ಪಾಕಿಸ್ತಾನಕ್ಕಿಂತ ಅಫ್ಘಾನಿಸ್ತಾನ ಕ್ರಿಕೆಟ್ ತಂಡವೇ ಬೆಟರ್ – ಅಫ್ಘಾನಿಸ್ತಾನ ಟೀಮ್ ಸಕ್ಸಸ್‌ನ ಹಿಂದಿದೆ ಭಾರತೀಯ ಮಾಜಿ ಕ್ರಿಕೆಟಿಗರ ಕೊಡುಗೆ..!

ಪಾಕಿಸ್ತಾನಕ್ಕಿಂತ ಅಫ್ಘಾನಿಸ್ತಾನ ಕ್ರಿಕೆಟ್ ತಂಡವೇ ಬೆಟರ್ – ಅಫ್ಘಾನಿಸ್ತಾನ ಟೀಮ್ ಸಕ್ಸಸ್‌ನ ಹಿಂದಿದೆ ಭಾರತೀಯ ಮಾಜಿ ಕ್ರಿಕೆಟಿಗರ ಕೊಡುಗೆ..!

ವರ್ಲ್ಡ್​ಕಪ್​​ನ ಮುಂದಿನ ಪಂದ್ಯಗಳು ಇಂಟ್ರೆಸ್ಟಿಂಗ್ ಆಗಿವೆ. ಯಾಕೆಂದರೆ ಮುಂದಿನ ಎರಡು ಪಂದ್ಯಗಳಲ್ಲಿ ಅಫ್ಘಾನಿಸ್ತಾನ ತಂಡ ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್​​ನ್ನ ಎದುರಿಸಲಿದೆ. ಈ ಎರಡೂ ಮ್ಯಾಚ್​ಗಳು ಚೆನ್ನೈನಲ್ಲಿ ನಡೆಯುತ್ತವೆ. ಹೇಳಿಕಳಿ ಚೆನ್ನೈ ಪಿಚ್ ಸ್ಪಿನ್ನರ್ಸ್​ಗಳಿಗೆ ಫೇವರ್ ಆಗಿದೆ. ಹೀಗಾಗಿ ಪಾಕಿಸ್ತಾನಿ ಬ್ಯಾಟ್ಸ್​​ಮನ್​ಗಳನ್ನ ಆಫ್ಘನ್ ಸ್ಪಿನ್ನರ್ಸ್​ಗಳು ಕಾಡೋದಂತೂ ಗ್ಯಾರಂಟಿ.

ಇದನ್ನೂ ಓದಿ: ಅಫ್ಘಾನಿಸ್ತಾನ ವಿರುದ್ಧ ಸೋತು ಸುಣ್ಣವಾದ ಹಾಲಿ ಚಾಂಪಿಯನ್ ಇಂಗ್ಲೆಂಡ್ –ಆಂಗ್ಲರ ಅವಮಾನಕರ ಸೋಲಿಗೆ ಸಿಕ್ಕಾಪಟ್ಟೆ ಟ್ರೋಲ್

ಪಾಕಿಸ್ತಾನಕ್ಕಿಂತ ಅಫ್ಘಾನಿಸ್ತಾನ ಕ್ರಿಕೆಟ್ ತಂಡ ಎಷ್ಟೊ ವಾಸಿ ಎನ್ನಲಾಗುತ್ತಿದೆ. ಭಾರತ-ಪಾಕಿಸ್ತಾನ ಮ್ಯಾಚ್​​ಗಿಂತ ಇಂಗ್ಲೆಂಡ್-ಅಫ್ಘಾನಿಸ್ತಾನ ಪಂದ್ಯವೇ ಹೆಚ್ಚು ಇಂಟ್ರೆಸ್ಟಿಂಗ್ ಆಗಿತ್ತು. ಜೊತೆಗೆ ಪಾಕಿಸ್ತಾನಿಗಳಿಗಿಂತ ಆಫ್ಘನ್ನರು ಬೆಟರ್ ಪರ್ಫಾಮೆನ್ಸ್​ ಕೂಡ ನೀಡಿದ್ದಾರೆ. ಭಾರತ ವಿರುದ್ಧದ ಪಂದ್ಯದಲ್ಲೂ ಅಫ್ಘಾನಿಸ್ತಾನ ಉತ್ತಮವಾಗಿಯೇ ಬ್ಯಾಟಿಂಗ್ ಮಾಡಿತ್ತು. ಆದರೆ, ಪಾಕಿಸ್ತಾನ ಮಾತ್ರ ಯಾವ ಹಂತದಲ್ಲೂ ಕೂಡ ಭಾರತಕ್ಕೆ ಚಾಲೆಂಜ್ ಆಗಿಯೇ ಇರಲಿಲ್ಲ. ಆಫ್ಘನ್ ಸ್ಪಿನ್ನರ್​ಗಳು, ಪೇಸ್​ ಬೌಲರ್ಸ್ ಟಾಪ್​ ಕ್ಲಾಸ್ ಆಗಿ ಪರ್ಫಾಮ್ ಮಾಡ್ತಿದ್ದಾರೆ. ಆದ್ರೆ ಪಾಕ್​ ಬೌಲರ್ಸ್​ಗಳು ಶೇಪ್​ಔಟ್ ಆಗಿದ್ದಾರೆ.

ಇನ್ನು ಅಫ್ಘಾನಿಸ್ತಾನ ಕ್ರಿಕೆಟ್​​ ಟೀಂನ ಈ ಸಕ್ಸಸ್ ಹಿಂದೆ ಭಾರತದ ಒಂದಷ್ಟು ಕೊಡುಗೆ ಕೂಡ ಇದೆ. ಅಫ್ಘಾನಿಸ್ತಾನ ಕ್ರಿಕೆಟಿಗರಿಗೆ ಅಂತಾ ಬಿಸಿಸಿಐ ಭಾರತದಲ್ಲೇ ಪ್ರತ್ಯೇಕ ವ್ಯವಸ್ಥೆ ಕೂಡ ಮಾಡಿದೆ. ದೆಹಲಿ ಬಳಿ ಇರುವ ಗ್ರೇಟರ್​ ನೋಯ್ಡಾದಲ್ಲಿ ವಿಜಯ್​ ಸಿಂಗ್ ಸ್ಪೋರ್ಟ್ಸ್​​ ಕಾಂಪ್ಲೆಕ್ಸ್ ಇದೆ. 2015ರಿಂದಲೂ ಇದು ಅಫ್ಘಾನಿಸ್ತಾನ ಕ್ರಿಕೆಟ್​​ ತಂಡಕ್ಕೆ ಹೋಂ ಗ್ರೌಂಡ್ ಆಗಿದೆ. ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ಸ್​ಗಳಾದ ಲಾಲ್​ಚಂದ್ ರಜಪೂತ್ ಮತ್ತು ಮನೋಜ್​ ಪ್ರಭಾಕರ್ ಅಫ್ಘಾನಿಸ್ತಾನ ತಂಡಕ್ಕೆ ಕೋಚಿಂಗ್ ಮಾಡ್ತಾ ಬಂದಿದ್ದಾರೆ. ಕಳೆದ 8 ವರ್ಷಗಳಿಂದಲೂ ಅಫ್ಘಾನಿಸ್ತಾನ ಕ್ರಿಕೆಟಿಗರಿಗೆ ಬಿಸಿಸಿಐ ವರ್ಲ್ಡ್​ಕ್ಲಾಸ್ ಲೆವೆಲ್ ಕೋಚಿಂಗ್ ನೀಡ್ತಿದೆ. ಅಷ್ಟೇ ಅಲ್ಲ, ಮಾಜಿ ಕ್ರಿಕೆಟರ್​ ಅಜಯ್​ ಜಡೇಜಾ ಈಗ ಅಫ್ಘಾನಿಸ್ತಾನ ತಂಡದ ಮೆಂಟರ್​​ ಕೂಡ ಆಗಿದ್ದಾರೆ. ಇದು ಕೂಡ ಆಫ್ಘನ್​ ಕ್ರಿಕೆಟಿಗರಿಗೆ ಸಾಕಷ್ಟು ನೆರವಾಗ್ತಿದೆ. ಇದ್ರ ಜೊತೆಗೆ ಐಪಿಎಲ್​ನಲ್ಲಿ ಕೂಡ ಅಫ್ಘಾನಿಸ್ತಾನದ ಕೆಲ ಪ್ಲೇಯರ್ಸ್ ಆಡ್ತಾ ಇದ್ದಾರೆ. ಇವೆಲ್ಲವೂ ಈ ವರ್ಲ್ಡ್​​ಕಪ್​​ನಲ್ಲಿ ಅಫ್ಘಾನಿಸ್ತಾನ ತಂಡಕ್ಕೆ ಅಡ್ವಾಂಟೇಜ್ ಆಗ್ತಿದೆ.

 

Sulekha