ಫ್ಯಾಶನ್ ಡಿಸೈನರ್ ಪ್ರಸಾದ್ ಬಿದ್ದಪ್ಪನ ಪುತ್ರನಿಂದ ಮತ್ತೊಂದು ಯಡವಟ್ಟು! – ಕುಡಿದ ಮತ್ತಿನಲ್ಲಿ ಆಡಂ ಬಿದ್ದಪ್ಪ ರಂಪಾಟ!
ಬೆಂಗಳೂರು: ಫ್ಯಾಶನ್ ಡಿಸೈನರ್ ಪ್ರಸಾದ್ ಬಿದ್ದಪ್ಪನ ಪುತ್ರ ಆಡಂ ಬಿದ್ದಪ್ಪ ಈಗ ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದಾರೆ. ಆಡಂ ಬಿದ್ದಪ್ಪ ಕುಡಿದ ಮತ್ತಿನಲ್ಲಿ ವೇಗವಾಗಿ ಕಾರು ಚಲಾಯಿಸಿದ್ದಾರೆ. ಅಷ್ಟೇ ಅಲ್ಲದೇ ಹಾರ್ನ್ ಮಾಡಿದ ವ್ಯಕ್ತಿಯ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಯಲಹಂಕದಲ್ಲಿ ನಡೆದಿದೆ.
ಕಳೆದ ವರ್ಷ ಕನ್ನಡ ಚಿತ್ರನಟಿಯೊಬ್ಬರಿಗೆ ಅಶ್ಲೀಲ ಸಂದೇಶಗಳನ್ನು ಕಳಿಸಿದ್ದು ಸುದ್ದಿಯಾಗಿತ್ತು. ಆಕೆ ಕೇಸು ದಾಖಲಿಸಿದ್ದು, ಪೊಲೀಸರು ಆಡಂನನ್ನು ಬಂಧಿಸಿದ್ದರು. ನಂತರ ಈತ ಜಾಮೀನಿನ ಮೇಲೆ ಹೊರಗೆ ಬಂದಿದ್ದರು. ಇದೀಗ ಕುಡಿದ ಮತ್ತಿನಲ್ಲಿ ಆಡಂ ವೇಗವಾಗಿ ಕಾರು ಚಲಾಯಿಸಿ ಪೊಲೀಸರ ಕೈಗೆ ಬಿದ್ದಿದ್ದಾರೆ. ಈ ವೇಳೆ ಯಲಹಂಕ ಸಂಚಾರಿ ಪೊಲೀಸರ ಜೊತೆಗೆ ಆಡಂ ವಾಗ್ವಾದ ಮಾಡಿದ್ದಾನೆ. ಬಳಿಕ ಅವಿವಾ ಬಿದ್ದಪ್ಪಗೆ ಕರೆ ಮಾಡಿ ಪೊಲೀಸರೊಂದಿಗೆ ಮಾತಾಡುವಂತೆ ಹೇಳಿದ್ದಾನೆ. ಈ ವೇಳೆ ಪೊಲೀಸರು ನೀನು ಯಾರಿಗೆ ಬೇಕಾದರೂ ಕರೆ ಮಾಡು ಎಂದು ಹೇಳಿ ಆತನನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಎರಡನೇ ತರಗತಿಯ ಪುಟಾಣಿ ಮೇಲೆ ಆ್ಯಸಿಡ್ ಎರಚಿದ ಮುಖ್ಯ ಶಿಕ್ಷಕ – ಇದೇನಾ ಗುರುಗಳೇ ನೀವು ಕಲಿಸುವ ಶಿಸ್ತಿನ ಪಾಠ?
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀ ಪ್ರಸಾದ್, ಆಡಂ ಕುಡಿದ ಮತ್ತಿನಲ್ಲಿ ಪೊಲೀಸರು ಹಾಗೂ ವ್ಯಕ್ತಿಯೊಬ್ಬರ ಜೊತೆ ಗಲಾಟೆ ಮಾಡಿದ್ದಾನೆ. ನಾನು ಪ್ರಭಾವಿ ಆಗಿದ್ದೇನೆ ನನ್ನನ್ನೇ ಪ್ರಶ್ನೆ ಮಾಡುತ್ತೀರಾ ಎಂದು ಬೆದರಿಕೆ ಹಾಕಿದ್ದಾನೆ. ಯಲಹಂಕ ಸಂಚಾರಿ ಪೊಲೀಸರು ಆತನ ಕಾರನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಮೆಡಿಕಲ್ ಟೆಸ್ಟ್ ಮಾಡಿಸಿ ಆತನನ್ನು ಬಿಟ್ಟು ಕಳುಹಿಸಿದ್ದಾರೆ. ಈ ವಿಚಾರವಾಗಿ ರಾಹುಲ್ ಎಂಬವರು ದೂರು ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಈ ಸಂಬಂಧ ಕಾರು ಚಾಲಕ ರಾಹುಲ್, ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.