ಸಾಗರ್ ಆಸ್ಪತ್ರೆಯಿಂದ ಬೃಹತ್ ಬೈಕಥಾನ್ – ಸ್ಟ್ರೋಕ್ ಕುರಿತು ಜಾಗೃತಿ ಕಾರ್ಯಕ್ರಮ
ವಿಶ್ವ ಪಾರ್ಶ್ವವಾಯು ದಿನದ ಅಂಗವಾಗಿ ಸಾಗರ್ ಹಾಸ್ಪಿಟಲ್ಸ್ ಬೃಹತ್ ಬೈಕ್ಥಾನ್ ಕಾರ್ಯಕ್ರಮ ಆಯೋಜಿಸಿತ್ತು. ಪಾರ್ಶ್ವವಾಯು ಜಾಗೃತಿ ಮತ್ತು ನಿರ್ವಹಣೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಸುಮಾರು 300 ಬೈಕರ್ಗಳು ರ್ಯಾಲಿಯಲ್ಲಿ ಭಾಗವಹಿಸಿದ್ದರು. “ರೈಡ್ ಫಾರ್ ಸ್ಟ್ರೋಕ್” ಬ್ಯಾನರ್ ಅಡಿಯಲ್ಲಿ ನಡೆದ ಈ ಕಾರ್ಯಕ್ರಮವು ಬಸವನಗುಡಿಯ ನ್ಯಾಷನಲ್ ಮೈದಾನದಲ್ಲಿ ಪ್ರಾರಂಭವಾಗಿ, ದಯಾನಂದ ಸಾಗರ್ ಫುಟ್ಬಾಲ್ ಮೈದಾನದಲ್ಲಿ ಅಂತ್ಯಗೊಂಡಿತು. ಪಾರ್ಶ್ವವಾಯುವಿನ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಈ ಬೈಕ್ಥಾನ್ ವಿಶಿಷ್ಟ ಗಮನ ಸೆಳೆಯುವ ಮೂಲಕ ಯಶಸ್ವಿಯಾಗಿದೆ.
ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಅವರು ನಗರದ ಬನಶಂಕರಿಯಲ್ಲಿರುವ ಸಾಗರ್ ಆಸ್ಪತ್ರೆಯಲ್ಲಿನ ಸ್ಟ್ರೋಕ್ ಆಂಬ್ಯುಲೆನ್ಸ್ ಮತ್ತು ಸ್ಟ್ರೋಕ್ ಕ್ಲಿನಿಕ್ ಸೌಲಭ್ಯಗಳಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಈ ವ್ಯವಸ್ಥೆಯು ಸ್ಟ್ರೋಕ್ ಸಮಸ್ಯೆ ಉಂಟಾದವರಿಗೆ ಚಿಕಿತ್ಸೆ ನೀಡುವಲ್ಲಿ ಮಹತ್ವದ ಪಾತ್ರ ವಹಿಸಲಿವೆ ಎಂದು ಹೇಳಿದರು.
“ಈ ಬೈಕಥಾನ್ ಜೀವಕ್ಕೆ ಕಂಟಕವಾಗಿ ಎರಗುವ ಪಾರ್ಶ್ವವಾಯು ಬಗ್ಗೆ ಜಾಗೃತಿ ಮೂಡಿಸುವ ಸಾಮೂಹಿಕ ಬದ್ಧತೆಯನ್ನು ಸೂಚಿಸುತ್ತದೆ. ಈ ನಿಟ್ಟಿನಲ್ಲಿ ಸಾಗರ್ ಆಸ್ಪತ್ರೆಯ ಕಾರ್ಯ ಶ್ಲಾಘನೀಯ. ಸ್ಟ್ರೋಕ್ ಆಂಬ್ಯುಲೆನ್ಸ್ ಮತ್ತು ಸ್ಟ್ರೋಕ್ ಕ್ಲಿನಿಕ್ ಅನ್ನು ಆಸ್ಪತ್ರೆ ಪ್ರಾರಂಭಿಸಿರುವುದು ಮಹತ್ವದ ಹೆಜ್ಜೆಯಾಗಿದೆ. ಈ ಭಾಗದಲ್ಲಿ ಸ್ಟ್ರೋಕ್ ಗೆ ತತ್ಕ್ಷಣದ ಚಿಕಿತ್ಸೆ ನೀಡುವಲ್ಲಿ ಈ ಸೌಲಭ್ಯವು ಸಕಾಲಿಕ ಮತ್ತು ಪರಿಣಾಮಕಾರಿ ಪಾತ್ರ ವಹಿಸಲಿದೆ ಎಂದರು.
ಇದನ್ನೂ ಓದಿ: ಬ್ಯಾಂಕ್ ಉದ್ಯೋಗಿಳಿಗೆ ಗುಡ್ ನ್ಯೂಸ್ – ಇನ್ನು ಮುಂದೆ ವಾರದಲ್ಲಿ 5 ದಿನ ಮಾತ್ರ ಕೆಲಸ!
ಇದೇ ಕಾರ್ಯಕ್ರಮದಲ್ಲಿ ಈಗಾಗಲೇ ಸ್ಟ್ರೋಕ್ ಗೆ ಒಳಗಾಗಿ ಅದರ ವಿರುದ್ಧ ಹೋರಾಡಿ ಗೆದ್ದವರು ತಮ್ಮ ಕಾಯಿಲೆಯ ವಿರುದ್ಧದ ಸಂಘರ್ಷದ ಸಂದರ್ಭವನ್ನ ಮೆಲುಕು ಹಾಕಿದರು. ಇದೊಂದು ಹೃದಯಸ್ಪರ್ಶಿ ಕಾರ್ಯಕ್ರಮವಾಗಿದ್ದು, ಸಾರ್ವಜನಿಕರಲ್ಲಿ ಸ್ಟ್ರೋಕ್ ಕುರಿತಂತೆ ಇರುವ ಅನಗತ್ಯ ಭಯ ಮತ್ತು ತಪ್ಪು ತಿಳುವಳಿಕೆಗಳನ್ನು ಹೋಗಲಾಡಿಸುವಲ್ಲಿ ನೆರವಾಯಿತು ಎಂದು ಹೇಳಿದರು.
ಸಾಗರ್ ಆಸ್ಪತ್ರೆಯ ಲೀಡ್ ಕನ್ಸಲ್ಟೆಂಟ್ ನ್ಯೂರಾಲಜಿಸ್ಟ್ ಮತ್ತು ಸ್ಟ್ರೋಕ್ ಮತ್ತು ಎಪಿಲೆಪ್ಸಿ ಸ್ಪೆಷಲಿಸ್ಟ್ ಡಾ.ಮಧುಸೂದನ್, ಕನ್ಸಲ್ಟೆಂಟ್ ನ್ಯೂರಾಲಜಿಸ್ಟ್ ಡಾ.ಎಸ್.ಸರವಣನ್ ಮತ್ತು ಸೀನಿಯರ್ ಕನ್ಸಲ್ಟೆಂಟ್ ನ್ಯೂರೋಸರ್ಜನ್ ಡಾ. ಅರುಣ್ ಎಲ್ ನಾಯಕ್ ಸ್ಟ್ರೋಕ್ ನಿರ್ವಹಣೆಯ ಕುರಿತಂತೆ ಮಹತ್ವದ ಮಾಹಿತಿಗಳನ್ನು ನೀಡಿದರು.
ಸಾಗರ್ ಗ್ರೂಪ್ ಆಫ್ ಹಾಸ್ಪಿಟಲ್ಸ್ನ ಅಧ್ಯಕ್ಷೆ ಶ್ರೀಮತಿ ಇಶಿಕಾ ಮುಲ್ತಾನಿ ಅವರು ಕಾರ್ಯಕ್ರಮದ ಯಶಸ್ಸಿಗೆ ಕೃತಜ್ಞತೆ ಸಲ್ಲಿಸಿದರು, ” ಒಂದು ಅರ್ಥಪೂರ್ಣ ಉದ್ದೇಶಕ್ಕಾಗಿ ಇಂಥದ್ದೊಂದು ಕಾರ್ಯಕ್ರಮ ಹಮ್ಮಿಕೊಂಡಿದ್ದಕ್ಕೆ ನಮಗೆ ತುಂಬಾ ಹೆಮ್ಮೆಯಿದೆ. ಸ್ಟ್ರೋಕ್ ಕುರಿತು ಅರಿವು ಮೂಡಿಸುವುದು ಮತ್ತು ಚಿಕಿತ್ಸೆ ನೀಡುವುದು ಎರಡು ಭಾರಿ ಸವಾಲಿನ ಕೆಲಸ. ಆದ್ರೆ ನಾವು ಇದನ್ನು ಯಶಸ್ವಿಯಾಗಿ ನಿರ್ವಹಿಸಲು ಬದ್ಧರಾಗಿದ್ದೇವೆ. ಸ್ಟ್ರೋಕ್ ಆಂಬ್ಯುಲೆನ್ಸ್ ಮತ್ತು ಸ್ಟ್ರೋಕ್ ಕ್ಲಿನಿಕ್ ಆ ನಿಟ್ಟಿನಲ್ಲಿ ರೋಗದ ವಿರುದ್ಧ ಹೋರಾಡುವುದಕ್ಕೆ ಸಮಾಜಕ್ಕೆ ನಮ್ಮ ಕಡೆಯಿಂದ ನೀಡುವ ವಾಗ್ದಾನವಾಗಿದೆ” ಎಂದರು.
ಡಾ. ಮಧುಸೂದನ್ ಮಾತನಾಡಿ, “ವೈದ್ಯ ವೃತ್ತಿಯಲ್ಲಿರುವ ನಾವು, ಪಾರ್ಶ್ವವಾಯು ರೋಗಿಗಳಿಗೆ ಉತ್ತಮ ಆರೈಕೆ ಮತ್ತು ಬೆಂಬಲವನ್ನು ನೀಡಲು ಸದಾ ಬದ್ಧರಾಗಿರುತ್ತೇವೆ. ಈ ಬೈಕಥಾನ್ನಂತಹ ಕಾರ್ಯಕ್ರಮಗಳು ಪಾರ್ಶ್ವವಾಯು ಮತ್ತು ಅದರ ನಿರ್ವಹಣೆಯ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ” ಎಂದು ಹೇಳಿದರು.
ಡಾ. ಅರುಣ್ ಎಲ್ ನಾಯಕ್ ಅವರು, “ಸ್ಟ್ರೋಕ್ ಅಂಗವೈಕಲ್ಯಕ್ಕೆ ಪ್ರಮುಖ ಕಾರಣವಾಗಿದೆ, ಮತ್ತು ಅದರ ನಿರ್ವಹಣೆಗೆ ಸಮಗ್ರ ವಿಧಾನದ ಅಗತ್ಯವಿದೆ. ಸಾಗರ್ ಆಸ್ಪತ್ರೆಗಳು ಪಾರ್ಶ್ವವಾಯು ಆರೈಕೆಯಲ್ಲಿ ಮುಂಚೂಣಿಯಲ್ಲಿವೆ ಮತ್ತು ಈ ಸೌಲಭ್ಯಗಳು ಗಮನಾರ್ಹ ಬದಲಾವಣೆಯನ್ನು ತರುತ್ತಿವೆ”. ಎಂದರು.
ಸಾಗರ್ ಆಸ್ಪತ್ರೆಯ ಬಗ್ಗೆ ಮಾಹಿತಿ
ಸಾಗರ್ ಹಾಸ್ಪಿಟಲ್ಸ್, ದಶಕಗಳಿಂದ ಅತ್ಯುತ್ತಮ ಸೇವೆ ನೀಡುವಲ್ಲಿ ಮುಂಚೂಣಿಯಲ್ಲಿದೆ. ರೋಗಿಗಳಿಗೆ ಗುಣಮಟ್ಟದ ಮತ್ತು ಕಾಳಜಿಯ ಆರೈಕೆಯನ್ನು ನೀಡಲು ಬದ್ಧವಾಗಿರುವ ಪ್ರಮುಖ ಆರೋಗ್ಯ ಸಂಸ್ಥೆಯಾಗಿದೆ. ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನ ಮತ್ತು ನುರಿತ ವೈದ್ಯರು ಹಾಗೂ ವೃತ್ತಿಪರ ಸಿಬ್ಬಂದಿಗಳ ತಂಡವನ್ನು ಹೊಂದಿದ್ದು, ಸಾಗರ್ ಆಸ್ಪತ್ರೆಗಳು ಸಮಾಜಕ್ಕೆ ಸಮಗ್ರ ಆರೋಗ್ಯ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.