ಬಿಗ್‌ಬಾಸ್ ಮನೆಯಲ್ಲಿ ಶಿಕ್ಷೆಗೀಡಾದ ವಿನಯ್ ಗೌಡ – ಇನ್ನೂ ಜೋರಾಯ್ತು ಅರಚಾಟ, ಸಿಟ್ಟು, ಕಲಹ
ಬಿಗ್‌ಬಾಸ್ ಮನೆಯಲ್ಲಿ ನಾನು, ನಂದೇ, ನನ್ನ ಸ್ಟೈಲ್ ಹೀಗೆ.. ಏನಿವಾಗ ಇಷ್ಟೆಲ್ಲಾ ಅಬ್ಬರಿಸುತ್ತಿದ್ದ ವಿನಯ್ ಗೌಡ ಈಗ ದುರಾದೃಷ್ಟದ ಶಿಕ್ಷೆಗೆ ಒಳಗಾಗಿದ್ದಾರೆ. ಮೊದಲ ವಾರದಲ್ಲೇ ಕ್ಯಾಪ್ಟನ್ ಆಗಬೇಕು ಎಂಬ ಜೋಶ್ ವಿನಯ್ ಗೌಡಗೆ ಜಾಸ್ತಿಯೇ ಇತ್ತು. ಆದರೆ, ಈಗ ಎರಡನೇ ವಾರವಾದರೂ ತಾನೇ ಕ್ಯಾಪ್ಟನ್ ಆಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಇನ್ನೂ ಎರಡೂ ವಾರ ಕ್ಯಾಪ್ಟನ್ ಟಾಸ್ಕ್‌ನಲ್ಲಿ ವಿನಯ್ ಗೌಡ ಭಾಗವಹಿಸುವಂತಿಲ್ಲ ಎಂಬ ಶಿಕ್ಷೆ ಸಿಕ್ಕಿದೆ.
ಇದನ್ನೂ ಓದಿ: Ghost ಸಿನಿಮಾದಲ್ಲಿ ಇಷ್ಟವಾದ್ರು ಶಿವಣ್ಣ – ಶಿವರಾಜ್ ಕುಮಾರ್ ಗ್ಯಾಂಗ್ಸ್ಟರ್ ಲುಕ್ ಗೆ ಫ್ಯಾನ್ಸ್ ಫಿದಾ
ಬಿಗ್‌ಬಾಸ್ ಆರಂಭವಾಗಿ ಎರಡನೇ ವಾರದಲ್ಲೂ ಮನೆಯಲ್ಲಿ ಜಗಳ ಜೋರಾಗಿ ಸಾಗುತ್ತಿದೆ. ಟಾಸ್ಕ್ ಗೋಸ್ಕರ ಬಿಗ್‌ಬಾಸ್ ಮನೆಯಲ್ಲಿ ಎರಡು ಟೀಮ್ ಮಾಡಿರುವುದು ಮನಸು ಮನಸುಗಳಲ್ಲಿ ದ್ವೇಷದ ಕಿಚ್ಚು ಹೊತ್ತಿಸುತ್ತಿದೆ. ಇದರ ಜೊತೆಗೆ ಎರಡನೇ ವಾರ ಹೈಲೆಟ್ ಆಗ್ತಿರುವುದು ವಿನಯ್ ಗೌಡ ಅವರ ಸಿಟ್ಟು. ಟಾಸ್ಕ್ ಸೋತ ಬೇಸರದ ಜೊತೆ ತಮ್ಮ ಬಗ್ಗೆ ಅಪಪ್ರಚಾರ ಆಗುತ್ತಿದೆ ಎಂದು ವಿನಯ್ ಗೌಡ ಅವರು ಸಿಟ್ಟಾಗಿದ್ದಾರೆ. ಇದರ ಜೊತೆಗೆ ವಿನಯ್ ಗೌಡ ಶಿಕ್ಷೆಗೂ ಒಳಗಾಗಿದ್ದಾರೆ. ಎರಡು ವಾರ ಕ್ಯಾಪ್ಟನ್ ಟಾಸ್ಕ್ ನಲ್ಲಿ ವಿನಯ್ ಗೌಡ ಭಾಗಿಯಾಗುವಂತಿಲ್ಲ. ಹೀಗಾಗಿ, ಅವರು ಸಾಕಷ್ಟು ಅಸಮಾಧಾನಗೊಂಡಿದ್ದಾರೆ. ಮನೆಯವರ ಮೇಲೆಲ್ಲಾ ತಮ್ಮ ಕೋಪ ತೋರಿಸುತ್ತಿದ್ದಾರೆ. ಬಾಯಿಗೆ ಬಂದಂತೆ ಬೈಯುತ್ತಿದ್ದಾರೆ. ಇದರಿಂದ ಮನೆಯ ವಾತಾವರಣ ಬಿಸಿಯಾಗಿದೆ. ಧಾರಾವಾಹಿ ಮೂಲಕ ಫೇಮಸ್ ಆದವರು ವಿನಯ್ ಗೌಡ. ಸಂಗೀತಾ ಹಾಗೂ ವಿನಯ್ ಒಂದೇ ಧಾರಾವಾಹಿಯಲ್ಲಿ ನಟಿಸಿದ್ದರು. ಇವರ ಮಧ್ಯೆ ಒಳ್ಳೆಯ ಗೆಳೆತನ ಇತ್ತು. ಆದರೆ, ಬಿಗ್ ಬಾಸ್ಗೆ ಬಂದಾಗ ಇವರ ಮಧ್ಯೆ ಮಿಸ್ಅಂಡರ್ಸ್ಟ್ಯಾಂಡಿಂಗ್ ಜಾಸ್ತಿ ಆಗಿದೆ. ಯಾರು ಎಷ್ಟೇ ವಾದ ಸಿಟ್ಟು ಮಾಡಿಕೊಂಡರೂ ಕೂಡಾ ವಿನಯ್ ಮತ್ತು ಸಂಗೀತಾ ಇವರೆಲ್ಲರಿಗಿಂತಲೂ ದುಪ್ಪಟ್ಟು ಕಿತ್ತಾಡಿಕೊಳ್ಳುತ್ತಿದ್ದಾರೆ.
ಸಂಗೀತಾ ಅವರು ಪದೇಪದೇ ಬೇಸರ ಮಾಡಿಕೊಳ್ಳುತ್ತಿದ್ದಾರೆ. ವಿನಯ್ ಗೌಡ ವರ್ತನೆಯಿಂದ ಬೇಸತ್ತ ಸಂಗೀತಾ ತುಂಬಾ ಹೊತ್ತು ಕಣ್ಣೀರು ಸುರಿಸುತ್ತಿರುವುದು ವೀಕ್ಷಕರ ಮನಸಿಗೂ ನೋವುಂಟು ಮಾಡಿದೆ. ಇದಲ್ಲದೇ ಸಂಗೀತಾ ಮನೆಯಿಂದ ಹೊರ ಹೋಗುವ ಬಗ್ಗೆ ಮಾತಾಡುತ್ತಿದ್ದಾರೆ. ಸಂಗೀತಾ ಈ ರೀತಿ ಆಲೋಚಿಸೋದಕ್ಕೆ ವಿನಯ್ ನೇರ ಕಾರಣ ಎಂದು ಭಾಗ್ಯಶ್ರೀ ಕೂಡಾ ಇದನ್ನೆಲ್ಲಾ ಸರಿ ಮಾಡಲು ಮುಂದಾಗಿದ್ದಾರೆ. ವಿನಯ್ ಬಳಿ ಹೋಗಿ ತಿದ್ದಿಕೊಳ್ಳುವಂತೆ ಭಾಗ್ಯಶ್ರೀ ಕೋರಿದ್ದಾರೆ. ‘ನಿಮ್ಮಿಂದ ಸಂಗೀತಾ ಖಿನ್ನತೆಗೆ ಒಳಗಾಗುತ್ತಿದ್ದಾರೆ’ ಎನ್ನುವ ಮಾತನ್ನು ವಿನಯ್‌ಗೆ ಭಾಗ್ಯಶ್ರೀ ಹೇಳಿದ್ದಾರೆ. ಇದನ್ನು ಕೇಳಿದ ವಿನಯ್ ಕೋಪಗೊಂಡಿದ್ದಾರೆ. ನಾನು ಯಾವುದಕ್ಕೂ ಜವಾಬ್ದಾರನಲ್ಲ. ಅವರು ಖಿನ್ನತೆಗೆ ಒಳಗಾದರೆ ಅದಕ್ಕೆ ನಾನು ಹೊಣೆ ಅಲ್ಲ’ ಎಂದು ಅವರು ನೇರವಾಗಿ ಹೇಳಿದ್ದಾರೆ. ಆ ಜಗಳ ಇಂದಿಗೂ ಮುಂದುವರಿದಿದೆ. ಇದರ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ. ‘ನನ್ನಿಂದ ಒಬ್ಬರು ಖಿನ್ನತೆಗೆ ಹೋದ್ರು ಅಂತಾರೆ, ಮತ್ತೊಬ್ರು ನಾನು ಡೇಂಜರ್ ಅಂತಾರೆ. ನಾನೇನು ಮಾಡಬೇಕು’ ಎಂದು ವಿನಯ್ ಕೆಂಡಾಮಂಡಲವಾಗಿ ಕಿರುಚಾಡಿದ್ದಾರೆ.