ಹರಿಣಗಳನ್ನು ಸೋಲಿಸಿದ ಡಚ್ಚರಿಗೆ ಕ್ರಿಕೆಟ್ ಮಾತ್ರ ಬದುಕಾಗಿತ್ತಾ ? – ನೆದರ್ಲೆಂಡ್ಸ್ ಟೀಮ್‌ನಲ್ಲಿರುವ ಕ್ರಿಕೆಟಿಗರ ರಿಯಲ್ ಸ್ಟೋರಿ ಇಲ್ಲಿದೆ

ಹರಿಣಗಳನ್ನು ಸೋಲಿಸಿದ ಡಚ್ಚರಿಗೆ ಕ್ರಿಕೆಟ್ ಮಾತ್ರ ಬದುಕಾಗಿತ್ತಾ ? – ನೆದರ್ಲೆಂಡ್ಸ್ ಟೀಮ್‌ನಲ್ಲಿರುವ ಕ್ರಿಕೆಟಿಗರ ರಿಯಲ್ ಸ್ಟೋರಿ ಇಲ್ಲಿದೆ
HARARE, ZIMBABWE - JULY 09: Logan Van Beek of Netherlands celebrates with teammates during the ICC Men´s Cricket World Cup Qualifier Zimbabwe 2023 Final between Sri Lanka and Netherlands at Harare Sports Club on July 09, 2023 in Harare, Zimbabwe. (Photo by Albert Perez-ICC/ICC via Getty Images)

ಏಕದಿನ ವಿಶ್ವಕಪ್​ನಲ್ಲಿ ಸತತ 2 ಪಂದ್ಯಗಳನ್ನು ಗೆದ್ದಿದ್ದ ದಕ್ಷಿಣ ಆಫ್ರಿಕಾ, ನೆದರ್ಲೆಂಡ್ಸ್ ಎದುರು ಮುಜುಗರದ ಸೋಲನುಭವಿಸಿದೆ. ನೆದರ್ಲೆಂಡ್ಸ್ ವಿರುದ್ಧ 246 ರನ್ ಚೇಸ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ಯಾರೂ ಊಹಿಸದ ಸೋಲನುಭವಿಸಿದೆ. ಅದರಲ್ಲೂ ಮೊದಲೆರಡು ಪಂದ್ಯಗಳಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದ ಹರಿಣಗಳು ನೆದರ್ಲೆಂಡ್ಸ್ ವಿರುದ್ಧ ಮಾತ್ರ ಪೆವಿಲಿಯನ್ ಪರೇಡ್ ನಡೆಸಿದರು. ಡಚ್ಚರ ವಿರುದ್ಧ ಸೋಲುಂಡ ಹರಿಣಗಳಿಗೆ ಇದನ್ನು ಸುಲಭವಾಗಿ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾದೆ, ನೆದರ್ಲೆಂಡ್ ತಂಡದ ಶ್ರಮ ಹೇಗಿದೆ. ಡಚ್ಚರಿಗೆ ಕ್ರಿಕೆಟ್ ಮಾತ್ರವೇ ಬದುಕಾಗಿದೆಯಾ ಎಂಬ ವಿವರ ಇಲ್ಲಿದೆ.

ಇದನ್ನೂ ಓದಿ: ಪಾಕಿಸ್ತಾನಕ್ಕಿಂತ ಅಫ್ಘಾನಿಸ್ತಾನ ಕ್ರಿಕೆಟ್ ತಂಡವೇ ಬೆಟರ್ – ಅಫ್ಘಾನಿಸ್ತಾನ ಟೀಮ್ ಸಕ್ಸಸ್‌ನ ಹಿಂದಿದೆ ಭಾರತೀಯ ಮಾಜಿ ಕ್ರಿಕೆಟಿಗರ ಕೊಡುಗೆ..!

ದಕ್ಷಿಣ ಆಫ್ರಿಕಾ ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸಿದ್ರೂ, ನೆದರ್ಲ್ಯಾಂಡ್ ಕ್ಯಾಪ್ಟನ್ ಸ್ಕಾಟ್ ಎಡ್ವರ್ಡ್ಸ್ ಎಲ್ಲೂ ಅತಿಯಾಗಿ ಸಂಭ್ರಮಿಸಿಲ್ಲ. ಗೆದ್ದ ಬಳಿಕವೂ ಕೂಲ್ ಆಗಿಯೇ ಇದ್ದರು. ಅಷ್ಟೇ ಅಲ್ಲ, ಮ್ಯಾನ್​ ಆಫ್ ದಿ ಮ್ಯಾಚ್​ ಪಡೆದಾಗ, ಸೆಮಿಫೈನಲ್​ಗೆ ಹೋಗಬೇಕು ಅನ್ನೋದೆ ನಮ್ಮ ಗುರಿ ಎಂದರು.

ಎಲೆಕ್ಟ್ರಿಷಿಯನ್ ಕ್ಯಾಪ್ಟನ್ ಸ್ಕಾಟ್ ಎಡ್ವರ್ಡ್ಸ್!

ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವಿನ ಹೀರೋ ಆಗಿರುವ ನೆದರ್​​ಲ್ಯಾಂಡ್ ಕ್ಯಾಪ್ಟನ್​ ಸ್ಕಾಟ್ ಎಡ್ವರ್ಡ್ಸ್, ಟೊಂಗಾ ಅನ್ನೋ ದ್ವೀಪವೊಂದರಲ್ಲಿ ಜನಿಸಿದರು. ಬಳಿಕ ಆಸ್ಟ್ರೇಲಿಯಾದ ಮೆಲ್ಬೋರ್ನ್​ಗೆ ಶಿಫ್ಟ್ ಆಗಿದ್ದರು. ಆಸ್ಟ್ರೇಲಿಯಾದಲ್ಲಿ ಕ್ಲಬ್ ಕ್ರಿಕೆಟ್ ಆಡ್ತಿದ್ದ ಸ್ಕಾಟ್ ಎಡ್ವರ್ಡ್ಸ್ ಒಬ್ಬ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ. ಆಸ್ಟ್ರೇಲಿಯಾದಿಂದ ನೆದರ್​​ಲ್ಯಾಂಡ್​ಗೆ ತೆರಳಿದ ಎಡ್ವರ್ಡ್ಸ್​ ಅಲ್ಲಿ ಕೂಡ ಕ್ರಿಕೆಟ್ ಮುಂದುವರೆಸಿದ್ದಾರೆ. 2022ರಲ್ಲಿ ಡಚ್ ಕ್ರಿಕೆಟ್ ಟೀಂನ ಕ್ಯಾಪ್ಟನ್​​ ಪಟ್ಟಕ್ಕೇರಿದ ಹೆಮ್ಮೆ ಸ್ಕಾಟ್ ಎಡ್ವರ್ಡ್ಸ್ ಅವರದ್ದು.

ಐಟಿ ಉದ್ಯೋಗಿ ತೇಜ ನಿದಮಾನೂರು!

ಭಾರತೀಯ ಮೂಲದ ತೇಜ ನಿದಮಾನೂರು ಜನಿಸಿದ್ದು ಆಂಧ್ರಪ್ರದೇಶದಲ್ಲಿ. ಬಳಿಕ ನ್ಯೂಜಿಲೆಂಡ್​​ಗೆ ತೆರಳಿದ ತೇಜ ಅಲ್ಲಿಂದ ಕ್ರಿಕೆಟ್ ಆಡೋಕೆ ಅಂತಾನೆ ನೆದರ್​ಲ್ಯಾಂಡ್​ಗೆ ಶಿಫ್ಟ್ ಆದರು. ಕ್ರಿಕೆಟರ್ ಜೊತೆಗೆ ಐಟಿ ಉದ್ಯೋಗಿಯೂ ಆಗಿರುವ ತೇಜ ಅಲ್ಲಿನ ಕ್ರಿಕೆಟ್​ ಬೋರ್ಡ್​​ನಲ್ಲಿ ಕೂಡ ಕೆಲಸ ಮಾಡುತ್ತಿದ್ದಾರೆ.

ಡಿಜೆ ಪ್ಲೇಯರ್ ನೆದರ್​ಲ್ಯಾಂಡ್ ಓಪನರ್!

ಮ್ಯಾಕ್ಸ್ ಓಡೌವ್ಡ್.. ನೆದರ್​ಲ್ಯಾಂಡ್ ತಂಡದ ಓಪನಿಂಗ್​ ಬ್ಯಾಟ್ಸ್​ಮನ್​. ಕ್ರಿಕೆಟ್ ಪ್ಯಾಷನ್ ಆಗಿದ್ದು, ವೃತ್ತಿಯಲ್ಲಿ ಮ್ಯಾಕ್​ ಒಬ್ಬ ಡಿಜೆ ಪ್ಲೇಯರ್. ಡಿಜೆ ನುಡಿಸುತ್ತಾ, ಕ್ರಿಕೆಟ್ ಕೂಡ ಆಡ್ತಿದ್ದ ಮ್ಯಾಕ್ಸ್​​ ಈಗ ವರ್ಲ್ಡ್​ಕಪ್​ನಲ್ಲಿ ಆಡ್ತಿದ್ದಾರೆ.

ಫುಡ್ ಡೆಲಿವರಿ ಬಾಯ್ ನೆದರ್​ಲ್ಯಾಂಡ್ ಪೇಸ್ ಬೌಲರ್!

ದಕ್ಷಿಣ ಆಫ್ರಿಕಾ ವಿರುದ್ಧದ ಗೆಲುವಿನಲ್ಲಿ ಬೌಲಿಂಗ್​ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಪೌಲ್ ವ್ಯಾನ್ ಮೀಕೆರೆನ್ ನೆದರ್​ಲ್ಯಾಂಡ್​ ತಂಡದ ಪ್ರಮುಖ ವೇಗದ ಬೌಲರ್. 2019ರಲ್ಲಿ ಕೊರೊನಾದಿಂದಾಗಿ ಟಿ-20 ವಿಶ್ವಕಪ್​ ಪೋಸ್ಟ್​ಪೋನ್ ಆದಾಗ ಪೌಲ್ ವ್ಯಾನ್ ಹೊಟ್ಟೆಪಾಡಿಗಾಗಿ ನೆದರ್​ಲ್ಯಾಂಡ್​ನಲ್ಲಿ ಫುಡ್ ಡೆಲಿವರಿ ಮಾಡ್ತಿದ್ರು. ಆ ಸಂದರ್ಭದಲ್ಲಿ ಟಿ-20 ಟ್ರೋಫಿ ಜೊತೆಗೆ ಅವರು ಮಾಡಿದ್ದ ಟ್ವೀಟ್ ಫುಲ್ ವೈರಲ್ ಆಗಿತ್ತು. ಆದ್ರೀಗ ಇದೇ ಫುಡ್ ಡೆಲಿವರಿ ಬಾಯ್​ ಟಿ-20 ಬಿಡಿ, ವಂಡೇ ವಿಶ್ವಕಪ್​​ನಲ್ಲಿ ಆಡ್ತಾ ಇಂಡಿಯನ್​ ಪಿಚ್​​ನಲ್ಲಿ ಅದ್ಭೂತವಾಗಿ ಡೆಲಿವರಿ ಮಾಡ್ತಾ ಇದ್ದಾರೆ.

RCB ಆಟಗಾರ ವ್ಯಾನ್ ಡರ್​ ಮರ್ವ್!

ದಕ್ಷಿಣ ಆಫ್ರಿಕಾ ವಿರುದ್ಧದ ಮ್ಯಾಚ್​​ನಲ್ಲಿ ಬೌಲಿಂಗ್ ಮತ್ತು ಫಿಲ್ಡಿಂಗ್​​ನಲ್ಲಿ ರೋಲೊಫ್ ವ್ಯಾನ್ ಡರ್​ ಮರ್ವ್​ ಆಟವನ್ನ ನೀವು ಈ ಹಿಂದೆಯೂ ನೋಡಿರ್ತೀರಾ. ಯಾಕಂದ್ರೆ ವ್ಯಾನ್ ಡರ್ ಮರ್ವ್ ಮೂಲತ: ದಕ್ಷಿಣ ಆಫ್ರಿಕಾ ಮೂಲದ ಕ್ರಿಕೆಟರ್​. ಸೌತ್ ಆಫ್ರಿಕಾ ಅಂತಾರಾಷ್ಟ್ರೀಯ ತಂಡದ ಪರ ಕೂಡ ಆಡಿದ್ರು. ಐಪಿಎಲ್​​ನಲ್ಲಿ ಆರ್​ಸಿಬಿ ಮತ್ತು ದೆಹಲಿ ತಂಡವನ್ನ ಕೂಡ ರೆಪ್ರಸೆಂಟ್ ಮಾಡಿದ್ರು. ಅಲ್​ರೌಂಡರ್​ ಆಗಿರುವ ವ್ಯಾನ್ ಡರ್ ಮರ್ವ್ ಒಬ್ಬ ಅದ್ಭೂತ ಫೈಟರ್. ಯಾವ ಹಂತದಲ್ಲೂ ಕೂಡ ತಮ್ಮ ಸ್ಪಿರಿಟ್ ಬಿಟ್ಟು ಕೊಡೋದೇ ಇಲ್ಲ. 38 ವರ್ಷದ ವ್ಯಾನ್ ಡರ್ ದಕ್ಷಿಣ ಆಫ್ರಿಕಾ ವಿರುದ್ಧ ಕವರ್​​ನಲ್ಲಿ ಟಾಪ್ ಕ್ಲಾಸ್​ ಫೀಲ್ಡಿಂಗ್ ಮಾಡಿದ್ರು.

Sulekha