Ghost ಸಿನಿಮಾದಲ್ಲಿ ಇಷ್ಟವಾದ್ರು ಶಿವಣ್ಣ – ಶಿವರಾಜ್ ಕುಮಾರ್ ಗ್ಯಾಂಗ್​ಸ್ಟರ್ ಲುಕ್ ಗೆ ಫ್ಯಾನ್ಸ್ ಫಿದಾ

Ghost ಸಿನಿಮಾದಲ್ಲಿ ಇಷ್ಟವಾದ್ರು ಶಿವಣ್ಣ – ಶಿವರಾಜ್ ಕುಮಾರ್ ಗ್ಯಾಂಗ್​ಸ್ಟರ್ ಲುಕ್ ಗೆ ಫ್ಯಾನ್ಸ್ ಫಿದಾ

ಹ್ಯಾಟ್ರಿಕ್ ಹೀರೋ ಶಿವರಾಜ್​​ಕುಮಾರ್ ಅಭಿನಯದ ಘೋಸ್ಟ್ ಸಿನಿಮಾ ರಿಲೀಸ್ ಆಗಿದೆ. ಶಿವಣ್ಣನ ಗ್ಯಾಂಗ್​ಸ್ಟರ್ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಘೋಸ್ಟ್ ಸಿನಿಮಾ ಘೋಷಣೆಯಾದಾಗಿನಿಂದ ಸಾಕಷ್ಟು ಕುತೂಹಲ, ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಮೊದಲ ಬಾರಿಗೆ ಶಿವಣ್ಣನಿಗೆ ಶ್ರೀನಿ ನಿರ್ದೇಶನ ಮಾಡಿದ್ದು, ಟೀಸರ್, ಪೋಸ್ಟರ್ ಕೂಡ ಸಖತ್ ಕ್ಯೂರಿಯಸಿಟಿ ಬಿಲ್ಡ್ ಮಾಡಿತ್ತು.

ಇದನ್ನೂ ಓದಿ : ಟೈಟಲ್ ವಿವಾದದ ನಡುವೆಯೂ ಲಿಯೋ ಸಿನಿಮಾ ರಿಲೀಸ್ – ದಳಪತಿ ವಿಜಯ್ ಸಿನಿಮಾಗೆ ಡಬಲ್ ರೆಸ್ಪಾನ್ಸ್

ಟ್ರೇಲರ್ ರಿಲೀಸ್ ಆದಾಗಿನಿಂದಲೂ ಘೋಸ್ಟ್ ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿತ್ತು. ಇದೀಗ ಸಿನಿಮಾ ತೆರೆಗೆ ಅಪ್ಪಳಿಸಿದ್ದು ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಚಿತ್ರದಲ್ಲಿ ಸೆಂಟ್ರಲ್ ಜೈಲ್​ವೊಂದನ್ನ ಶಿವಣ್ಣ ಹೈಜಾಕ್ ಮಾಡಿ ಖೈದಿಗಳನ್ನೇ ಒತ್ತೆಯಾಳಾಗಿ ಇಟ್ಟುಕೊಳ್ತಾರೆ. ಸಸ್ಪೆನ್ಸ್ ಥ್ರಿಲ್ಲರ್ ಕಥೆಯಂತೆ ಸಾಗುವ ಸಿನಿಮಾ ಕೊನೆವರೆಗೂ ಪ್ಷೇಕ್ಷಕರಲ್ಲಿ ಕುತೂಹಲ ಉಳಿಸುತ್ತದೆ. ಫಸ್ಟ್ ಆಫ್​ಗಿಂತ ಸೆಕೆಂಡ್ ಆಫ್​ನಲ್ಲಿ ಸ್ಟೋರಿ ಪ್ರೇಕ್ಷಕರಿಗೆ ಮತ್ತಷ್ಟು ಕನೆಕ್ಟ್ ಆಗುತ್ತದೆ. ತಮ್ಮ ಹಿಂದಿನ ಚಿತ್ರಗಳಿಗಿಂತ ಶಿವಣ್ಣ ಇಲ್ಲಿ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. 61 ನೇ ವಯಸ್ಸಿನಲ್ಲೂ ಶಿವಣ್ಣರನ್ನ ಎಂಗ್ ಌಂಗ್ ಎನರ್ಜಿಟಿಕ್ ಆಗಿ ತೋರಿಸುವಲ್ಲಿ ನಿರ್ದೇಶಕ ಶ್ರೀನಿ ಯಶಸ್ವಿಯಾಗಿದ್ದಾರೆ. ಈ ಎಲ್ಲಾ ಕಾರಣಗಳಿಂದ ಓಂ ಸಿನಿಮಾ ಸ್ಟೈಲ್​ನಲ್ಲೇ ಘೋಸ್ಟ್ ಕೂಡ ಬಾಕ್ಸ್ ಆಫೀಸ್ ಸುಲ್ತಾನ ಆಗುತ್ತೆ ಅನ್ನೋದು ಅಭಿಮಾನಿಗಳ ಮಾತು.

Shantha Kumari