ನಿದ್ರೆ ಮಾಡುವಾಗ ಇದ್ದಕ್ಕಿದ್ದಂತೆ ಉಸಿರುಗಟ್ಟಲು ಇದೇ ಕಾರಣ!

ನಿದ್ರೆ ಮಾಡುವಾಗ ಇದ್ದಕ್ಕಿದ್ದಂತೆ ಉಸಿರುಗಟ್ಟಲು ಇದೇ ಕಾರಣ!

ದಿನವಿಡೀ ಕೆಲಸ ಮಾಡಿದ ನಂತರ ರಾತ್ರಿ ಮಾಡುವ ನಿದ್ದೆಯಿಂದ ದೇಹ ಮತ್ತು ಮನಸ್ಸು ಎರಡಕ್ಕೂ ಆರಾಮ ಸಿಗುತ್ತದೆ. ಈ ಕಾರಣದಿಂದಲೇ ರಾತ್ರಿ ನಿದ್ದೆ ಪ್ರತಿಯೊಬ್ಬನಿಗೂ ಬಹಳ ಮುಖ್ಯವಾಗಿರುತ್ತದೆ. ಒಬ್ಬ ಆರೋಗ್ಯವಂತ ಮನುಷ್ಯ ದಿನಕ್ಕೆ 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡಬೇಕು ಎಂದು ಹೆಚ್ಚಿನ ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ. ಆದ್ರೆ ಕೆಲವರಿಗೆ ಇದ್ದಕ್ಕಿದ್ದಂತೆ ನಿದ್ರೆಯಲ್ಲಿ ಉಸಿರುಗಟ್ಟಿದಂತಾಗುತ್ತದೆ. ಇದನ್ನು  ಅಬ್‌ಸ್ಟ್ರಕ್ಟೀವ್ ಸ್ಲೀಪ್ ಅಪ್ನಿಯಾ ಅಂತಾ ಕರಿತಾರೆ.

ಇದನ್ನೂ ಓದಿ: 10 ಗಂಟೆಗಿಂತ ಹೆಚ್ಚು ಹೊತ್ತು ಕೂತ್ರೆ ಜೀವಕ್ಕೆ ಕಂಟಕ? -ಅಧ್ಯಯನದಲ್ಲಿ ಬಯಲಾಯ್ತು ಶಾಕಿಂಗ್‌ ವಿಚಾರ!

ಭಾರತದಲ್ಲಿ ಬರೋಬ್ಬರಿ 10 ಕೋಟಿಗೂ ಹೆಚ್ಚು ಮಂದಿಗೆ ಸ್ಲೀಪ್ ಅಪ್ನಿಯಾ ಸಮಸ್ಯೆ ಇದೆ ಎಂದು  ಏಮ್ಸ್ ವೈದ್ಯರ ಅಧ್ಯಯನ ವರದಿ ಹೇಳುತ್ತಿದೆ. ಮಲಗುವಾಗ ಸರಿಯಾದ ಪ್ರಮಾಣದಲ್ಲಿ ಆಮ್ಲಜನಕ ದೇಹಕ್ಕೆ ಸಿಗದಿರುವುದು, ಮೂಗಿನ ಮೂಲಕ ಉಸಿರಾಟದ ಸಮಸ್ಯೆ ಎದುರಾದಾಗ ಸ್ಲೀಪ್ ಅಪ್ನಿಯಾ ಉಂಟಾಗುತ್ತೆ. ನಾವು ಮಲಗುವಾಗ ಗಂಟಲು, ಗಂಟಲು ನಾಳ, ನಾಲಗೆ ಸೇರಿದಂತೆ ಹಲವು ಅಂಗಾಂಗಗಳು ವಿಶ್ರಾಂತಿಗೆ ಜಾರುತ್ತವೆ. ಈ ವೇಳೆ ಗಂಟಲು ನಾಳದಲ್ಲಿನ ಮಸಲ್ ಸಡಿಲಗೊಳ್ಳುತ್ತದೆ. ಇದರಿಂದ ಉಸಿರಾಡುವಾಗ ಗಾಳಿ ಶ್ವಾಸಕೋಶ ಸೇರುವ ನಾಳ ಮತ್ತಷ್ಟು ಚಿಕ್ಕದಾಗುತ್ತದೆ.  ಇದರಿಂದ ಮೂಗಲ್ಲಿ ಉಸಿರಾಡುವುದು ಕಷ್ಟವಾಗುತ್ತೆ. ಹೀಗಾಗಿ ಪೂರ್ಣ ಪ್ರಮಾಣದ ನಿದ್ದೆಯಾಗುವುದಿಲ್ಲ. ಹೆಚ್ಚು ಹೊತ್ತು ನಿದ್ದೆ ಮಾಡಿದರೂ ನಿದ್ದೆ ಬಿಟ್ಟಿರುವುದಿಲ್ಲ. ಈ ಸಮಸ್ಯೆಗೆ ಮುಖ್ಯ ಕಾರಣ ಇಂದಿನ ಲೈಫ್‌ಸ್ಟೈಲ್. ವ್ಯಾಯಾಮದ ಕೊರತೆ, ಹೆಚ್ಚಿನ ಒತ್ತಡ ಸೇರಿದಂತೆ ಕೆಟ್ಟ ಜೀವನಕ್ರಮಗಳಿಂದ ಸ್ಲೀಪ್ ಅಪ್ನಿಯಾ ಕಾಡುತ್ತದೆ ಅಂತಾ ಅಧ್ಯಯನದಿಂದ ಗೊತ್ತಾಗಿದೆ‌.

Shwetha M