್​ ಬೌಲರ್​​ನ್ನ ನಾವು ಇದುವರೆಗೂ ಸರಿಯಾಗಿ ಯೂಸ್ ಮಾಡಿಲ್ಲ. ಕೊನೆಗೂ ಈಗ ಸರಿಯಾದ ಟೈಮಿಗೆ ಶಮಿ ವ್ಯಾಲ್ಯೂ ಏನು ಅನ್ನೋದು ಎಲ್ಲರಿಗೂ ಅರ್ಥವಾಗಿದೆ.

ಶಮಿ ತುಂಬಾ ಅಟ್ಯಾಕಿಂಗ್ ಬೌಲರ್. ಡಿಫರೆಂಟ್ ಆ್ಯಂಗಲ್​​ನಲ್ಲಿ ಬೌಲ್​ ಮಾಡುತ್ತಾರೆ. ಸದ್ಯ ಟೀಂ ಇಂಡಿಯಾದ ಅತ್ಯಂತ ಪರ್ಫೆಕ್ಟ್​ ಆಗಿ ಬೌನ್ಸರ್​ ಎಸೆಯುವ ಬೌಲರ್​ ಅಂದ್ರೆ ಅದು ಮೊಹಮ್ಮದ್ ಶಮಿ. ಅದ್ರಲ್ಲೂ ನ್ಯೂಬಾಲ್​​ನಲ್ಲಂತೂ ಶಮಿ ಸೀಮ್ ಬೌಲಿಂಗ್ ನೋಡೋದೆ ಚೆಂದ. ಮುಂದಿನ ಪಂದ್ಯಗಳಲ್ಲಿ ಬುಮ್ರಾ ಜೊತೆಗೆ ಮೊಹಮ್ಮದ್ ಶಮಿಯೇ ಓಪನಿಂಗ್ ಸ್ಪೆಲ್ ಮಾಡುವ ಎಲ್ಲಾ ಸಾಧ್ಯತೆಗಳೂ ಇದೆ.

ಇನ್ನು ಅತ್ಯಂತ ಇಂಟೆಲಿಜೆಂಟ್ ಬೌಲರ್. ಕೇವಲ ಬೌಲಿಂಗ್ ಮಾಡುವ ಸಾಮರ್ಥ್ಯ ಇದ್ರಷ್ಟೇ ಸಾಕಾಗಲ್ಲ. ಬುದ್ಧಿವಂತಿಕೆ ಕೂಡ ಮುಖ್ಯ. ಯಾವಾಗ ಯಾವ ಬ್ಯಾಟ್ಸ್​​​ಮನ್​​ ಯಾವ ರೀತಿ ಬೌಲಿಂಗ್​ ಮಾಡಬೇಕು. ಯಾವ ಕಂಡೀಷನ್​ನಲ್ಲಿ ಹೇಗೆ ಬೌಲಿಂಗ್ ಮಾಡಬೇಕು ಅನ್ನೋದು ಶಮಿಗೆ ಚೆನ್ನಾಗಿಯೇ ಗೊತ್ತಿದೆ. ಅದ್ರಲ್ಲೂ ವಿದೇಶಿ ಪಿಚ್​ಗಳಲ್ಲಂತೂ ಶಮಿ ಟಾಪ್​ ಕ್ಲಾಸ್ ಬೌಲಿಂಗ್ ಮಾಡಿದ್ದಾರೆ. ಶಮಿ ಯಾವತ್ತೂ ಒಬ್ಬ ವಿಕೆಟ್ ಟೇಕರ್ ಬೌಲರ್​ ಆಗಿಯೇ ಗುರುತಿಸಿಕೊಂಡಿದ್ದಾರೆ. ಕನ್ಸಿಸ್ಟೆಂಟ್ ಆಗಿ ಸ್ಟಂಪ್​ ಟು ಸ್ಟಂಪ್​ ಬೌಲಿಂಗ್​​ ಮಾಡಿ ಬ್ಯಾಟ್ಸ್​ಮನ್​ಗಳ ಮೇಲೆ ಒತ್ತಡ ಹೇರೋದು ಶಮಿಯ ಮತ್ತೊಂದು ಸ್ಕಿಲ್. ಬೌಲಿಂಗ್​​ ಶೈಲಿ ಕೂಡ ತುಂಬಾನೆ ಸಿಂಪಲ್. ರೋಹಿತ್​ ಶರ್ಮಾ ಬ್ಯಾಟಿಂಗ್​ ಮಾಡೀವಾಗ, ಸಿಕ್ಸರ್ ಹೊಡೆಯುವಾಗ ಈಸಿ ಬ್ಯಾಟಿಂಗ್ ಅಂತಾ ಅನ್ನಿಸಿಬಿಡುತ್ತಾ. ಇಷ್ಟೊಂದು ಸುಲಭವಾಗಿ ಬೌಂಡರಿ ಲೈನ್ ಕ್ಲೀಯರ್ ಮಾಡಬಹುದಾ ಅನ್ಸುತ್ತೆ. ಅದೇ ರೀತಿ ಶಮಿಯ ಬೌಲಿಂಗ್ ಸ್ಟೈಲ್​ ಕೂಡ ಸರಳ ಮತ್ತು ಇಂಪ್ರೆಸಿವ್ ಆಗಿದೆ.

3 ಬಾರಿ ಆತ್ಮಹತ್ಯೆ ಬಗ್ಗೆ ಯೋಚನೆ ಮಾಡಿದ್ದ ಶಮಿ!

ಮೊಹಮ್ಮದ್ ಶಮಿಯ ಈ ಸಕ್ಸಸ್ ಸ್ಟೋರಿ ಹಿಂದೆ ಒಂದು ಕರಾಳ ಕಥೆ ಕೂಡ ಇದೆ. ಇಂದು ಶಮಿ ಮೆಂಟಲಿ ತುಂಬಾ ಸ್ಟ್ರಾಂಗ್​ ಪರ್ಸನ್ ಆಗಿದ್ದಾರೆ. ಅದಕ್ಕೆ ಕಾರಣ ಶಮಿಯ ಖಾಸಗಿ ಜೀವನಲ್ಲಾಗಿರುವಂಥಾ ಒಂದಷ್ಟು ಬೆಳವಣಿಗೆಗಳು. ಶಮಿಯ ಪರ್ಸನಲ್​ ಲೈಫ್ ಒಂದು ದೊಡ್ಡ ಟ್ರ್ಯಾಜಿಡಿ. ಶಮಿ ವಿರುದ್ಧ ಪತ್ನಿ ಹಲವು ಗಂಭೀರ ಆರೋಪಗಳನ್ನ ಮಾಡಿದ್ರು. ದೌರ್ಜನ್ಯ, ಕಿರುಕುಳ ಸೇರಿದಂತೆ ಶಮಿ ವಿರುದ್ಧ ಗಂಭೀರ ಕೇಸ್​ಗಳನ್ನ ಹಾಕಿ ಕೋರ್ಟ್​ ಮೆಟ್ಟಿಲೇರಿದ್ದರು. ಈ ಎಲ್ಲಾ ಆರೋಪಗಳಿಂದಾಗಿ ಒಂದು ಹಂತದಲ್ಲಿ ಬಿಸಿಸಿಐ ಕೂಡ ಶಮಿಯ ಕಾಂಟ್ರ್ಯಾಕ್ಟ್​​ನ್ನ ತಡೆ ಹಿಡಿದಿತ್ತು. ಬಳಿಕ ಶಮಿ ವಿಚಾರಕ್ಕೆ ಸಂಬಂಧಿಸಿ ಬಿಸಿಸಿಐ ಕೂಡ ತನಿಖೆ ನಡೆಸಿದ್ದು ನಂತ್ರ ಕ್ಲೀನ್​ಚಿಟ್ ಕೊಟ್ಟಿದ್ದು. ಟೀಂ ಇಂಡಿಯಾ ವೇಗಿಯ ಬೆನ್ನಿಗೆ ಬಿಸಿಸಿಐ ನಿಂತುಕೊಂಡಿತ್ತು. ಆದ್ರೆ ಸಂಕಷ್ಟದ ಸಂದರ್ಭದಲ್ಲಿ ಮೊಹಮ್ಮದ್ ಶಮಿ ಮೂರು ಬಾರಿ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಯೋಚನೆ ಮಾಡಿದ್ರಂತೆ. 2020ರಲ್ಲಿ ಕೊರೊನಾ ಲಾಕ್ಡೌನ್ ಸಂದರ್ಭ ಟೀಂ ಇಂಡಿಯಾ ನಾಯಕ ರೋಹಿತ್​ ಶರ್ಮಾ ಅವರು ಶಮಿ ಜೊತೆಗೆ ಇನ್​​ಸ್ಟಾಗ್ರಾಂನಲ್ಲಿ ಲೈವ್ ಆಗಿ ವಿಡಿಯೋ ಚಾಟ್ ಮಾಡ್ತಾರೆ. ಈ ವೇಳೆ ರೋಹಿತ್ ಶರ್ಮಾ ಶಮಿಯ ಸಂಕಷ್ಟದ ದಿನಗಳ ಬಗ್ಗೆ ಒಂದಷ್ಟು ಕ್ವಶ್ಚನ್ಸ್ ಕೆಳ್ತಾರೆ. ಆಗ ಶಮಿ ತಾನು ಮೂರು ಬಾರಿ ಆತ್ಮಹತ್ಯೆಗೆ ಯೋಚಿಸಿರೋದಾಗೊ ಮೊದಲ ಬಾರಿಗೆ ಬಹಿರಂಗಪಡಿಸ್ತಾರೆ. ಆಗ ಕ್ಯಾಪ್ಟನ್ ಆಗಿದ್ದ ವಿರಾಟ್ ಕೊಹ್ಲಿ ಮತ್ತು ಎಲ್ಲಾ ಪ್ಲೇಯರ್ಸ್​​ಗಳು, ಬಿಸಿಸಿಐ ಕಂಪ್ಲೀಟ್ ಸಪೋರ್ಟ್​ ಮಾಡಿದ್ರಿಂದ ಸೂಸೈಡಲ್​ ಥಾಟ್ಸ್​​ನಿಂದ ಹೊರ ಬರೋಕೆ ಸಾಧ್ಯವಾಯ್ತು ಅಂತಾ ಶಮಿ ಹೇಳಿದ್ರು.

ಈ ಎಲ್ಲಾ ಬೆಳವಣಿಗೆಗಳ ಶಮಿ ಮೆಂಟಲಿ ತುಂಬಾ ಸ್ಟ್ರ್ಯಾಂಗ್​ ಆಗಿದ್ದಾರೆ. ಇದೇ ಕಾರಣಕ್ಕೆ ಕ್ರಿಕೆಟ್​ನಲ್ಲಿ ಶಮಿ ಕಮ್​ಬ್ಯಾಕ್ ಮಾಡೋಕೆ ಸಾಧ್ಯವಾಗಿರೋದು.

Sulekha