ನೀವು ಒಂದೇ ಬಾತ್ ಟವೆಲ್ ಬಳಸುತ್ತೀರಾ? -ಟವೆಲ್ ನಿಂದಲೇ ಕೆಡುತ್ತೆ ಆರೋಗ್ಯ!
ನಾವು ಧರಿಸುವ ಬಟ್ಟೆಯನ್ನು ಹೇಗೆ ಪ್ರತಿದಿನ ತೊಳೆಯುತ್ತೇವೋ ಹಾಗೆಯೇ ನಾವು ದಿನಾಲೂ ಬಳಸುವ ಬಾತ್ ಟವೆಲ್‌ನ್ನೂ ತೊಳೆಯುವ ಅಗತ್ಯವಿದೆ. ಆದರೆ ಕೆಲವರಂತೂ ತಿಂಗಳುಗಟ್ಟಲೆ ಬಾತ್ ಟವೆಲ್‌ನ್ನು ತೊಳೆಯುವುದೇ ಇಲ್ಲ. ಬಾತ್ ಟವೆಲ್ ಅನ್ನು ಸರಿಯಾಗಿ ವಾಶ್ ಮಾಡದೇ ಇದ್ರೆ ಅಪಾಯಕಾರಿ. ಇದ್ರಿಂದಲೇ ಅನೇಕ ಆರೋಗ್ಯ ಸಮಸ್ಯೆ ಕಾಡುವ ಸಾಧ್ಯತೆ ಇದೆ.
ನಿಮ್ಮ ಸ್ನಾನದ ಟವೆಲ್‌ಗಳು ನಿಮ್ಮ ದೇಹದ ಪ್ರತಿಯೊಂದು ಅಂಗವನ್ನು ಸ್ವರ್ಶಿಸುತ್ತೆ. ಹೀಗಾಗಿ ನಾವು ಸ್ನಾನ ಮಾಡುವಾಗ ಉತ್ತಮ ಗುಣಮಟ್ಟದ ಸ್ನಾನದ ಟವಲ್ ಗಳನ್ನು ಉಪಯೋಗಿಸುವುದು ಬಹಳ ಮುಖ್ಯ. ಒಂದೇ ಬಾತ್ ಟವಲ್‌ನ್ನು ದೀರ್ಘಕಾಲದ ವರೆಗೆ ಬಳಸಿದಾಗ ಅದ್ರಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ. ವಾಶ್ ಮಾಡದೇ ಬಾತ್ ಟವೆಲ್ ಯೂಸ್ ಮಾಡಿದ್ರೆ ಚರ್ಮದ ರೋಗ, ಕಣ್ಣಿನ ಅಲರ್ಜಿ ಉಂಟುಮಾಡುವ ಬ್ಯಾಕ್ಟೀರಿಯಾಗಳು ಸೃಷ್ಟಿಯಾಗುತ್ತವೆ.
ಇದನ್ನೂ ಓದಿ: 10 ಗಂಟೆಗಿಂತ ಹೆಚ್ಚು ಹೊತ್ತು ಕೂತ್ರೆ ಜೀವಕ್ಕೆ ಕಂಟಕ? -ಅಧ್ಯಯನದಲ್ಲಿ ಬಯಲಾಯ್ತು ಶಾಕಿಂಗ್ ವಿಚಾರ!
ಹಾಗಾದ್ರೆ ಬಾತ್ ಟವಲ್‌ನ್ನು ಯಾವಾಗೆಲ್ಲಾ ತೊಳೆಯಬೇಕು ಅನ್ನೋ ಪ್ರಶ್ನೆ ನಿಮ್ಮನ್ನ ಕಾಡಬಹುದು. ಪ್ರತಿ ಬಳಕೆಯ ನಂತರ ಟವೆಲ್ ಅನ್ನು ತೊಳೆಯುವುದು ಉತ್ತಮ ಅಭ್ಯಾಸ. ಆದರೆ ಕೆಲವರಿಗೆ ಪ್ರತಿದಿನ ತೊಳೆಯಲು ಸಾಧ್ಯವಾಗುವುದಿಲ್ಲ. ಹಾಗಿರುವಾಗ ನೀವು ಅವುಗಳನ್ನು ಎರಡರಿಂದ ಮೂರು ಬಾರಿ ಬಳಸಿದ ನಂತರ ತೊಳೆಯಲೇಬೇಕು.
ಇನ್ನು ನೀವು ಬಳಕೆ ಮಾಡಿದ ಮೇಲೆ ಟವಲ್ ಯಾವಾಗಲೂ ಒಣಗಿರುವಂತೆ ನೋಡಿಕೊಳ್ಳುವುದು ಮುಖ್ಯ. ಒಣಗಿಸುವಿಕೆಯು ಟವಲ್‌ನಲ್ಲಿರುವ ಸಂಭಾವ್ಯ ಸೂಕ್ಷ್ಮಜೀವಿಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ. ಇನ್ನೂ ಹವಾಮಾನವನ್ನು ಅವಲಂಭಿಸಿ ಟವೆಲ್ ಒಣಗಿಸಲಾಗುತ್ತದೆ. ಶುಷ್ಕ ವಾತಾವರಣದಲ್ಲಿ, ನಿಮ್ಮ ಟವೆಲ್‌ಗಳು ಬೇಗನೆ ಒಣಗಬಹುದು, ಆದರೆ ಮಳೆಗಾಲದಲ್ಲಿ ಯಾವುದೇ ಬಟ್ಟೆಯೂ ಸರಿಯಾಗಿ ಒಣಗುವುದಿಲ್ಲ. ಸೋಂಕನ್ನು ದೂರವಾಗಿಸಲು ನಿಮ್ಮ ಬಟ್ಟೆಗಳನ್ನು ಟವೆಲ್‌ಗಳನ್ನು ಸರಿಯಾಗಿ ಒಣಗಿಸುವುದು ಅತ್ಯಗತ್ಯ.