ಸತತ ಗೆಲುವಿನ ಬಳಿಕ ಟೀಮ್ ಇಂಡಿಯಾ ರಿಲ್ಯಾಕ್ಸ್ ಮೂಡ್ – ಧರ್ಮಶಾಲಾದ ಪ್ರಕೃತಿ ಜೊತೆ ಕೋಚ್ ರಾಹುಲ್ ದ್ರಾವಿಡ್ ಟೀಮ್ ಜಾಲಿ.. ಜಾಲಿ..

ಸತತ ಗೆಲುವಿನ ಬಳಿಕ ಟೀಮ್ ಇಂಡಿಯಾ ರಿಲ್ಯಾಕ್ಸ್ ಮೂಡ್ – ಧರ್ಮಶಾಲಾದ ಪ್ರಕೃತಿ ಜೊತೆ ಕೋಚ್ ರಾಹುಲ್ ದ್ರಾವಿಡ್ ಟೀಮ್ ಜಾಲಿ.. ಜಾಲಿ..

ನ್ಯೂಜಿಲ್ಯಾಂಡ್​ ವಿರುದ್ಧದ ಗೆಲುವಿನ ಬಳಿಕ ಟೀಮ್ ಇಂಡಿಯಾ ರಿಲ್ಯಾಕ್ಸ್ ಮೂಡಿನಲ್ಲಿದೆ. ಇಂಗ್ಲೆಂಡ್​​ ಪಂದ್ಯಕ್ಕೂ ಮುನ್ನ ಒಟ್ಟು 7 ದಿನಗಳ ಗ್ಯಾಪ್ ನೀಡಲಾಗಿದೆ. ಹೀಗಾಗಿ ಟೀಂ ಇಂಡಿಯಾ ಪ್ಲೇಯರ್ಸ್​ಗಳೆಲ್ಲಾ ಈಗ ತಮ್ಮ ಕುಟುಂಬಸ್ಥರ ಜೊತೆಗೆ ಕಾಲ ಕಳೀತಿದ್ದಾರೆ. ಇನ್ನು ಕೆಲವರು, ಟ್ರೆಕ್ಕಿಂಗ್ ಮೂಲಕ ಧರ್ಮಶಾಲಾದ ಪ್ರಕೃತಿಯನ್ನು ಎಂಜಾಯ್ ಮಾಡುವ ಮೂಲಕ ರಿಲ್ಯಾಕ್ಸ್ ಆಗಿದ್ದಾರೆ.

ಇದನ್ನೂ ಓದಿ: ಟೀಮ್ ಇಂಡಿಯಾ ಆಟಗಾರರ ಭಾರತ ಪರ್ಯಟನೆ – ಸ್ಟೇಡಿಯಂಗಳು ಫುಲ್ ಹೌಸ್ ಆಗಲು ಕ್ರಿಕೆಟರ್ಸ್ ಟೂರ್..!

ಐಸಿಸಿ ಏಕದಿನ ವಿಶ್ವಕಪ್​ನಲ್ಲಿ ನ್ಯೂಝಿಲೆಂಡ್ ವಿರುದ್ಧದ ಪಂದ್ಯ ಮುಗಿದ ಬಳಿಕ ಟೀಮ್ ಇಂಡಿಯಾ ಆಟಗಾರರು ವಿಶ್ರಾಂತಿಯ ಮೊರೆ ಹೋಗಿದ್ದರು. ಸ್ವಲ್ಪ ವಿಶ್ರಾಂತಿ ಪಡೆದ ನಂತರ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಜೊತೆಗೆ ಭಾರತ ತಂಡವು ಮುಂಬರುವ ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕಾಗಿ ಲಕ್ನೋಗೆ ತಲುಪಿದೆ. ವಿರಾಟ್ ಕೊಹ್ಲಿ ಅಕ್ಟೋಬರ್ 25 (ಬುಧವಾರ) ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ವಿಮಾನದೊಳಗೆ ಕುಳಿತಿರುವ ಫೋಟೋವನ್ನು ಅಪ್‌ಲೋಡ್ ಮಾಡಿದ್ದಾರೆ. ಇದಕ್ಕೂ ಮೊದಲು ಟೀಮ್ ಇಂಡಿಯಾ ಆಟಗಾರರು ರಿಲ್ಯಾಕ್ಸ್ ಆಗಲು ಪ್ರಕೃತಿ ನಡುವೆ ಸಮಯ ಕಳೆದಿದ್ದಾರೆ. ಟೀಮ್ ಇಂಡಿಯಾ ಸಿಬ್ಬಂದಿ ಟ್ರೆಕ್ಕಿಂಗ್ ಮೂಲಕ ಧರ್ಮಶಾಲಾದ ಪ್ರಕೃತಿಯನ್ನು ಎಂಜಾಯ್ ಮಾಡಿದ್ದಾರೆ. ಈ ಟ್ರೆಕ್ಕಿಂಗ್ ವಿಡಿಯೋವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಅಧಿಕೃತ Instagram ಖಾತೆಯಲ್ಲಿ ಹಂಚಿಕೊಂಡಿದೆ. ವೀಡಿಯೊದಲ್ಲಿ, ರಾಹುಲ್ ದ್ರಾವಿಡ್ ಮತ್ತು ಉಳಿದ ಕೋಚಿಂಗ್ ಸಿಬ್ಬಂದಿ ಧರ್ಮಶಾಲಾದಲ್ಲಿ ಚಾರಣಕ್ಕೆ ಹೋಗುತ್ತಿರುವುದನ್ನು ಕಾಣಬಹುದು. ಇದೇ ವೇಳೆ ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡ ಮಾತನಾಡಿದ್ದು, ಇಲ್ಲಿನ ಪ್ರಕೃತಿ ರಮಣೀಯ ದೃಶ್ಯಾವಳಿ ಅದ್ಭುತವಾಗಿದೆ ಎಂದರು. ಪರ್ವತಗಳನ್ನು ಹತ್ತುವುದು ತುಂಬಾ ಕಷ್ಟ. ಟ್ರೈಂಡ್ ಟ್ರೆಕ್ ತುಂಬಾ ಸವಾಲಿನದು. ಪರ್ವತಾರೋಹಣ ಸಮಯದಲ್ಲಿ ಬಂಡೆಗಳ ಮೇಲೆ ನಡೆಯುವುದು ಅಪಾಯಗಳಿಂದ ಕೂಡಿದೆ. ಹಾಗಾಗಿ ನಮ್ಮ ಆಟಗಾರರನ್ನು ಇಲ್ಲಿಗೆ ಕರೆತರಲು ಸಾಧ್ಯವಾಗಲಿಲ್ಲ. ಆದರೆ, ಅವರೆಲ್ಲರೂ ವಿಶ್ರಾಂತಿ ಪಡೆಯಬೇಕಾದಾಗ ಇಲ್ಲಿಗೆ ಬಂದು ಇಲ್ಲಿನ ಸುಂದರ ದೃಶ್ಯಾವಳಿಗಳನ್ನು ಕಣ್ತುಂಬಿಕೊಳ್ಳಬೇಕೆಂದು ನಾನು ಬಯಸುತ್ತೇನೆ,” ಎಂದರು. ಮೆಕ್ಲಿಯೋಡ್‌ಗಂಜ್‌ನಲ್ಲಿರುವ ಗ್ಲುನಿಂದ ಈ ಚಾರಣವನ್ನು ಆರಂಭಿಸಿದ್ದೇವೆ ಎಂದು ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಹೇಳಿದ್ದಾರೆ. ಕೊನೆಯ ಚಾರಣ ಸ್ವಲ್ಪ ಕಷ್ಟಕರವಾಗಿತ್ತು. ಆ ಸಮಯದಲ್ಲಿ ಅರ್ಧ ಗಂಟೆ ತುಂಬಾ ಚಾಲೆಂಜಿಂಗ್ ಆಗಿತ್ತು. ಆದರೆ ಅಂತಿಮವಾಗಿ ಪ್ರಕೃತಿಯ ಸೌಂದರ್ಯವನ್ನು ನೋಡಿದಾಗ ಆಯಾಸವೆಲ್ಲ ಮಾಯವಾಗುತ್ತದೆ ಎಂದರು.

Sulekha