40 ವರ್ಷ ಕಾದ್ರೂ ಸಿಕ್ಕಿಲ್ಲ ರೈಟ್ ಪರ್ಸನ್! – ತನ್ನನ್ನು ತಾನೇ ಮದುವೆಯಾದ ಮಹಿಳೆ
ಮದುವೆಯಾಗಲು ಸರಿಯಾದ ಸಂಗಾತಿ ಸಿಗುತ್ತಿಲ್ಲ ಅನ್ನೋದು ಇತ್ತೀಚಿನ ಯುವಕ, ಯುವತಿಯರ ದೊಡ್ಡ ಸಮಸ್ಯೆ. ಹೀಗಾಗಿ ಅನೇಕರು ಸಲಿಂಗ ವಿವಾಹವಾಗುತ್ತಿದ್ದಾರೆ. ಇತ್ತೀಚೆಗೆ ತನ್ನನ್ನು ತಾನೇ ಮದುವೆಯಾಗುತ್ತಿರುವವರ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಲ್ಲೊಬ್ಬಳು ಯುವತಿ ಮದುವೆಯಾಗಲು ಮುಂದಾಗಿದ್ದಾಳೆ. ಸುಮಾರು ವರ್ಷಗಳಿಂದ ತನಗೆ ಸರಿಹೊಂದುವ ಯುವಕ ಸಿಗುತ್ತಾನಾ ಅಂತಾ ಕಾದಿದ್ದಾರೆ. ಆಕೆಯ ದುರಾದೃಷ್ಟಕ್ಕೆ ಒಬ್ಬ ಯುವಕನೂ ಸಿಕ್ಕಿಲ್ಲ. ಹೀಗಾಗಿ ಆಕೆ ತನ್ನನ್ನು ತಾನೇ ಮದುವೆಯಾಗಿದ್ದಾಳೆ.
ಈ ವಿಚಿತ್ರ ಘಟನೆ ಲಂಡನ್ನಲ್ಲಿ ನಡೆದಿದೆ. ಲಂಡನ್ನ ನಿವಾಸಿಯಾಗಿರುವ ಸಾರಾ ವಿಲ್ಕಿನ್ಸನ್ ಎನ್ನುವ ಮಹಿಳೆಯೊಬ್ಬಳು ಸರಿಯಾದ ಜೀವನ ಸಂಗಾತಿಗಾಗಿ ವಯಸ್ಸು 42 ಕಾದಿದ್ದಾಳೆ. ತನಗೆ ಇಷ್ಟು ವರ್ಷಗಳಿಂದ ಸರಿಹೊಂದುವ ಸಂಗಾತಿ ಸಿಕ್ಕಿಲ್ಲ ಅಂತಾ ಬೇಸರಗೊಂಡಿದ್ದಳು. ಕೊನೆಗೆ ತನ್ನನ್ನು ತಾನೇ ಮದುವೆಯಾಗುವ ನಿರ್ಧಾರಕ್ಕೆ ಬಂದು ಸ್ನೇಹಿತರು ಹಾಗೂ ಕುಟುಂಬಸ್ಥರ ಸಮ್ಮಖದಲ್ಲಿ ವಿವಾಹವಾಗಿದ್ದಾಳೆ.
ಇದನ್ನೂ ಓದಿ: ಪತಿಯ ಕುಡಿತದ ಚಟಕ್ಕೆ ಬೇಸತ್ತು ಸಾಯಲು ಬಂದ ಹೆಂಡ್ತಿ – ಸಮಾಧಾನಿಸಲು ಬಂದ ಗಂಡನೂ ವಿಧಿಯಾಟಕ್ಕೆ ಬಲಿ!
ಸಾರಾ ತನ್ನನ್ನು ತಾನೇ ಮದುವೆಯಾಗುತ್ತೇನೆ ಅಂತಾ ಬೇಸರದಿಂದ ಸಿಂಪಲ್ ಆಗಿ ಮದುವೆ ಆಗಿಲ್ಲ. ಆಕೆ ತನ್ನ ಮದುವೆಗೆ ಲಕ್ಷಾಂತರ ರೂಪಾಯಿ ಖರ್ಷು ಮಾಡಿದ್ದಾಳೆ. ಈ ಅದ್ದೂರಿ ಮದುವೆಗೆ ಬರೋಬ್ಬರಿ 10 ಲಕ್ಷ ರೂಪಾಯಿ ಖರ್ಚು ಮಾಡಿ ತನ್ನನ್ನು ತಾನೇ ವಿವಾಹವಾಗಿದ್ದಾಳೆ. ಸೆಪ್ಟೆಂಬರ್ 30 ರಂದು ನಡೆದ ಸಮಾರಂಭದಲ್ಲಿ ಸಾರಾಳ 40 ಆತ್ಮೀಯ ಕುಟುಂಬ ಮತ್ತು ಸ್ನೇಹಿತರು ಭಾಗವಹಿಸಿದ್ದರು.
ಸಾರಾ ತನ್ನನ್ನು ತಾನೇ ಮದುವೆಯಾಗಬೇಕೆಂದು ನಿರ್ಧರಿಸಿದಾಗ ಆಕೆ ತನ್ನ ನಿಶ್ಚಿತಾರ್ಥಕ್ಕಾಗಿ ಉಂಗುರ ಖರೀದಿಸಿದ್ದಳು. ನಂತರ ಮದುವೆಯ ತಯಾರಿ ನಡೆಸಿದ್ದಾಳೆ. ಬಿಳಿ ಗೌನ್ ಧರಿಸಿ ಸ್ಥಳಕ್ಕೆ ಬಂದು ಕೇಕ್ ಕಟ್ ಮಾಡಿದ್ದಾಳೆ. ಸಫೊಲ್ಕ್‌ನ ಫೆಲಿಕ್ಸ್‌ಸ್ಟೋವ್‌ನಲ್ಲಿರುವ ಹಾರ್ವೆಸ್ಟ್ ಹೌಸ್‌ನಲ್ಲಿ ತನ್ನ ಸ್ನೇಹಿತರೊಂದಿಗೆ ಮದುವೆ ಎನ್ನುವ ವಿಶೇಷ ದಿನವನ್ನು ಆಚರಿಸಿಕೊಂಡಿದ್ದಾಳೆ.
‘ತಾನು ಹೀಗೆ ಎಲ್ಲರ ಗಮನ ಸೆಳೆದು ಕೇಂದ್ರಬಿಂದುವಾಗಿರಲು ಈ ದಿನ ಅತ್ಯಂತ ಸೂಕ್ತ ಮತ್ತು ಸುಂದರವಾದ ದಿನ. ಈ ಸಮಾರಂಭವು ಅಧಿಕೃತ ವಿವಾಹವಾಗಿರಲಿಲ್ಲ. ಆದರೆ ನನ್ನ ಮದುವೆಯ ದಿನವಾಗಿತ್ತು. ನನ್ನ ಪಕ್ಕದಲ್ಲಿ ನನ್ನ ಸಂಗಾತಿ ಇರಲಿಲ್ಲ ನಿಜ. ಆದರೆ ನಾನ್ಯಾಕೆ ಮದುವೆಯ ಅವಕಾಶವನ್ನು ತಪ್ಪಿಸಿಕೊಳ್ಳಬೇಕು? ಅದಕ್ಕಾಗಿಯೆಂದೇ ಹಣವನ್ನು ಕೂಡಿಟ್ಟಿದ್ದೆ. ಯಾವುದಕ್ಕೆ ಕೂಡಿಟ್ಟಿದ್ದೆನೋ ಅದಕ್ಕಾಗಿ ಆ ಹಣ ವಿನಿಯೋಗಿಸಿದೆ ಅಂತಾ ಸಾರಾ ತನ್ನ ಮದುವೆ ಬಗ್ಗೆ ಹೇಳಿದ್ದಾಳೆ.