ದಿನಕ್ಕೆ ಒಂದು ಬಾರಿಯೂ ಕೂದಲು ಬಾಚೋದಿಲ್ವಾ? – ತಲೆಯಲ್ಲಿರುವ ಕೂದಲು ಖಾಲಿಯಾಗೋ ಮೊದಲು ಈ ವಿಚಾರ ತಿಳ್ಕೊಳಿ!
ನೀಳ ಕೇಶರಾಶಿ ಬೇಕು ಹೆಚ್ಚಿನ ಹೆಣ್ಮಕ್ಕಳು ಬಯಸುತ್ತಾರೆ. ಇದಕ್ಕೆ ಕೂದಲ ಆರೈಕೆ ಬಹಳ ಮುಖ್ಯ. ನಿಮ್ಮ ಕೂದಲನ್ನು ಬಲಿಷ್ಟವಾಗಿ, ದಪ್ಪವಾಗಿ ಮತ್ತು ಆರೋಗ್ಯಕರವಾಗಿಡಲು ನೀವು ಕೇವಲ ಶಾಂಪೂ ಮತ್ತು ಕಂಡೀಷನರ್ ಅನ್ನು ಬಳಸಿದ್ರೆ ಸಾಕಾಗೋದಿಲ್ಲ. ಕೂದಲಿಗೆ ಸಂಬಂಧಿಸಿದ ಪ್ರತಿಯೊಂದು ಸಣ್ಣ ವಿಷಯಕ್ಕೂ ಗಮನಹರಿಸೋದು ಮುಖ್ಯ.
ಕೆಲವರು ದಿನಕ್ಕೆ ಒಂದು ಬಾರಿ ಕೂಡ ಕೂದಲನ್ನು ಬಾಚಿಕೊಳ್ಳಲ್ಲ. ಹೀಗೆ ಮಾಡಿದ್ರೆ ಕೂದಲಿಗೆ ಹಾನಿಯುಂಟಾಗುತ್ತದೆ. ಕೂದಲುಗಳು ಜಾಸ್ತಿ ಸಿಕ್ಕು ಗೊಳ್ಳುತ್ತವೆ. ಕೂದಲು ಬಾಚದೇ ಇದ್ರೆ ಕೂದಲಿನ ಬುಡದಲ್ಲಿ ಸರಿಯಾಗಿ ರಕ್ತ ಸಂಚಾರ ಆಗೋದಿಲ್ಲ. ಇದ್ರಿಂದಾಗಿ ಕೂದಲು ಉದುರುವ ಸಾಧ್ಯತೆ ಇರುತ್ತೆ. ಇನ್ನು ಕೂದಲಿನ ಬುಡದಲ್ಲಿ ಡೆಡ್ ಸ್ಕಿನ್ ಇರುತ್ತೆ. ಇದ್ರಿಂದಾಗಿ ಹೊಸ ಕೂದಲು ಬೆಳೆಯಲು ತೊಂದರೆಯಾಗುತ್ತೆ.
ಇದನ್ನೂ ಓದಿ: ಕೂದಲು ಉದುರುವಿಕೆ ಸಮಸ್ಯೆಗೆ ಕಾರಣಗಳೇನು – ಹೇರ್ ಲಾಸ್ ಚಿಕಿತ್ಸೆ ವಿಧಾನ ಹೇಗೆ? ಪರಿಹಾರಗಳೇನು?
ದಿನಾ ಕೂದಲು ಬಾಚಿದ್ರೆ ಕೂದಲು ಆರೋಗ್ಯವಾಗಿರುತ್ತೆ. ಕೂದಲು ಬಾಚಿಕೊಳ್ಳುವುದರಿಂದ ಕೂದಲಿನಲ್ಲಿ ರಕ್ತ ಸಂಚಾರ ಹೆಚ್ಚುತ್ತದೆ. ಕೂದಲು ಗಟ್ಟಿಯಾಗುತ್ತದೆ ಮತ್ತು ಸಿಕ್ಕು ಇರುವುದಿಲ್ಲ. ಇದು ಕೂದಲಿನ ಹೊಳಪನ್ನು ಕೂಡ ಹೆಚ್ಚಿಸುತ್ತದೆ. ಕೂದಲು ಬಾಚುವುದರಿಂದ ಕೂದಲಿನಲ್ಲಿ ಸಂಗ್ರಹವಾಗಿರುವ ಧೂಳು ಮತ್ತು ಇತರ ಕೊಳಕು ನಿವಾರಣೆಯಾಗುತ್ತದೆ.ನಿಯಮಿತ ಬಾಚಣಿಗೆ ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಕೂದಲು ವೇಗವಾಗಿ ಬೆಳೆಯುತ್ತದೆ. ಹೀಗಾಗಿ ಕೂದಲು ಆರೋಗ್ಯಕರವಾಗಿರಲು, ದಿನಕ್ಕೆ ಕನಿಷ್ಠ ಎರಡು ಬಾರಿಯಾದರೂ ಬಾಚುವುದು ಅವಶ್ಯಕ.