ಮಾರ್ನಿಂಗ್ ಬ್ರೇಕ್ ಫಾಸ್ಟ್ ಮಿಸ್ ಮಾಡ್ತೀರಾ? – ಬೆಳಗ್ಗಿನ  ಉಪಹಾರ ತಿನ್ನದೇ ಇದ್ರೆ ತೂಕ ಇಳಿಯುತ್ತಾ?

ಮಾರ್ನಿಂಗ್ ಬ್ರೇಕ್ ಫಾಸ್ಟ್ ಮಿಸ್ ಮಾಡ್ತೀರಾ? – ಬೆಳಗ್ಗಿನ  ಉಪಹಾರ ತಿನ್ನದೇ ಇದ್ರೆ ತೂಕ ಇಳಿಯುತ್ತಾ?

ತೂಕ  ಹೆಚ್ಚಳ ಇಂದಿನ ದಿನಗಳಲ್ಲಿ ಹೆಚ್ಚಿನವರ ಸಮಸ್ಯೆಯಾಗಿದೆ. ಅನಾರೋಗ್ಯಕರ ಆಹಾರ ಕ್ರಮದಿಂದಾಗಿ ದೇಹದಲ್ಲಿ ಬೊಜ್ಜು ಬೆಳೆಯುತ್ತೆ. ಇದರಿಂದ ಪಾರಾಗಲು ಕೆಲವರು ದಿನನಿತ್ಯವೂ ಹಲವಾರು ವಿಧಾನಗಳನ್ನು ಅನುಸರಿಸುತ್ತಾರೆ. ಇವುಗಳಲ್ಲಿ ಬೆಳಗ್ಗಿನ ತಿಂಡಿ ತಿನ್ನದೇ ಇರೋದು. ಆದರೆ ಹೀಗೆ ಮಾಡಿದರೆ ಅದರಿಂದ ಹಲವಾರು ರೀತಿಯ ಅಡ್ಡಪರಿಣಾಮಗಳು ಕೂಡ ಕಾಣಿಸಿಕೊಳ್ಳಬಹುದು.

ಉಪಾಹಾರ ಬಿಟ್ಟು ಕ್ಯಾಲರಿ ಕಡಿಮೆ ಮಾಡಿಕೊಳ್ಳಲು ಹೆಚ್ಚಿನವರು ಪ್ರಯತ್ನಿಸ್ತಾರೆ. ಆದರೆ ಉಪಾಹಾರವು ದಿನದ ಪ್ರಮುಖ ಆಹಾರವೆಂದು ಪರಿಗಣಿಸಲಾಗಿದೆ ಮತ್ತು ಇದನ್ನು ಕಡೆಗಣಿಸಿದರೆ ಅದು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು.  ಸಂಶೋಧನೆಗಳು ಹೇಳುವ ಪ್ರಕಾರ ಉಪಾಹಾರ ತ್ಯಜಿಸುವಂತಹ ಜನರು ಹೃದಯದ ಕಾಯಿಲೆಗೆ ತುತ್ತಾಗುವುದು ಹೆಚ್ಚು. ದೀರ್ಘಕಾಲ ತನಕ ಉಪವಾಸದಿಂದ ಇದ್ದರೆ ಅದು ದೇಹಕ್ಕೆ ಮತ್ತಷ್ಟು ಒತ್ತಡ ಹೇರುವುದು ಮತ್ತು ದೇಹವು ಮತ್ತಷ್ಟು ಕಠಿಣವಾಗಿ ಕೆಲಸ ಮಾಡುವಂತೆ ಮಾಡುವುದು. ಅತಿಯಾದ ಕೆಲಸವು ಚಯಾಪಚಯದಲ್ಲಿ ವ್ಯತ್ಯಯ ಉಂಟು ಮಾಡಬಹುದು ಮತ್ತು ಹೃದಯಾಘಾತದ ಸಮಸ್ಯೆಗೆ ಕಾರಣವಾಗಬಹುದು.

ಇದನ್ನೂ ಓದಿ: ಉಸಿರಾಡುವ ಗಾಳಿಯೇ ಜೀವಕ್ಕೆ ಮಾರಕ! – ಕಳಪೆ ಮಟ್ಟಕ್ಕೆ ಇಳಿಯುತ್ತಿದೆ ರಾಜ್ಯ ರಾಜಧಾನಿ ವಾಯುಗುಣಮಟ್ಟ!

ತೂಕ ಇಳಿಸಿಕೊಳ್ಳಲು ಉಪಾಹಾರ ತ್ಯಜಿಸಿದರೆ ಆಗ ದೇಹದ ತೂಕವು ಮತ್ತಷ್ಟು ಹೆಚ್ಚಾಗುವಂತಹ ಸಾಧ್ಯತೆಗಳು ಇವೆ. ಯಾಕೆಂದರೆ ಇದು ನಿಮ್ಮ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ತೂಕ ಇಳಿಸುವ ಬದಲು ಮತ್ತಷ್ಟು ತೂಕ ಹೆಚ್ಚಾಗಬಹುದು. ಉಪಾಹಾರ ತ್ಯಜಿಸುವ ಕಾರಣದಿಂದಾಗಿ ದಿನವಿಡಿ ಅತಿಯಾಗಿ ತಿನ್ನಬಹುದು. ಇದರಿಂದ ದೇಹದಲ್ಲಿ ಕ್ಯಾಲರಿ ಅಂಶವು ಹೆಚ್ಚಾಗಬಹುದು.

ದೀರ್ಘ ಸಮಯದ ತನಕ ಹೊಟ್ಟೆಗೆ ಏನೂ ಬೀಳದೆ ಇರುವಂತಹ ಸಂದರ್ಭದಲ್ಲಿ ಕೋಪ ಬರುವುದು ಸಹಜ. ಬೆಳಗ್ಗಿನ ಉಪಾಹಾರ ತ್ಯಜಿಸಿದರೆ ಅದರಿಂದ ನೀವು ಮತ್ತಷ್ಟು ಕುಪಿತರಾಗುವಿರಿ. ನಿಮಗೆ ತುಂಬಾ ಕಿರಿಕಿರಿ ಮತ್ತು ತಲೆನೋವು ಕೂಡ ಕಾಣಿಸಿಕೊಳ್ಳಬಹುದು. ದೇಹದಲ್ಲಿ ಶಕ್ತಿ ಕುಂದುವ ಕಾರಣದಿಂದಾಗಿ ಮನಸ್ಥಿತಿಯು ಬದಲಾಗಬಹುದು. ಉಪಾಹಾರ ತ್ಯಜಿಸಿದರೆ ಆಗ ನೀವು ಮನಸ್ಥಿತಿಯನ್ನು ಸರಿಪಡಿಸಿಕೊಳ್ಳುವ ಸಲುವಾಗಿ ಹೆಚ್ಚು ಉತ್ಪಾದಕತೆ ಪ್ರದರ್ಶಿಸಬೇಕಾಗುತ್ತದೆ. ಇದರಿಂದ ಬೆಳಗ್ಗಿನ ಉಪಾಹಾರವು ಅತೀ ಅಗತ್ಯವಾಗಿ ಇರುವುದು.

Shwetha M