ವರ್ತೂರು ಸಂತೋಷ್ ಬಗ್ಗೆ ತಾಯಿ ಮಂಜುಳಾ ಹೇಳಿದ್ದೇನು? – ಮಗನಿಗಾಗಿ ಕಾನೂನು ಹೋರಾಟಕ್ಕೂ ಸಿದ್ಧತೆ
ಬಿಗ್ಬಾಸ್ ಮನೆಯಲ್ಲಿ ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ ಉಳಿದ ಸ್ಪರ್ಧಿಗಳಿಗೆ ಚೆನ್ನಾಗಿಯೇ ಫೈಟ್ ಕೊಡುತ್ತಿದ್ದರು. ಈ ಸೀಸನ್ ಕೊನೇ ತನಕ ವರ್ತೂರು ಸಂತೋಷ್ ಇರುತ್ತಾರೆ ಎಂದೇ ಹೇಳಲಾಗುತ್ತಿತ್ತು. ಆದರೆ, ವರ್ತೂರು ಸಂತೋಷ್ ಅವರಿಗೆ ಅವರು ಕೊರಳಲ್ಲಿ ಧರಿಸಿದ್ದ ಚೈನ್ ಕಂಟಕವಾಗಿದೆ. ಆ ಸಂಕಷ್ಟ ಈಗ ಇವರ ಕುತ್ತಿಗೆಯನ್ನೇ ಬಿಗಿಯುತ್ತಿದೆ. ಈ ಬಗ್ಗೆ ವರ್ತೂರು ಅವರ ತಾಯಿ ಕೂಡಾ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ತಪ್ಪೊಪ್ಪಿಕೊಂಡ ಬಿಗ್ಬಾಸ್ ಸ್ಪರ್ಧಿ ವರ್ತೂರು ಸಂತೋಷ್ – ಆರೋಪ ಸಾಬೀತಾದರೆ ಶಿಕ್ಷೆ ಪ್ರಮಾಣ ಎಷ್ಟು?
ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ಅರಣ್ಯಾಧಿಕಾರಿಗಳು ಬಂಧಿಸಿ, ವಿಚಾರಣೆ ಮಾಡುತ್ತಿದ್ದಾರೆ. ಚಿನ್ನದ ಸರದಲ್ಲಿ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ. ಈ ಸಂಬಂಧ ಸಂತೋಷ್ ಅವರ ತಾಯಿ ಮಂಜುಳಾ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮಗನ ಏಳಿಗೆಯನ್ನು ಸಹಿಸಲಾಗದೆ, ಅವನ ವಿರುದ್ಧ ಕುತಂತ್ರ ಮಾಡಲಾಗುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ. ನನ್ನ ಮಗ ಬಿಗ್ ಬಾಸ್ಗೆ ಹೋಗಿದ್ದು ಖುಷಿ ನೀಡಿತ್ತು. ಆದರೆ ಇವತ್ತು ನನಗೆ ತುಂಬ ನೋವಾಗುತ್ತಿದೆ. ಈ ಪ್ರಕರಣದ ಬಗ್ಗೆ ನನಗೆ ಸರಿಯಾಗಿ ಗೊತ್ತಿಲ್ಲ. ಅದರ ಬಗ್ಗೆ ಮಗನನ್ನೇ ಕೇಳಬೇಕು. ಇವತ್ತು ನನ್ನ ಮಗ ಎಷ್ಟು ಕೆಳಗೆ ಹೋಗ್ತಾ ಇದ್ದಾನೋ, ಅಷ್ಟೇ ಮೇಲೆ ಬರ್ತಾನೆ ಅನ್ನೋ ಭರವಸೆ ನನಗೆ ಇದೆ, ನನಗೇನೂ ಭಯ ಇಲ್ಲ. ನನಗೆ ಧೈರ್ಯ ಇದೆ. ಜನರ ಏನು ಬೇಕಾದರೂ ಮಾತನಾಡಿಕೊಳ್ಳಲಿ. ನಾವು ವ್ಯವಸಾಯ ಮಾಡೋರು, ಕಷ್ಟಪಟ್ಟಿದ್ದೇವೆ, ನಾವು ಮಾಡಿಸಿಕೊಂಡಿದ್ದೇವೆ. ನನಗೆ ಆ ಹುಲಿ ಉಗುರಿನ ಬಗ್ಗೆ ಏನೂ ಗೊತ್ತಿಲ್ಲ. ಅದನ್ನು ಸಿಟಿಯಿಂದ ತೆಗೆದುಕೊಂಡು ಬಂದೆ ಅಂತ ಹೇಳಿದ್ದ. ಆ ಡಾಲರ್ ಬಗ್ಗೆ ನನಗೆ ಗೊತ್ತಿಲ್ಲ. ಚೈನ್ ಮಾಡಿಸು ಅಂತ ಹೇಳಿದ್ದ. ನಾನು ಅದನ್ನು ಮಾಡಿಸಿದ್ದೆ’ ಎಂದು ಅವರು ತಿಳಿಸಿದ್ದಾರೆ. ಆ ಹುಲಿ ಉಗುರು, ಒರಿಜಿನಲ್ಲಾ, ಡುಪ್ಲಿಕೇಟಾ ಅನ್ನೋದು ನನಗೆ ಗೊತ್ತಿಲ್ಲ. ಅದನ್ನೆಲ್ಲ ಮಾಡಿಸಿಕೊಳ್ಳಬೇಕೋ, ಬೇಡ್ವೋ ಎಂಬ ಅರಿವು ಅವನಿಗೆ ಇಲ್ಲ. ಗೊತ್ತಿಲ್ಲದೇ ಮಾಡಿಸಿಕೊಂಡಿರುವುದು ಅವನು. ಆ ಡಾಲರ್ ಮಾಡಿಸಿ, 10 ವರ್ಷ ಆಗಿದೆ ಅನಿಸುತ್ತದೆ. ಅದನ್ನು 10 ವರ್ಷಗಳಿಂದಲೂ ಹಾಕಿಕೊಳ್ಳುತ್ತಿದ್ದಾನೆ. ಆಗಿನಿಂದಲೂ ಯಾರೂ ಕೇಳಿಲ್ಲ. ಈಗ ಇದು ಆಗಿದೆ ಎಂದರೆ, ಯಾರೋ ಬೇಕು ಅಂತಲೇ ಮಾಡಿಸಿದ್ದಾರೆ. ಇದನ್ನು ಯಾರೋ ಮಾಡಿಸಿದ್ದಾರೋ, ಅವರಿಗೆ ಒಳ್ಳೆಯದಾಗಲಿ. ನನ್ನ ಮಗ ಮೇಲೆ ಹೋಗುತ್ತಿದ್ದಾನೆ, ಜನರು ಅವನನ್ನು ಮೇಲೆ ಎತ್ತುತ್ತಿದ್ದಾರೆ. ಹಾಗಾಗಿ, ಅವನನ್ನು ತುಳಿಬೇಕು ಅಂತ ಈ ರೀತಿ ಮಾಡಿದ್ದಾರೆ’ ಎಂದು ಸಂತೋಷ್ ತಾಯಿ ಹೇಳಿದ್ದಾ ನನ್ನ ಮಗನಿಗೆ ಜನರ ಬೆಂಬಲ ಇದೆ. ನಾನಿನ್ನೂ ಮಗನನ್ನು ಸಂಪರ್ಕ ಮಾಡಿಲ್ಲ. ಅವನನ್ನ ಬಿಗ್ ಬಾಸ್ ಮನೆಯಿಂದಲೇ ಕರೆದುಕೊಂಡು ಹೋಗಿದ್ದಾರೆ. ನನಗೆ ತುಂಬಾ ದುಃಖ ಆಗುತ್ತಿದೆ. ನಾವು ಕೂಡ ಕಾನೂನು ಹೋರಾಟ ಮಾಡುತ್ತೇವೆ. ಅವನು ದೊಡ್ಡಪ್ಪ, ಮಾವಂದಿರು, ಸ್ನೇಹಿತರು ಎಲ್ಲ ಹೋಗಿದ್ದಾರೆ. ನನ್ನ ಮಗನ ವಿರುದ್ಧ ಕುತಂತ್ರ ಮಾಡಿದ್ದಾರೆ. ನನ್ನ ಮಗ ಎಲ್ಲ ಕೆಲಸ ಮಾಡುತ್ತಾನೆ. ತೋಟ ಇದೆ ನಮ್ಮದು. ಅದರ ಕೆಲಸ ಮಾಡುತ್ತಾನೆ. ಹಸುಗಳನ್ನು ಸಾಕುತ್ತಾನೆ. ನನ್ನ ಮಗನ ಪರಿಸ್ಥಿತಿ ನೋಡಿ ದುಃಖ ಆಗುತ್ತಿದೆ. ನನಗೆ ಭರವಸೆ ಇದೆ, ಜನರು ಅವನನ್ನು ಆಚೆ ಕರೆದುಕೊಂಡು ಬರುತ್ತಾರೆ’ ಎಂದು ವರ್ತೂರು ಸಂತೋಷ್ ತಾಯಿ ತಿಳಿಸಿದ್ದಾರೆ.