ನಿಮ್ಮ ಟೂತ್ ಪೇಸ್ಟ್ ನಲ್ಲಿ ಉಪ್ಪಿದ್ರೆ ಒಳ್ಳೆದಾ? – ಹಲ್ಲಿನ ಆರೋಗ್ಯ ಕಾಪಾಡುತ್ತಾ?
ಬಾಯಿ ಮತ್ತು ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಕೆಟ್ಟ ಉಸಿರು ಮತ್ತು ಅನೈರ್ಮಲ್ಯದ ಹಲ್ಲುಗಳು ಇತರರೊಂದಿಗೆ ಸಂವಹನ ನಡೆಸುವಾಗ ಮುಜುಗರಕ್ಕೊಳಪಡಿಸಬಹುದು. ಹಲ್ಲಿನ ಸ್ವಚ್ಛತೆಗೆ ಟೂತ್ ಪೇಸ್ಟ್ ಬಳಸುವುದು ಸಾಮಾನ್ಯ. ಹಲ್ಲಿ ಸ್ವಚ್ಛವಾಗಿ ಇರಬೇಕು ಅಂತಾ ಉತ್ತಮಗುಣಮಟ್ಟದ ಟೂತ್ಪೇಸ್ಟ್ ಅನ್ನು ಹುಡುಕುತ್ತಾರೆ. ಇದರಲ್ಲಿ ಉಪ್ಪು ಇದ್ಯಾ ಅಂತಾ ಕೂಡ ಪರೀಕ್ಷಿಸುತ್ತಾರೆ.
ಉಪ್ಪಿರೋ ಟೂತ್ ಪೇಸ್ಟ್ ಬಳಸಬೇಕು ಅಂತಾ ಅನೇಕರು ಹೇಳುತ್ತಾರೆ. ಟೂಟ್ಪೇಸ್ಟ್ನಲ್ಲಿ ಉಪ್ಪು ಇದ್ರೆ ಒಳ್ಳೆದಾ ಕೆಟ್ಟದ್ದಾ ಅಂತಾ ಅನೇಕರಿಗೆ ಗೊಂದಲವಿದೆ. ಟೂಟ್ಪೇಸ್ಟ್ನಲ್ಲಿ ಉಪ್ಪಿದ್ರೆ ಒಳ್ಳೆದು. ಯಾಕಂದ್ರೆ ಟೂತ್ ಪೇಸ್ಟ್ ನಲ್ಲಿ ಅಬ್ರೆಸಿವ್ಸ್, ಫ್ಲೋರೈಡ್, ಮಾರ್ಜಕ, ಹ್ಯೂಮೆಕ್ಟಂಟ್ ರಾಸಾಯನವನ್ನು ಬಳಸಲಾಗುತ್ತೆ. ಇನ್ನು ಈ ರಾಸಾಯನಿಕಗಳ ಜೊತೆ ಟೂತ್ ಪೇಸ್ಟ್ ನಲ್ಲಿ ಉಪ್ಪು ಇರುವುದು ಕೂಡ ಮುಖ್ಯವಾಗುತ್ತೆ. ಉಪ್ಪು ನಿಮ್ಮ ಹಲ್ಲುಗಳನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತೆ.
ಇದನ್ನೂ ಓದಿ: ಮುಸುಕು ಹಾಕಿ ಮಲಗೋ ಅಭ್ಯಾಸ ಇದ್ಯಾ? – ಉಸಿರಾಡಿ ಬಿಟ್ಟ ಗಾಳಿಯಿಂದಲೇ ಆಪತ್ತು?
ಉಪ್ಪಿನ ದೊಡ್ಡ ಕಾರ್ಯವೆಂದರೆ ಬಾಯಿಯಲ್ಲಿ ಲಾಲಾರಸವನ್ನು ಹೆಚ್ಚಿಸೋದು. ಇದರಿಂದ ಬಾಯಿಯಲ್ಲಿರುವ ರೋಗಾಣುಗಳು ನಿವಾರಣೆಯಾಗುತ್ತವೆ. ದೀರ್ಘಕಾಲದವರೆಗೆ ಬಾಯಿಯನ್ನು ಮುಚ್ಚುವುದರಿಂದ, ಬಾಯಿಯಲ್ಲಿ ಶಿಲೀಂಧ್ರದ ಪ್ರಮಾಣ ಹೆಚ್ಚಾಗುತ್ತೆ. ಬಾಯಿಯಿಂದ ವಾಸನೆ ಬರಲು ಪ್ರಾರಂಭವಾಗುತ್ತೆ. ಈ ಸಮಯದಲ್ಲಿ ಉಪ್ಪಿನಲ್ಲಿರುವ ಮೆಗ್ನೀಸಿಯಮ್ ಕ್ಲೋರೈಡ್ ಲಾಲಾರಸವನ್ನು ಹೆಚ್ಚಿಸುವ ಕೆಲಸ ಮಾಡುತ್ತೆ. ಈ ಲಾಲಾರಸ ರೋಗಾಣುಗಳಿಂದ ರಕ್ಷಿಸುತ್ತೆ. ಇದಲ್ಲದೆ, ಉಪ್ಪು ಹಲ್ಲುಗಳಲ್ಲಿರುವ ನೈಸರ್ಗಿಕ ದಂತಕವಚವನ್ನು ಕ್ಯಾಲ್ಸಿಯಂ ಮತ್ತು ಫ್ಲೋರೈಡ್ ಗಳಿಂದ ಹೆಚ್ಚು ಸಂವೇದನಾಶೀಲವಾಗಿಸುತ್ತೆ. ಒಸಡುಗಳ ಉರಿಯೂತ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡುವ ಶಕ್ತಿಯನ್ನು ಉಪ್ಪು ಹೊಂದಿದೆ. ಹೀಗಾಗಿ ನಮ್ ಟೂತ್ ಪೇಸ್ಟ್ ನಲ್ಲಿ ಉಪ್ಪಿರುವುದು ಬಹಳ ಒಳ್ಳೆಯದು.