ವಿಶ್ವಕಪ್ನಲ್ಲಿ ಅಂಪೈರ್ಗಳು ಎಡವುತ್ತಿದ್ದಾರಾ? – ಕೆಲ ಅಂಪೈರ್ಗಳ ತಪ್ಪು ನಿರ್ಧಾರದಿಂದ ತಂಡಗಳಿಗೆ ಭಾರಿ ಹೊಡೆತ
ಕ್ರಿಕೆಟ್ನಲ್ಲಿ ಅಂಪೈರ್ಗಳ ಪಾತ್ರ ಕೂಡ ಆಟಗಾರರಷ್ಟೇ ಮುಖ್ಯವಾಗಿರುತ್ತೆ. ಅಂಪೈರ್ಗಳ ಒಂದೊಂದು ಡಿಸೀಶನ್ ಕೂಡ ಮ್ಯಾಚ್ನ ರಿಸಲ್ಟ್ ಮೇಲೆ ಎಫೆಕ್ಟ್ ಆಗುತ್ತೆ. ಅಂಪೈರ್ನ ಒಂದು ಬ್ಯಾಡ್ ಡಿಸೀಶನ್ ಒಂದು ತಂಡದ ಸೋಲಿಗೆ ಕಾರಣವಾಗಬಹುದು. ಮತ್ತೊಂದು ಟೀಂನ ಗೆಲುವಿಗೂ ಕಾರಣವಾಗಬಹುದು. ಅದ್ರಲ್ಲೂ ವರ್ಲ್ಡ್ಕಪ್ನಂಥಾ ಟೂರ್ನಿ ವೇಳೆಯಂತೂ ಅಂಪೈರ್ಗಳ ಡಿಸೀಶನ್ನಿಂದ ತಂಡ ಟೂರ್ನಿಯಿಂದಲೇ ಔಟ್ ಆದ್ರೂ ಆಶ್ಚರ್ಯ ಇಲ್ಲ. ಹೀಗಾಗಿ ವಿಶ್ವಕಪ್ ಟೂರ್ನಿಗೆ ವರ್ಲ್ಡ್ಕ್ಲಾಸ್ ಅಂಪೈರ್ಸ್ಗಳನ್ನೇ ನೇಮಕ ಮಾಡಲಾಗುತ್ತೆ. ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ತನ್ನ ಬೆಸ್ಟ್ ಅಂಪೈರ್ಸ್ಗಳನ್ನೇ ಸೆಲೆಕ್ಟ್ ಮಾಡಿರುತ್ತೆ. ಆದ್ರೂ ಅದ್ಯಾಕೋ ಈ ಬಾರಿಯ ವರ್ಲ್ಡ್ಕಪ್ನಲ್ಲಿ ಕೆಲ ಅಂಪೈರ್ಸ್ಗಳ ತಪ್ಪು ನಿರ್ಧಾರ ತಂಡಗಳಿಗೆ ಭಾರಿ ಹೊಡೆತ ನೀಡುತ್ತಿರುವಂತೆ ಕಾಣ್ತಿದೆ.
ಇದನ್ನೂ ಓದಿ: 2028ರ ಒಲಿಂಪಿಕ್ಸ್ ಕ್ರೀಡೆಗಳ ಪಟ್ಟಿಗೆ ಕ್ರಿಕೆಟ್ ಸೇರ್ಪಡೆ – 123 ವರ್ಷಗಳ ಬಳಿಕ ಕ್ರಿಕೆಟ್ಗೆ ಒಲಿದ ಸ್ಥಾನ
ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ನಡುವಿನ ಪಂದ್ಯದ ವೇಳೆ ಒಂದು ಇಂಟ್ರೆಸ್ಟಿಂಗ್ ಬೆಳವಣಿಗೆ ನಡೆದಿದೆ. ಆಸ್ಟ್ರೇಲಿಯಾದ ಮೇನ್ ಬ್ಯಾಟ್ಸ್ಮನ್ ಓಪನರ್ ಡೇವಿಡ್ ವಾರ್ನರ್ 5 ಬಾಲ್ಗಳಲ್ಲಿ 11 ರನ್ ಗಳಿಸಿ ಆಡುತ್ತಿದ್ದರು. ಈ ವೇಳೆ ದಿಲ್ಶಾನ್ ಎಸೆದ ಬಾಲ್ ಬ್ಯಾಟ್ನಿಂದ ಮಿಸ್ ಆಗಿ ನೇರವಾಗಿ ಪ್ಯಾಡ್ಗೆ ಬಡಿದಿದೆ. ಶ್ರೀಲಂಕನ್ನರು ಅಪೀಲ್ ಮಾಡುತ್ತಲೇ ಅಂಪೈರ್ ಜೋ ವಿಲ್ಸನ್ ನೇರವಾಗಿ ಔಟ್ ಕೊಟ್ಟಿದ್ದಾರೆ. ಕೂಡಲೇ ಡೇವಿಡ್ ವಾರ್ನರ್ ರಿವ್ಯೂ ತೆಗೆದುಕೊಂಡ್ರು. ಈ ವೇಳೆ ಪರಿಶೀಲನೆ ನಡೆಸಿದಾಗ ಬಾಲ್ ಆಲ್ಮೋಸ್ಟ್ ಔಟ್ ಸೈಡ್ ದಿ ಆಫ್ ಸ್ಟಂಪ್ ಹೋಗಿರೋದು ಸ್ಪಷ್ಟವಾಗಿತ್ತು. ಆಫ್ ಸ್ಟಂಪ್ ಎಡ್ಜ್ಗೆ ಬಾಲ್ ಬಡಿದಿರೋದು ಬಾಲ್ ಟ್ರ್ಯಾಕಿಂಗ್ ಸಿಸ್ಟಮ್ನಿಂದ ಸ್ಪಷ್ಟವಾಗಿತ್ತು. ಆದರೂ, ರೂಲ್ಸ್ ಪ್ರಕಾರ ಡೇವಿಡ್ ವಾರ್ನರ್ ಔಟ್ ಆಗಿದ್ರು. ಯಾಕಂದ್ರೆ, ಅಂಪೈರ್ ಮೊದಲಿಗೆ ಔಟ್ ಅನ್ನೋ ಡಿಸೀಶನ್ ತೆಗೆದುಕೊಂಡಿದ್ರು. ಅಂಪೈರ್ಸ್ ಕಾಲ್ ಆಗಿರೋದ್ರಿಂದ ಬಾಲ್ ಆಫ್ ಸ್ಟಂಪ್ ಎಡ್ಜ್ಗೆ ಬಡಿಯುವಂತೆ ಇದ್ದರೂ ವಾರ್ನರ್ ಕ್ರೀಸ್ನಿಂದ ಹೊರನಡೆಯಬೇಕಾಯ್ತು. ಡಿಸೀಶನ್ ಶ್ರೀಲಂಕನ್ನರ ಫೇವರ್ ಆಗಿತ್ತು.
ಇಲ್ಲಿ ಪ್ರಾಬ್ಲಂ ಆಗ್ತಿರೋದು ಇದೇ ಅಂಪೈರ್ಸ್ ಕಾಲ್ನಲ್ಲಿ. ಒಂದು ವೇಳೆ ಅಂಪೈರ್ ನಾಟ್ಔಟ್ ಅಂತಾ ಡಿಸೀಶನ್ ಕೊಟ್ಟು, ಆಗ ಶ್ರೀಲಂಕನ್ನರು ರಿವ್ಯೂ ತಗೋತಿದ್ರೆ ಡೇವಿಡ್ ವಾರ್ನರ್ ನಾಟ್ಔಟ್ ಆಗುತ್ತಿದ್ದರು. ಆದ್ರೆ ಅಂಪೈರ್ ಔಟ್ ಅಂತಾ ಕೊಟ್ಟಿದ್ರಿಂದಾಗಿ ರಿವ್ಯೂ ಕೂಡ ವಾರ್ನರ್ಗೆ ಉಲ್ಟಾ ಹೊಡೆಯಿತು. ರೊಚ್ಚಿಗೆದ್ದ ವಾರ್ನರ್ ಬ್ಯಾಟ್ನ್ನ ನೆಲಕ್ಕೆ ಬಡಿದು ಬಳಿಕ ಅಂಪೈರ್ಗೆ ಬೈದುಕೊಂಡೇ ಹೊರ ನಡೆದರು. ಅಂಪೈರ್ ಡಿಸೀಶನ್ನಲ್ಲಾದ ಎಡವಟ್ಟಿನಿಂದ ಡೇವಿಡ್ ವಾರ್ನರ್ ಔಟಾಗಬೇಕಾಯ್ತು.
ಇಂಥಾ ಡಿಸೀಶನ್ಗಳು ಬಂದಿರೋದು ಇದೇ ಮೊದಲೇನಲ್ಲ. ಅಫ್ಘಾನಿಸ್ತಾನ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದ ವೇಳೆಯೂ ಇದೇ ರೀತಿ. ದಕ್ಷಿಣ ಆಫ್ರಿಕಾ-ಆಸ್ಟ್ರೇಲಿಯಾ ಮ್ಯಾಚ್ ವೇಳೆಯೂ ಹೀಗೆಯೇ ಆಗಿತ್ತು. ಅಷ್ಟೇ ಅಲ್ಲ, ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಭಾರತ-ಪಾಕಿಸ್ತಾನ ಮ್ಯಾಚ್ ವೇಳೆಯೂ ಅಂಪೈರ್ಸ್ ಕಾಲ್ನಿಂದ ಟೀಂ ಇಂಡಿಯಾಗೆ ನಷ್ಟವಾಗಿತ್ತು. ಕುಲ್ದೀಪ್ ಯಾದವ್ ಬೌಲಿಂಗ್ನಲ್ಲಿ ಪಾಕಿಸ್ತಾನದ ಬಾಬರ್ ಆಜಂ ಸ್ವೀಪ್ ಮಾಡೋಕೆ ಮುಂದಾಗ್ತಾರೆ. ಆಗ ಬಾಲ್ ಪ್ಯಾಡ್ಗೆ ಬಡಿಯುತ್ತೆ. ಆನ್ಫೀಲ್ಡ್ ಅಂಪೈರ್ ಆಗಿದ್ದ ಮ್ಯಾರಿಸ್ ಎರಾಸಮ್ಸ್ ನಾಟ್ಔಟ್ ಕೊಡ್ತಾರೆ. ಭಾರತ ರಿವ್ಯೂ ತೆಗೆದುಕೊಳ್ಳುತ್ತೆ. ಆಗ ಬಾಲ್ ಸೈಡ್ ಸ್ಟಂಪ್ಗೆ ಬಡಿದಿತ್ತು. ಒಂದು ವೇಳೆ ಅಂಪೈರ್ ಔಟ್ ಕೊಡ್ತಿದ್ರೆ ಆಗ ಬಾಬರ್ ಆಜಂ ಕ್ರೀಸ್ ಬಿಡಬೇಕಿತ್ತು. ಅಂಪೈರ್ ನಾಟ್ಔಟ್ ಕೊಟ್ಟಿದ್ರಂದಾಗಿ ಆಗ ಬಚಾವಾಗಿದ್ರು. ಆ ಮ್ಯಾಚ್ನಲ್ಲಿ ಅಂಪೈರ್ ಮ್ಯಾರಿಸ್ ಎರಾಸಮ್ಸ್ ಒಟ್ಟು ನಾಲ್ಕು ಬಾರಿ ಪಾಕಿಸ್ತಾನದ ಫೇವರ್ ಆಗಿಯೇ ಡಿಸೀಶನ್ ಕೊಟ್ಟಿದ್ರು. ಡಿಆರ್ಎಸ್ ಸಿಸ್ಟಮ್ನಿಂದಾಗಿ ಕೆಲ ಡಿಸೀಶನ್ಗಳು ಭಾರತದ ಫೇವರ್ ಆಗಿತ್ತು. ಆ ಪಂದ್ಯದ ಬಳಿಕ ಅಂಪೈರ್ ಮ್ಯಾರಿಸ್ ಎರಾಸಮ್ಸ್ರನ್ನ ಪಾಕಿಸ್ತಾನದ 12th ಪ್ಲೇಯರ್ ಅಂತಾನೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗಿತ್ತು.
ಇನ್ನು ರೋಹಿತ್ ಶರ್ಮಾ ಮೇಲಿಂದ ಮೇಲೆ ಸಿಕ್ಸರ್ ಹೊಡೀತಿದ್ದಾಗ, ಇದೇ ಅಂಪೈರ್ ನಿಮ್ಮ ಬ್ಯಾಟ್ನಲ್ಲಿ ಏನೋ ಇದೆ ಅಂತಾ ಕೇಳಿದ್ರಂತೆ. ಆಗ ರೋಹಿತ್ ನನ್ನ ಮಸಲ್ ಪವರ್ನಿಂದಾಗಿ ಸಿಕ್ಸ್ ಹೊಡೀತೀನಿ ಎಂದು ಹೇಳಿದ್ದರು.