ಮುಂದಿನ 12 ಗಂಟೆಗಳ ಅವಧಿಯಲ್ಲಿ ಮತ್ತಷ್ಟು ದುರ್ಬಲಗೊಳ್ಳಲಿದೆ ಹಮೂನ್ ಚಂಡಮಾರುತ – ಐಎಂಡಿ

ನವದೆಹಲಿ: ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ ಹಮೂನ್ ಚಂಡಮಾರುತ ಇದೀಗ ದುರ್ಬಲಗೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ ಹಮೂನ್ ಚಂಡಮಾರುತ ಕಳೆದ ಎರಡ್ಮೂರು ದಿನಗಳಿಂದ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಈ ವೇಳೆ ಗಾಳಿಯ ವೇಗ ಗಂಟೆಗೆ 130ರಿಂದ 145 ಕಿ.ಮೀ ವೇಗದಲ್ಲಿತ್ತು. ಈಗ ಗಾಳಿಯ ವೇಗ ಗಂಟೆಗೆ 70 ಕಿ.ಮೀ.ಗೆ ಇಳಿಕೆ ಕಂಡಿದೆ. ಕರಾವಳಿ ಪ್ರದೇಶವನ್ನು ಅಪ್ಪಳಿಸುವ ವೇಳೆಗೆ ಚಂಡಮಾರುತದ ತೀವ್ರತೆ ದುರ್ಬಲಗೊಂಡಿದೆ ಎಂದು ಐಎಂಡಿ ಮಾಹಿತಿ ನೀಡಿದೆ.
ಇದನ್ನೂ ಓದಿ: ಭಾರತೀಯರಲ್ಲಿ ಹೆಚ್ಚಾಯ್ತು ವಿದೇಶ ಪ್ರೇಮ! – ವಿದೇಶಿ ಪೌರತ್ವ ಪಡೆದವರ ಪೈಕಿ ಭಾರತೀಯರೇ ಹೆಚ್ಚು!
ಇನ್ನು ಹಮೂನ್ ಚಂಡಮಾರುತದಿಂದಾಗಿ ಭಾರತದ ಕರಾವಳಿ ಪ್ರದೇಶಗಳಿಗೆ ಹಾನಿ ಉಂಟಾಗುವ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿತ್ತು. ಆದರೆ ಚಂಡಮಾರುತದಿಂದಾಗಿ ಯಾವುದೇ ಹಾನಿ ಉಂಟಾಗಿಲ್ಲ. ಯಾವುದೇ ಜೀವಹಾನಿಯೂ ಆಗಿಲ್ಲ. ಚಂಡಮಾರುತದ ಎಫೆಕ್ಟ್‌ನಿಂದಾಗಿ ತ್ರಿಪುರಾ, ಮಿಜೋರಾಂದಲ್ಲಿ ಮಳೆಯಾಗಲಿದೆ. ಮುಂದಿನ 12 ತಾಸುಗಳಲ್ಲಿ ಚಂಡಮಾರುತ ಮತ್ತಷ್ಟು ದುರ್ಬಲಗೊಂಡು ಉತ್ತರ-ಈಶಾನ್ಯದತ್ತ ಚಲಿಸಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ.