ಭಾರತದ ಬೌಲರ್ಸ್‌ಗಳೇ ತಂಡದ ತಾಕತ್ತು –ಟೀಮ್ ಇಂಡಿಯಾ ಬೌಲರ್ಸ್‌ಗಳಿಂದ ಅದ್ಭುತ ಪ್ರದರ್ಶನ
ಈ ಬಾರಿಯ ವರ್ಲ್ಡ್ಕಪ್ನಲ್ಲಿ ಟೀಮ್ ಇಂಡಿಯಾ ಬೌಲಿಂಗ್ ನಿಜವಾಗಲೂ ಸಖತ್ ಸ್ಟ್ರಾಂಗ್ ಆಗಿದೆ. ಬ್ಯಾಟ್ಸ್ಮನ್ಗಳಿಗಿಂತಲೂ ಬೌಲರ್ಸ್‌ಗಳೇ ಈ ಬಾರಿ ಹೆಚ್ಚು ಶೈನ್ ಆಗುತ್ತಿದ್ದಾರೆ. ಇರೋ ಅಷ್ಟೂ ಮಂದಿ ಬೌಲರ್ಸ್ಗಳು ಬೆಸ್ಟ್ ಪರ್ಫಾಮೆನ್ಸ್ ನೀಡುತ್ತಿದ್ದಾರೆ.
ಇದನ್ನೂ ಓದಿ: ವಿಶ್ವಕಪ್‌ನಲ್ಲಿ ಬ್ಯಾಟ್ ಬೀಸುತ್ತಿಲ್ಲ ಶ್ರೇಯಸ್ ಅಯ್ಯರ್ – ಮುಂದಿನ ಪಂದ್ಯಗಳಲ್ಲಿ ಟೀಮ್‌ನಲ್ಲಿ ಅವಕಾಶ ಉಳಿಸಿಕೊಳ್ತಾರಾ?
ಟೀಮ್ ಇಂಡಿಯಾ ಆಟಗಾರರು ಈ ಬಾರಿಯ ವಿಶ್ವಕಪ್ ಪಂದ್ಯಗಳಲ್ಲಿ ಗೆಲುವಿನ ನಾಗಾಲೋಟ ಮುಂದುವರೆಸಿದ್ದಾರೆ. ಅದರಲ್ಲೂ ಭಾರತದ ಬೌಲರ್‌ಗಳು ಈ ಬಾರಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಅದರಲ್ಲೂ ಜಸ್ಪ್ರಿತ್ ಬುಮ್ರಾ ಅಂತೂ ಎಲ್ಲಾ ಮ್ಯಾಚ್ಗಳಲ್ಲಿ ಪವರ್ಪ್ಲೇನಲ್ಲಿ ಸಖತ್ತಾಗಿಯೇ ಬೌಲ್ ಮಾಡಿದ್ದಾರೆ. ರನ್ ಬಿಟ್ಟು ಕೊಡೋದಿಲ್ಲ.. ವಿಕೆಟ್ ಕೂಡ ಪಡೆದಿದ್ದಾರೆ. ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾಗೆ ಬ್ರೇಕ್ ಥ್ರೂ ನೀಡಿದ್ದೇ ಜಸ್ಪ್ರಿತ್ ಬುಮ್ರಾ. ಮೊದಲ ಎರಡು ವಿಕೆಟ್ಗಳನ್ನ ಮೇಲಿಂದ ಮೇಲೆ ಉರುಳಿಸಿದರು. ಬಳಿಕ ಸೂಪರ್ಮ್ಯಾನ್ನ ಎಂಟ್ರಿಯಾಯ್ತು ನೋಡಿ.. ಮೊಹಮ್ಮದ್ ಶಮಿ.. ವಿರಾಟ್ ಕೊಹ್ಲಿಯ ಫೇವರೇಟ್ ವರ್ಡ್ ಬೆನ್ ಸ್ಟೋಕ್ಸ್ರನ್ನ ಬೌಲ್ಡ್ ಮಾಡಿದ ರೀತಿಯಂತೂ ಅದ್ಭುತವಾಗಿತ್ತು. ಫಸ್ಟ್ ಬಾಲ್ನ್ನ ಕಂಪ್ಲೀಟ್ ಔಟ್ ಸೈಡ್ ದಿ ಆಫ್ ಸ್ಟಂಪ್ಗೆ ಎಸೆದಿದ್ದರು. ಇನ್ನೇನು ವೈಡ್ ಬಾಲ್ ಆಗುವ ರೇಂಜಿನಲ್ಲಿ ಫಸ್ಟ್ ಬಾಲ್ ಹಾಕಿದರು. 2ನೇ ಬಾಲ್ ಇನ್ನೊಂದು ಸ್ವಲ್ಪ ಇನ್ಸೈಡ್ ಆಗಿ ಎಸೆದರು. 3ನೇ ಬಾಲ್ ಮತ್ತಷ್ಟು ಮತ್ತಷ್ಟು ಇನ್ಸೈಡ್.. 4ನೇ ಬಾಲ್ ಆಫ್ ಸ್ಟಂಪ್ ವಿಕೆಟ್ ಬಳಿಯೇ ಹಾದು ಹೋಗಿತ್ತು. 5ನೇ ಬಾಲ್ ಮತ್ತಷ್ಟು ಕ್ಲೋಸ್ ಆಗಿತ್ತು. 6ನೇ ಬಾಲ್ ಲೆಗ್ಸ್ಟಂಪ್ನಂತ ನುಗ್ಗಿ ಬರುತ್ತಲೇ ಬೆನ್ಸ್ಟೋಕ್ ಕ್ಲೀನ್ ಬೌಲ್ಡ್ ಆದರು. ಶಮಿಯ ಆರೂ ಬಾಲ್ಗಳನ್ನ ಕೂಡ ಜಡ್ಜ್ ಮಾಡುವಲ್ಲಿ ಬೆನ್ಸ್ಟೋಕ್ಸ್ ಕಂಪ್ಲೀಟ್ ಫೇಲ್ ಆಗಿದ್ದು ಸ್ಪಷ್ಟವಾಗಿ ಕಾಣಿಸುತ್ತಿತ್ತು. ಶಮಿ ಸ್ಟ್ರ್ಯಾಟಜಿಯನ್ನ ಸ್ಟೋಕ್ಸ್ಗೆ ರೀಡ್ ಮಾಡೋಕೆ ಸಾಧ್ಯವಾಗಿರಲಿಲ್ಲ. ಸದ್ಯ ವರ್ಲ್ಡ್ ಕ್ರಿಕೆಟ್ನಲ್ಲಿ ಬೆಸ್ಟ್ ಸೀಮ್ ಹೊಂದಿರುವ ಬೌಲರ್ ಅಂದ್ರೆ ಅದು ಮೊಹಮ್ಮದ್ ಶಮಿ. ವಿಶ್ವಕಪ್‌ನಲ್ಲಿ ಇದುವರೆಗೆ ಶಮಿ ಆಡಿರುವ 13 ಪಂದ್ಯಗಳಲ್ಲಿ 39 ವಿಕೆಟ್ಗಳನ್ನ ಪಡೆದಿದ್ದಾರೆ. ಅಂದ್ರೆ ಪ್ರತಿ ಮ್ಯಾಚ್ನಲ್ಲೂ ತಲಾ 3 ವಿಕೆಟ್ಗಳನ್ನ ಪಡೆದಿದ್ದಾರೆ. ನೆಕ್ಸ್ಟ್ ಲೆವೆಲ್ ಬೌಲಿಂಗ್ ಅಂದ್ರೆ ಇದೇ ನೋಡಿ. ಇಂಥಾ ವರ್ಲ್ಡ್ಕ್ಲಾಸ್ ಬೌಲರ್ನ್ನ ಮುಂದಿನ ಯಾವ ಮ್ಯಾಚ್ಗಳಲ್ಲೂ ಕೂಡ ಡ್ರಾಪ್ ಮಾಡೋಕೆ ಸಾಧ್ಯವೇ ಇಲ್ಲ. ಮೊಹಮ್ಮದ್ ಶಮಿ ಟೀಂ ಇಂಡಿಯಾ ಪಾಲಿಗೆ ನಿಜಕ್ಕೂ ಗಿಫ್ಟೆಡ್ ಬೌಲರ್ ಅನ್ನೋದ್ರಲ್ಲಿ ಯಾವುದೇ ಡೌಟ್ ಇಲ್ಲ. ಅಷ್ಟೇ ಯಾಕೆ, ವರ್ಲ್ಡ್ಕಪ್ನ ನೆಕ್ಸ್ಟ್ ಮ್ಯಾಚ್ಗಳಲ್ಲಿ ಜಸ್ಪ್ರಿತ್ ಬುಮ್ರಾ ಜೊತಗೆ ಮೊಹಮ್ಮದ್ ಶಮಿ ಓಪನಿಂಗ್ ಸ್ಪೆಲ್ ಹಾಕಿದ್ರೂ ಆಶ್ಚರ್ಯ ಇಲ್ಲ. ಬುಮ್ರಾ ಮ್ತತು ಶಮಿ.. ಇಬ್ರೂ ಲೀಥಲ್ ಬೌಲರ್ಸ್ ಓಪನಿಂಗ್ ಬೌಲಿಂಗ್ ಜೋಡಿ ಹೇಗಿರಬಹುದು ಅನ್ನೋದನ್ನ ಊಹಿಸ್ಕೊಳ್ಳಿ.
ಇನ್ನು ಮ್ಯಾಜಿಶೀಯನ್ ಕುಲ್ದೀಪ್ ಯಾದವ್ ಬಗ್ಗೆ ಹೇಳಲೇಬೇಕು. ಡೇಂಜರಸ್ ಜಾಸ್ ಬಟ್ಲರ್ನ್ನ ಔಟ್ ಮಾಡಿ ಮತ್ತೊಮ್ಮೆ ಮ್ಯಾಚ್ನ್ನೇ ಟರ್ನ್ ಮಾಡಿದ್ರು. ಜಾಸ್ ಬಟ್ಲರ್ ಅಂತೂ ಯಾವುದೇ ಹಂತದಲ್ಲಿ ಬೇಕಾದ್ರೂ ಪಂದ್ಯದ ದಿಕ್ಕೇ ಬದಲಾಯಿಸುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಬಟ್ಲರ್ರನ್ನ ಬೇಗನೆ ಔಟ್ ಮಾಡೋದು ತುಂಬಾನೆ ಅನಿವಾರ್ಯವಾಗಿತ್ತು. ಕುಲ್ದೀಪ್ ಯಾದವ್ ಎಸೆದ ಬಾಲ್ ಔಟ್ ಸೈಡ್ ದಿ ಆಫ್ ಸ್ಟಂಪ್ನತ್ತ ಪಿಚ್ ಆಗಿ ರೆಪ್ಪೆ ಮಿಟುಕಿಸುವಷ್ಟರಲ್ಲಿ ಇನ್ಸೈಡ್ಗೆ ಸ್ಪಿನ್ ಆಗಿ ಬಟ್ಲರ್ ಕ್ಲೀನ್ ಬೌಲ್ಡ್ ಆಗ್ತಾರೆ. ಈ ಬಾಲ್ 7.2 ಡಿಗ್ರಿಯಷ್ಟು ಟರ್ನ್ ಆಗಿತ್ತು. ಇದನ್ನ ಬಾಲ್ ಆಫ್ ದಿ ಟೂರ್ನಮೆಂಟ್ ಅಂತಾನೆ ಹೇಳಲಾಗ್ತಿದೆ. ಡೌಡೇ ಇಲ್ಲಿ.. ಇದು ಈ ಬಾರಿಯ ವರ್ಲ್ಡ್ಕಪ್ ದಿ ಬೆಸ್ಟ್ ಬಾಲ್.
ಇದು ಕುಲ್ದೀಪ್ ಯಾದವ್ ಬತ್ತಳಿಕೆಯಲ್ಲಿರುವ ಪ್ರಮುಖ ಅಸ್ತ್ರ. ಕೆಲ ವೆಪನ್ಗಳನ್ನ ಅಷ್ಟೊಂದು ಅಗತ್ಯ ಬಿದ್ದಾಗ ಮಾತ್ರ, ಟೈಮಿಂಗ್ ನೋಡ್ಕೊಂಡು ಪ್ರಯೋಗ ಮಾಡಬೇಕು. ಇದೊಂಥರಾ ಸರ್ಜಕಲ್ ಸ್ಟ್ರೈಕ್ ಇದ್ದ ಹಾಗೆ. ಪ್ರತಿ ಬಾರಿಯೂ ಸರ್ಜಿಕಲ್ ಸ್ಟ್ರೈಕ್ ಮಾಡೋಕೆ ಆಗಲ್ಲ. ಅಂಥಾ ಸಮಯ, ಸಂದರ್ಭ ಮಾತ್ರ ಸ್ಟ್ರೈಕ್ ಮಾಡಲಾಗುತ್ತೆ. ಅದೇ ರೀತಿ ಕುಲ್ದೀಪ್ ಯಾದವ್ 2ನೇ ಬಾರಿಗೆ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಾರೆ. ಈ ಹಿಂದೆ 2019ರ ವರ್ಲ್ಡ್ಕಪ್ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಬಾಬರ್ ಆಜಂರನ್ನ ಸೇಮ್ ಡೆಲಿವರಿ ಮೂಲಕ ಕುಲ್ದೀಪ್ ಕ್ಲೀನ್ ಬೌಲ್ಡ್ ಮಾಡಿದ್ರು. ಈಗ ಮತ್ತೊಮ್ಮೆ ಕುಲ್ದೀಪ್ ಸರ್ಜಿಕಲ್ ಸ್ಟ್ರೈಕ್ಗೆ ಜಾಸ್ ಬಟ್ಲರ್ ಬಲಿಯಾಗಿದ್ದಾರೆ.