ಟೈಟಲ್ ವಿವಾದದ ನಡುವೆಯೂ ಲಿಯೋ ಸಿನಿಮಾ ರಿಲೀಸ್ – ದಳಪತಿ ವಿಜಯ್ ಸಿನಿಮಾಗೆ ಡಬಲ್ ರೆಸ್ಪಾನ್ಸ್

ದಳಪತಿ ವಿಜಯ್ ಅಭಿನಯದ ಲಿಯೋ ಸಿನಿಮಾ ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ. ಇದೇ ವೇಳೆ ಕೆಲ ಅಭಿಮಾನಿಗಳಿಗೆ ಶಾಕ್ ಕೂಡ ಆಗಿದೆ. ಅಭಿಮಾನಿಗಳು ‘ಲಿಯೋ’ ಫಸ್ಟ್ ಡೇ ಫಸ್ಟ್ ಶೋ ನೋಡಿ ಸಂಭ್ರಮಿಸಿದ್ದಾರೆ. ಕೆಲವರು ಸಿನಿಮಾ ನೋಡಿ ಮೆಚ್ಚಿದರೆ ಇನ್ನೂ ಕೆಲವರು ಚಿತ್ರದಲ್ಲಿ ಹೊಸತನ ಏನಿಲ್ಲ ಎಂದಿದ್ದಾರೆ.
ಟೈಟಲ್ ವಿವಾದದ ನಡುವೆಯೂ ಲಿಯೋ ಸಿನಿಮಾ ಇವತ್ತು ತೆರೆ ಕಂಡಿದೆ. ಟ್ರೇಲರ್ ಬಿಡುಗಡೆ ಆದಾಗಿನಿಂದಲೂ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದ್ದ ಚಿತ್ರ ಈಗ ಫುಲ್ ಟ್ರೆಂಡಿಂಗ್ನಲ್ಲಿದೆ. ಸಿನಿಮಾದ ಫಸ್ಟ್ ಹಾಫ್ ಪ್ಷೇಕ್ಷಕರನ್ನ ತುದಿಗಾಲಲ್ಲಿ ಕೂರಿಸುವಂತಿದೆ. ಚಿತ್ರದ ನಾಯಕ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಹಿಮಾಚಲ ಪ್ರದೇಶದಲ್ಲಿ ನೆಲೆಸಿರುತ್ತಾನೆ. ಆದರೆ ಒಂದು ಸಲ ಅವನ ಮೇಲೆ ಗ್ಯಾಂಗ್ಸ್ಟರ್ಗಳು ಅಟ್ಯಾಕ್ ಮಾಡ್ತಾರೆ. ಇಲ್ಲಿಂದ ಚಿತ್ರದ ಕಥೆ ಬೇರೆಯದ್ದೇ ತಿರುವು ಪಡೆಯುತ್ತೆ. ಇನ್ನು ಚಿತ್ರಕ್ಕೆ ಪರವಿರೋಧದ ಅಭಿಪ್ರಾಯ ಕೂಡ ವ್ಯಕ್ತವಾಗ್ತಿದೆ. ಲಿಯೋ ಸಿನಿಮಾ ತೆಲುಗಿನಲ್ಲಿ ಮಾತ್ರ ರಿಲೀಸ್ ಆಗಲ್ಲ ಎನ್ನಲಾಗಿತ್ತು.
ಇದನ್ನೂ ಓದಿ : ಬಿಗ್ಬಾಸ್ ಮನೆಯಲ್ಲಿ ‘ಹ್ಯಾಪಿ’ ಮರೆಯಾಗಿದೆ – ಕಿತ್ತಾಟ, ಚೀರಾಟ, ಗೆಲ್ಲಲು ಹೋರಾಟ ಮಾಡುವವರಿಂದ ದ್ವೇಷವೇ ದೊಡ್ಡದಾಗಿದೆ
ಟೈಟಲ್ ಕುರಿತಂತೆ ನಿರ್ಮಾಪಕ ನಾಗ ವಂಶಿ ಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯ ಅಕ್ಟೋಬರ್ 20ರವೆರಗೂ ತೆಲುಗು ಭಾಷೆಯಲ್ಲಿ ಚಿತ್ರ ಬಿಡುಗಡೆ ಮಾಡದಂತೆ ತಡೆಯಾಜ್ಞೆ ನೀಡಿತ್ತು. ಆದರೆ ಕೊನೇ ಕ್ಷಣದಲ್ಲಿ ತೆಲುಗಿನಲ್ಲೂ ಕೂಡ ಲಿಯೋ ರಿಲೀಸ್ ಆಗಿದೆ.
ಅಭಿಮಾನಿಗಳು ‘ಲಿಯೋ’ ಫಸ್ಟ್ ಡೇ ಫಸ್ಟ್ ಶೋ ನೋಡಿ ಸಂಭ್ರಮಿಸಿದ್ದಾರೆ. ಕೆಲವರು ಸಿನಿಮಾ ನೋಡಿ ಮೆಚ್ಚಿದರೆ ಇನ್ನೂ ಕೆಲವರು ಚಿತ್ರದಲ್ಲಿ ಹೊಸತನ ಏನಿಲ್ಲ ಎಂದಿದ್ದಾರೆ. ಚಿತ್ರದ ನಾಯಕ ಪಾರ್ಥಿಬನ್ (ವಿಜಯ್) ಪತ್ನಿ ಸತ್ಯ ( ತ್ರಿಶಾ) ಹಾಗೂ ಇಬ್ಬರು ಮಕ್ಕಳೊಂದಿಗೆ ಹಿಮಾಚಲ ಪ್ರದೇಶದಲ್ಲಿ ನೆಲೆಸಿರುತ್ತಾನೆ. ಆದರೆ ಒಮ್ಮೆ ಆತ ಗ್ಯಾಂಗ್ಸ್ಟರ್ಳಿಂದ ಹಲ್ಲೆಗೆ ಒಳಗಾಗುತ್ತಾನೆ. ಪಾರ್ಥಿಬನ್ ನೋಡಲು ಲಿಯೋ ದಾಸ್ನಂತೆ ಇರುವುದೇ ಇದಕ್ಕೆ ಕಾರಣ. ಪಾರ್ಥಿಬನ್, ಲಿಯೋ ದಾಸ್ ಮಗ ಇರಬಹುದು ಎಂಬ ಕಾರಣಕ್ಕೆ ಆತನ ಮೇಲೆ ಅಟ್ಯಾಕ್ ಜರುಗುತ್ತದೆ. ಲಿಯೋ ದಾಸ್ ಹಾಗೂ ಪಾರ್ಥಿಬನ್ ಇಬ್ಬರೂ ಒಬ್ಬರೇನಾ? ಪಾರ್ಥಿಬನ್, ಲಿಯೋ ದಾಸ್ ಮಗನೇನಾ? ಅಟ್ಯಾಕ್ ಅದಾಗಿನಿಂದ ಆತ ಹಾಗೂ ಕುಟುಂಬ ಏನೆಲ್ಲಾ ಸಮಸ್ಯೆ ಎದುರಿಸುತ್ತದೆ ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ.