ಬೆಂಗಳೂರಿನ ಗ್ಯಾರೇಜ್​ನಲ್ಲಿ ಅಗ್ನಿ ದುರಂತ –  19 ಬಸ್ ಜೊತೆಗೆ ಲಕ್ಷ-ಲಕ್ಷ ಹಣವೂ ಬೆಂಕಿಗಾಹುತಿ ಆಯ್ತಾ?

ಬೆಂಗಳೂರಿನ ಗ್ಯಾರೇಜ್​ನಲ್ಲಿ ಅಗ್ನಿ ದುರಂತ –  19 ಬಸ್ ಜೊತೆಗೆ ಲಕ್ಷ-ಲಕ್ಷ ಹಣವೂ ಬೆಂಕಿಗಾಹುತಿ ಆಯ್ತಾ?

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಪದೇ ಪದೇ ಬೆಂಕಿ ಅವಘಡಗಳು ನಡೆಯುತ್ತಲೇ ಇದೆ. ಸೋಮವಾರ ನಗರದ ಹೊಸಕೆರೆಹಳ್ಳಿಯ ವೀರಭದ್ರನಗರದಲ್ಲಿ ಎಸ್ ವಿ ಕೋಚ್ ವರ್ಕ್ಸ್ ಗ್ಯಾರೇಜ್​ನಲ್ಲಿ ವೆಲ್ಡಿಂಗ್ ಮಾಡುವಾಗ ಹಾರಿದ ಕಿಡಿಯೊಂದು ಭಾರೀ ಅನಾಹುತವನ್ನೇ ಸೃಷ್ಟಿಸಿದೆ. ನೋಡನೋಡುತ್ತಿದ್ದಂತೆ ಕ್ಷಣಾರ್ಧದಲ್ಲಿ 18 ಬಸ್ ಗಳು ಸುಟ್ಟು ಕರಕಲಾಗಿವೆ. ಸದ್ಯ ಈ ಘಟನೆ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಎಫ್​ಎಆರ್​(ಫೈರ್ ಆ್ಯಕ್ಸಿಡೆಂಟಲ್​ ರಿಪೋರ್ಟ್) ದಾಖಲಾಗಿದೆ.

ಸೋಮವಾರ ಮಧ್ಯಾಹ್ನ ಒಂದು ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನೋಡ ನೋಡುತ್ತಿದ್ದಂತೆ ಅಲ್ಲಿ ನಿಲ್ಲಿಸಿರುವ ಬಸ್‌ಗಳಿಗೆ ಒಂದೊಂದಾಗಿಯೇ ಬೆಂಕಿ ತಗುಲಿದೆ. ಸುಮಾರು 18 ಬಸ್‌ಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿವೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದರು. ಬಳಿಕ FSL ಅಧಿಕಾರಿಗಳು ಅವಶೇಷಗಳ ಸ್ಯಾಂಪಲ್​ ಸಂಗ್ರಹಿಸಿದ್ದರು. ಇದಲ್ಲದೆ ಅಗ್ನಿ ನಿಯಂತ್ರಣಕ್ಕೆ ಬರದಿದಕ್ಕೆ ಫೈರ್ ಡಿಪಾರ್ಟ್ಮೆಂಟ್ ಕಾರಣ ನೀಡಲಿದೆ. ಆರ್​ಟಿಒ ಇಲಾಖೆ ಕೂಡ ಬಸ್ ಗಳ ಕಂಡೀಷನ್ ಹೇಗಿತ್ತು ಅನ್ನೊ ಬಗ್ಗೆ ವರದಿ ನೀಡಲಿದೆ. ಮೂರು ಇಲಾಖೆಗಳ ವರದಿ ಕೈ ಸೇರಿದ ಬಳಿಕ ಪೊಲೀಸರು ಅಧಿಕೃತ ತನಿಖೆ ಆರಂಭಿಸಲಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ರಾಜ್ಯ ರಾಜಧಾನಿಯಲ್ಲಿ ಮತ್ತೊಂದು ಅಗ್ನಿ ಅವಘಡ – ನೋಡ ನೋಡುತ್ತಿದ್ದಂತೆ ಹೊತ್ತಿ ಉರಿದ ಖಾಸಗಿ ಬಸ್‌ಗಳು!

ಎಸ್ ವಿ ಕೋಚ್ ವರ್ಕ್ಸ್ ನ ಮಾಲೀಕ ಶಿವಮೊಗ್ಗ ಮೂಲದ ಶ್ರೀನಿವಾಸ್ ಎಂದು ತಿಳಿದುಬಂದಿದೆ. ಬಸ್ ಗೆ ಬೆಂಕಿ ಬಿದ್ದ ತಕ್ಷಣ ಶ್ರೀನಿವಾಸ್ ನಾಪತ್ತೆಯಾಗಿದ್ದರು. ಸದ್ಯ ಲೋ ಬಿಪಿಯಿಂದ ಆಸ್ಪತ್ರೆ ಸೇರಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಡಿಸ್ಚಾರ್ಜ್ ಬಳಿಕ ನೋಟಿಸ್ ಕೊಟ್ಟು ವಿವರಣೆ ಪಡೆಯಲು ಪೊಲೀಸರು ಮುಂದಾಗಿದ್ದಾರೆ. ಆಫೀಸ್ ನಲ್ಲಿ ಇಟ್ಟಿದ್ದ ಎಂಟು ಲಕ್ಷ ಹಣ ಸಹ ಬೆಂಕಿಗಾಹುತಿ ಅನ್ನೊ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಇದರ ಸತ್ಯಾಸತ್ಯತೆ ಬಗ್ಗೆ ಸಹ ಪೊಲೀಸರು ತನಿಖೆ ಆರಂಭಿಸಲಿದ್ದಾರೆ.

ಇನ್ನು ಮತ್ತೊಂದೆಡೆ ಅಗ್ನಿಶಾಮಕದಳದಿಂದ ಅಗ್ನಿಶಾಮಕ ಡಿಜಿ ಕಮಲ್ ಪಂತ್ ಗೆ ರಿಪೋರ್ಟ್ ಸಲ್ಲಿಸಲು ಸಿದ್ಧತೆ ನಡೆದಿದೆ. ಬೆಂಕಿ ತಗುಲಲು ಕಾರಣ ಏನು ಎನ್ನುವ ಬಗ್ಗೆ ಇಂದು ಕೂಡ ಪರಿಶೀಲನೆ ನಡೆಯಲಿದೆ. ಯಾವುದಾದ್ರೂ ಬಸ್ ನ ಡಿಸೆಲ್ ಅಥಾವ ಅಯಿಲ್ ಲೀಕ್ ಆಗಿ ಕಿಡಿ ಹೊತ್ತಿರುವ ಶಂಕೆ ವ್ಯಕ್ತವಾಗಿದೆ. ಅಥಾವ ವೆಲ್ಡಿಂಗ್ ಮಿಷನ್ ಕರೆಂಟ್ ಪ್ರೆಶರ್ ನಿಂದ ಸ್ವಿಚ್ ಬೋರ್ಡ್ ಸಿಡಿದಿದೆಯಾ ಅನ್ನೋ ಬಗ್ಗೆ ತನಿಖೆ ನಡೆಸಲಾಗುತ್ತೆ. ಮೀಟರ್ ಬೋರ್ಡ್ ನ ವೈರಿಂಗ್ ಕೂಡ ಪರಿಶೀಲನೆ ಮಾಡಲಾಗುತ್ತಿದೆ. ಗ್ಯಾರೇಜ್ ನ ಎಲ್ಲಾ ವಿದ್ಯುತ್ ಸಂಪರ್ಕದ ಪರಿಶೀಲನೆ ನಡೆಸಲಾಗುತ್ತಿದೆ.

Shwetha M