ಬಿಗ್‌ಬಾಸ್ ಮನೆಯಲ್ಲಿ ಅಂತರಂಗ ಬಿಚ್ಚಿಟ್ಟ ಡ್ರೋನ್ ಪ್ರತಾಪ್ – ನೋವಲ್ಲೇ ಬದುಕುತ್ತಿದ್ದ ಹುಡುಗನ ಮಾತಿಗೆ ನಟಿ ತಾರಾ ಕಣ್ಣೀರು

ಬಿಗ್‌ಬಾಸ್ ಮನೆಯಲ್ಲಿ ಅಂತರಂಗ ಬಿಚ್ಚಿಟ್ಟ ಡ್ರೋನ್ ಪ್ರತಾಪ್ – ನೋವಲ್ಲೇ ಬದುಕುತ್ತಿದ್ದ ಹುಡುಗನ ಮಾತಿಗೆ ನಟಿ ತಾರಾ ಕಣ್ಣೀರು

ಡ್ರೋನ್ ಪ್ರತಾಪ್. ಇವರು ತಪ್ಪೇ ಮಾಡಿರಬಹುದು. ಆದರೆ, ತಿದ್ದಿ ತೀಡುವ ಕೆಲಸ ಸಮಾಜದಿಂದಲೂ ಆಗಬೇಕಿತ್ತು. ಆದರೆ, ಆಗಿದ್ದೇ ಬೇರೆ. ಮೀಡಿಯಾ, ಸೋಶಿಯಲ್ ಮೀಡಿಯಾ ಎಲ್ಲರೂ ಸೇರಿ ಈ ಹುಡುಗನನ್ನು ಗೇಲಿ ಮಾಡಿದರು. ತಪ್ಪು ಮಾಡಿದ್ದರೆ ಜೈಲಿಗೆ ಹಾಕಿ. ಈ ರೀತಿ ಮಾನಸಿಕ ಹಿಂಸೆ ಕೊಡಬೇಡಿ ಎಂದು ಪದೇ ಪದೇ ಡ್ರೋನ್ ಪ್ರತಾಪ್ ಮನವಿ ಮಾಡಿಕೊಳ್ಳುತ್ತಲೇ ಇದ್ದರು. ಆದರೆ, ಟೀಕೆ ಮಾಡುವವರು ಕಡಿಮೆಯಿರಲಿಲ್ಲ. ಅಷ್ಟೇ ಯಾಕೆ, ಬಿಗ್‌ಬಾಸ್ ಮನೆಗೆ ಹೋದರೆ ಅಲ್ಲಿರುವ ಕೆಲ ಸ್ಪರ್ಧಿಗಳಿಗೂ ಈತನೇ ಟಾರ್ಗೆಟ್. ಇದೀಗ ಡ್ರೋನ್ ಪ್ರತಾಪ್ ನ ಅಂತರಂಗದ ಮಾತನ್ನು ನಟಿ ತಾರಾ ಎಲ್ಲರಿಗೂ ಗೊತ್ತಾಗುವಂತೆ ಮಾಡಿದ್ದಾರೆ. ಈ ಭಾವುಕ ಕ್ಷಣವನ್ನು ನೋಡಿದ ವೀಕ್ಷಕರು ಕೂಡಾ ಭಾವುಕರಾಗಿದ್ದಾರೆ.

ಇದನ್ನೂ ಓದಿ: ಬಿಗ್‌ಬಾಸ್ ಮನೆಗೆ ನಟಿ ತಾರಾ ಎಂಟ್ರಿ – ಸ್ಪರ್ಧಿಗಳಿಗೆ ಒಂದೆಡೆ ಶಾಕಿಂಗ್, ಮತ್ತೊಂದೆಡೆ ಸರ್‌ಪ್ರೈಸ್

ಡ್ರೋನ್ ಪ್ರತಾಪ್ ಅವರನ್ನು ಕರೆದು ಕೂರಿಸಿ ತಾರಾ ಮಾತನಾಡಿದರು. ‘ನಿನಗೆ ಒಳ್ಳೆಯ ಅವಕಾಶ ಸಿಕ್ಕಿದೆ. ಜನರು ನಿನ್ನನ್ನು ಪ್ರೀತಿ ಮಾಡುತ್ತಿದ್ದಾರೆ. ನೀನು ಮಾನಸಿಕವಾಗಿ ಎಷ್ಟು ಟಾರ್ಚರ್ ಅನುಭವಿಸಿದ್ದೀಯಾ ಅನ್ನೋದು ನನಗೆ ಗೊತ್ತು. ನೀನು ತಪ್ಪು ಮಾಡಿರಬಹುದು. ಈಗ ಒಂದು ಅವಕಾಶ ಸಿಕ್ಕಿದೆ. ಅಮ್ಮ ಅಂದ್ಕೊಂಡು ನನ್ನ ಬಳಿ ಹೇಳು’ ಎಂದರು ತಾರಾ. ಆಗ ಪ್ರತಾಪ್ ಕಣ್ಣಲ್ಲಿ ನೀರು ಬಂತು. ವಾಶ್ರೂಂ ಹೋಗೋಕೆ ಪ್ರಯತ್ನಿಸಿದರೂ ತಾರಾ ಅವಕಾಶ ಕೊಡಲಿಲ್ಲ. ‘ನಿನಗೇ ಇಷ್ಟು ನೋವಾಗಿದೆ ಎಂದರೆ ಹೆತ್ತವರಿಗೆ ಎಷ್ಟು ನೋವಾಗಿರಬೇಡ ಹೇಳು’ ಎಂದರು ತಾರಾ. ಈ ವೇಳೆ ಪ್ರತಾಪ್ ಅವರು ಮನಸ್ಸಿನ ಮಾತನ್ನು ತೆರೆದಿಟ್ಟರು. ‘ಅವರು ಎಷ್ಟು ನೋವು ಅನುಭವಿಸಿದ್ದಾರೆ ಅನ್ನೋದು ಗೊತ್ತು. ನಿನ್ನ ಮಗನನನ್ನು ಯಾಕೆ ಉಳಿಸಿದ್ದಿಯಾ. ಏನಾದರೂ ಹಾಕಿ ಸಾಯಿಸಿಬಿಡು ಎಂದು ಹೇಳಿದ್ದರು. ನಾನು ದುಡ್ಡು ಮಾಡಿದೀನಿ ಎನ್ನುವ ಆರೋಪ ಇದೆ. ನನ್ನ ಅಮ್ಮ ಮದುವೆ, ಮುಂಜಿಗೆ ಹೋಗಲ್ಲ. ಇದಕ್ಕೆ ನಾನೇ ಕಾರಣ ಎಂದರು. ಈಗ ಊರಲ್ಲಿ ಅವರು ಒಂದು ಮನೆ ಕಟ್ಟಿದ್ದಾರೆ. ಅದರ ಗೃಹ ಪ್ರವೇಶಕ್ಕೆ ಕರೆದರು. ಆದರೆ, ನಾನು ಹೋಗಿಲ್ಲ. ನನ್ನ ಹೆಸರನ್ನು ಎಲ್ಲೂ ಹೇಳಬೇಡಿ ಎಂದೆ. ನನ್ನ ಅಪ್ಪ, ಅಮ್ಮ, ತಂಗಿ ನಂಬರ್ ಬ್ಲಾಕ್ ಮಾಡಿದೀನಿ’ ಎಂದು ಗಳಗಳನೆ ಅತ್ತರು ಪ್ರತಾಪ್. ಮದುವೆ ಆಗಬೇಕಿರೋ ತಂಗಿ ಇದಾಳೆ. ಅದಕ್ಕಾಗಿ ನಾನು ಕಂಪನಿ ಮಾಡಿದೀನಿ. ಕಂಪನಿಯನ್ನು ಬೆಳೆಸಬೇಕಿದೆ. ಡ್ರೋನ್ ಮಾಡ್ತಾ ಇದೀಯಾ ಅದನ್ನೇ ಮಾಡ್ಕೊಂಡು ಇರು ಬಿಗ್ ಬಾಸ್‌ಗೆ ಹೋಗಬೇಡ ಎಂದು ಮಾವನ ಮೂಲಕ ಮನೆಯವರು ಹೇಳಿಸಿದರು. ಆದರೆ, ನಾನು ಕೇಳಲಿಲ್ಲ. ಅಪ್ಪನ ನೋಡಬೇಕು ಎನಿಸುತ್ತಿದೆ’ ಎಂದರು ಪ್ರತಾಪ್. ಅಪ್ಪ, ಅಮ್ಮ, ತಂಗಿನ ನೋಡೋಕೆ ಒಂದು ಅವಕಾಶ ಮಾಡಿಕೊಡಿ’ ಎಂದು ತಾರಾ ಬಿಗ್ ಬಾಸ್ ಬಳಿ ಮನವಿ ಮಾಡಿಕೊಂಡರು. ಬಂದರೆ ಭೇಟಿ ಮಾಡ್ತೀಯಾ ಎಂದು ತಾರಾ ಕೇಳಿದರು. ಇದಕ್ಕೆ ತಲೆ ಆಡಿಸಿದರು ಪ್ರತಾಪ್. ‘ತಂಗಿ ಮದುವೆ, ನಿನ್ನ ಮದುವೆಗೆ ಆಮಂತ್ರಣ ನೀಡಬೇಕು’ ಎಂದು ಪ್ರತಾಪ್‌ಗೆ ಧೈರ್ಯ ತುಂಬಿದರು. ಡ್ರೋನ್ ಪ್ರತಾಪ್ ಜೊತೆ ಮಾತನಾಡುವಾಗ ಪ್ರತಾಪ್ ಭಾವುಕರಾಗಿ ಕಣ್ಣೀರು ಹಾಕಿದರು.

Sulekha