ಸತತ ಸೋಲಿನ ಬಳಿಕ ಭಾರತವನ್ನು ಎದುರಿಸಲಿದೆ ಇಂಗ್ಲೆಂಡ್ –ಚಾಂಪಿಯನ್ ಟೀಮ್ ಎಡವುತ್ತಿರುವುದು ಎಲ್ಲಿ?

ಸತತ ಸೋಲಿನ ಬಳಿಕ ಭಾರತವನ್ನು ಎದುರಿಸಲಿದೆ ಇಂಗ್ಲೆಂಡ್ –ಚಾಂಪಿಯನ್ ಟೀಮ್ ಎಡವುತ್ತಿರುವುದು ಎಲ್ಲಿ?

ಇಂಗ್ಲೆಂಡ್​​ನವರಿಗೆ ಈ ಬಾರಿ ಅದೇನ್ ಗರ ಬಡಿದಿದ್ಯೋ ಗೊತ್ತಿಲ್ಲ. ಚಾಂಪಿಯನ್​ ಟೀಂಗೆ ಇಂಥಾ ಪರಿಸ್ಥಿತಿ ಬರುತ್ತೆ ಅಂತಾ ಯಾರು ಕೂಡ ಅಂದುಕೊಂಡಿರಲಿಲ್ಲ. ವರ್ಲ್ಡ್​​ಕಪ್​ ಶುರುವಾಗುವ ಮುನ್ನ ಕ್ರಿಕೆಟ್ ಎಕ್ಸ್​​​ಪರ್ಟ್​​ಗಳೆಲ್ಲಾ ಇಂಗ್ಲೆಂಡ್​ ತಂಡ ಸೆಮಿಫೈನಲ್​ಗೆ ಗ್ಯಾರಂಟಿ ಅಂತಾನೆ ಭವಿಷ್ಯ ನುಡಿದಿದ್ರು. ಮಾಜಿ ಕ್ರಿಕೆಟರ್ಸ್ ಕೂಡ ಅದನ್ನೇ ಹೇಳಿದ್ದರು. ಆದರೆ, ಈ ಟೂರ್ನಿಯಲ್ಲಿ ಆಡಿರೋದನ್ನ ನೋಡಿದರೆ ಇವ್ರೇನಾ ಕಳೆದ ಬಾರಿಯ ವರ್ಲ್ಡ್​ಕಪ್ ವಿನ್ನರ್ಸ್​ ಅನ್ನೋ ಡೌಟ್ ಬರುವಂತಾಗಿದೆ. ಅಷ್ಟಕ್ಕೂ ಇಂಗ್ಲೆಂಡ್​ ಟೀಂ ಎಡವಿರೋದು ಎಲ್ಲಿ? ಎಂಬ ವಿವರ ಇಲ್ಲಿದೆ.

ಇದನ್ನೂ ಓದಿ: ಸತತ ಗೆಲುವು ಕಂಡಿರುವ ಟೀಂ ಇಂಡಿಯಾ ಸೀಕ್ರೆಟ್ ಏನು? – ಭಾರತ ತಂಡದ ಪ್ಲಸ್ ಮತ್ತು ಮೈನಸ್ ಯಾವುದು ಗೊತ್ತಾ?

ಚಾಂಪಿಯನ್ ಟೀಂ ಈ ಬಾರಿಯ ವರ್ಲ್ಡ್​​ಕಪ್​ನಿಂದ ಔಟ್ ಆಗಿಯಾಗಿದೆ. ಬ್ರಿಟೀಷ್ ಏರ್​ವೇಸ್​​ ಇನ್ನೇನು ರನ್​​ವೇಗೆ ಬಂದಿಳಿಯೋದಷ್ಟೇ ಬಾಕಿ. 2019ರ ವರ್ಲ್ಡ್​ಕಪ್​​ನ್ನ ಇಂಗ್ಲೆಂಡ್​​ ಗೆದ್ದಿದ್ದೇ ಬೈ ಲಕ್​ನಿಂದ. ಆದ್ರೆ ಈ ಬಾರಿಯ ವಿಶ್ವಕಪ್​ನಲ್ಲಿ ಡೇ ಒನ್​ನಿಂದಲೇ ಅದೃಷ್ಟ ಅನ್ನೋದು ಇಂಗ್ಲೆಂಡ್​​ಗೆ ಖುಲಾಯಿಸಲೇ ಇಲ್ಲ. ಆಡಿರೋ 5 ಮ್ಯಾಚ್​​ಗಳ ಪೈಕಿ 4ರಲ್ಲಿ ಇಂಗ್ಲೆಂಡ್ ಸೋತು ಸುಣ್ಣವಾಗಿದೆ. ಪಾಯಿಂಟ್ಸ್​ ಟೇಬಲ್​​ನಲ್ಲಿ ಕೊನೆಯಿಂದ 2ನೇ ಸ್ಥಾನದಲ್ಲಿದೆ. ವರ್ಲ್ಡ್​​ಕಪ್​ನಿಂದ ಇಂಗ್ಲೆಂಡ್ ಹೊರ ಬಿದ್ದಾಗಿದೆ. ಒಂದು ಚಾಂಪಿಯನ್​ ತಂಡವಾಗಿ ಇಂಗ್ಲೆಂಡ್​ ಪ್ಲೇಯರ್ಸ್​​ಗಳು ಆಡಿಯೇ ಇಲ್ಲ. ಬೆನ್​ ಸ್ಟೋಕ್ಸ್​ ಅಂತೂ ವಿಶ್ವಕಪ್​​ ಆಡೋಕೆ ಅಂತಾನೆ ನಿವೃತ್ತಿ ವಾಪಸ್ ಪಡೆದು ಟೀಂಗೆ ಕಮ್​ಬ್ಯಾಕ್​ ಮಾಡಿದ್ರು. ಪ್ರಮುಖ ಆಟಗಾರರರಾದ ಜೋ ರೋಟ್, ಬಟ್ಲರ್, ಜಾನಿ ಬ್ಯಾರ್​ಸ್ಟೋ, ಮೊಯಿನ್ ಆಲಿ ಇವರೆಲ್ಲರೂ ಸಡನ್​ ಫಾರ್ಮ್​ ಕಳೆದುಕೊಂಡಿದ್ದಾರೆ. ಇನ್ನು ಬೌಲಿಂಗ್​ ಡಿಪಾರ್ಟ್​​ಮೆಂಟ್ ಕೂಡ ಅಷ್ಟೇ. ಓವರ್​ನ ಆರೂ ಬಾಲ್​​ಗಳನ್ನ 150+ ಕಿಲೋ ಮೀಟರ್​ ವೇಗದಲ್ಲಿ ಎಸೆಯುವ ಮಾರ್ಕ್​​ ವುಡ್​ ಬೌಲಿಂಗ್ ಕೂಡ ಏನೇನೂ ವರ್ಕೌಟ್ ಆಗಿಲ್ಲ.

​ಇನ್ನು ಜಾಸ್ ಬಟ್ಲರ್ ಕ್ಯಾಪ್ಟನ್ಸಿ ಕೂಡ ಅಷ್ಟೊಂದು ಎಫೆಕ್ಟಿವ್ ಆಗಿಲ್ಲ ಎಂಬ ಮಾತು ಕೇಳಿಬರುತ್ತಿದೆ. ತಂಡದ ನಾಯಕನಾಗಿ ಖುದ್ದು ಬಟ್ಲರ್​ ಕೂಡ ಈ ಬಾರಿಯ ವರ್ಲ್ಡ್​​ಕಪ್​ನಲ್ಲಿ ಅಷ್ಟೊಂದು ಸ್ಕೋರ್ ಮಾಡಿಲ್ಲ. ಈಗಿನ ಪರಿಸ್ಥಿತಿ ನೋಡಿದರೆ, ವರ್ಲ್ಡ್​​ಕಪ್​ ಬಳಿಕ ಜಾಸ್ ಬಟ್ಲರ್ ಕ್ಯಾಪ್ಟನ್ಸಿಯನ್ನ ತೊರೆದರೂ ಆಶ್ಚರ್ಯ ಇಲ್ಲ. ಯಾಕಂದ್ರೆ ವರ್ಲ್ಡ್​​ಕಪ್​ನಂಥಾ ಟೂರ್ನಿಯಲ್ಲಿ ಈ ರೀತಿ ಹೀನಾಯವಾಗಿ ಸೋತರೆ, ಅದು ಯಾವುದೇ ಟೀಂನ ಕ್ಯಾಪ್ಟನ್​ಗೆ ಅದ್ರೂ ದೊಡ್ಡ ಮಟ್ಟದ ಹಿನ್ನಡೆಯಾಗುತ್ತೆ. ಇವೆಲ್ಲದರ ಜೊತೆಗೆ ಭಾರತದ ಪಿಚ್ ಕಂಡೀಷನ್​​ಗೆ ಇಂಗ್ಲೆಂಡ್​ ಪ್ಲೇಯರ್ಸ್​ ಇನ್ನೂ ಕೂಡ ಹೊಂದಿಕೊಂಡಂತೆ ಕಾಣ್ತಿಲ್ಲ.

 

Sulekha