ಮೊಬೈಲ್ ಕವರ್ ನಲ್ಲಿ ನೋಟು ಇಡುತ್ತೀರಾ? – ಸಣ್ಣ ತಪ್ಪಿನಿಂದ ಜೀವಕ್ಕೆ ಅಪಾಯ!
ಫೋನ್ ಸ್ಫೋಟಗಳು ಮತ್ತು ಫೋನ್ ಬೆಂಕಿಯನ್ನು ನಾವು ಯಾವಾಗಲೂ ಸುದ್ದಿಯಲ್ಲಿ ನೋಡುತ್ತಲೇ ಇರುತ್ತೇವೆ. ನೀವು ಕೂಡ ಫೋನ್ ಕವರ್ ಹಿಂದೆ ಹಣವನ್ನು ಇಟ್ಟುಕೊಂಡಿದ್ದರೆ, ಇಂದೇ ಮಾಡುವುದನ್ನು ನಿಲ್ಲಿಸಿ. ಏಕೆಂದರೆ ನಿಮ್ಮ ಈ ಅಭ್ಯಾಸವು ನಿಮಗೆ ಮಾರಕವಾಗಿದೆ. ಫೋನ್ ಕವರ್‌ನಲ್ಲಿ ಹಣವನ್ನು ಇಡುವುದರಿಂದ ಫೋನ್ ಬೆಂಕಿಯನ್ನು ಹಿಡಿಯುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ: 10 ಗಂಟೆಗಿಂತ ಹೆಚ್ಚು ಹೊತ್ತು ಕೂತ್ರೆ ಜೀವಕ್ಕೆ ಕಂಟಕ? -ಅಧ್ಯಯನದಲ್ಲಿ ಬಯಲಾಯ್ತು ಶಾಕಿಂಗ್ ವಿಚಾರ!
ಅನೇಕರು ಮೆಟ್ರೋ ಕಾರ್ಡ್, ಎಟಿಎಂ ಕಾರ್ಡ್, ಹಣವನ್ನು ಸ್ಮಾರ್ಟ್ಫೋನಿನ ಕವರ್‌ನಲ್ಲಿ ಇಟ್ಟುಕೊಂಡಿರುತ್ತಾರೆ. ಆದರೆ ಈ ವಸ್ತುಗಳನ್ನು ನಿಮ್ಮ ಫೋನ್‌ನ ಬ್ಯಾಕ್ ಕವರ್‌ನಲ್ಲಿ ಇರಿಸಿದರೆ, ದೊಡ್ಡ ಅಪಾಯ ಕಟ್ಟಿಟ್ಟ ಬುತ್ತಿ. ನೀವು ಮಾಡುವ ಸಣ್ಣ ತಪ್ಪುಗಳು ಜೀವಕ್ಕೆ ಅಪಾಯ ತಂದೊಡುತ್ತದೆ. ಇತ್ತೀಚಿನ ಕೆಲವು ವರದಿಗಳ ಪ್ರಕಾರ, ಬಳಕೆದಾರರ ಮೊಬೈಲ್ ಫೋನ್‌ಗಳು ಸ್ಫೋಟಗೊಳ್ಳಲು ಮೊಬೈಲ್ನ ಬ್ಯಾಕ್ ಕವರ್‌ನಲ್ಲಿ ಎಟಿಎಂ ಕಾರ್ಡ್, ಹಣವನ್ನು ಇಡುವುದು ಒಂದು ಕಾರಣ ಅಂತಾ ಗೊತ್ತಾಗಿದೆ.
ಫೋನ್ ಅನ್ನು ದೀರ್ಘಕಾಲದವರೆಗೆ ಬಳಸಿದಾಗ , ಫೋನ್ ಪ್ರೊಸೆಸರ್ ಶಾಖವನ್ನು ಉತ್ಪಾದಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಮೊಬೈಲ್ ತುಂಬಾ ಬಿಸಿಯಾಗಿ ಫೋನ್ ಸ್ಫೋಟಗೊಳ್ಳುವ ಸಾಧ್ಯತೆಯಿರುತ್ತದೆ. ಇನ್ನು ಫೋನ್ ತಯಾರಿಸುವ ವೇಳೆ ಹಾಗೂ ನೋಟ್ ತಯಾರಿಸುವ ವೇಳೆ ಕೆಲ ರಾಸಾಯನಿಕ ಬಳಕೆ ಮಾಡಲಾಗುತ್ತದೆ. ಇದರಿಂದ ಫೋನಿನಲ್ಲಿ ಶಾಖ ಉತ್ಪತ್ತಿಯಾದಾಗ ರಾಸಾಯನಿಕ ಕ್ರಿಯೆ ನಡೆದು ಪೇಪರ್ ನೋಟು ಸುಟ್ಟುಹೋಗುತ್ತದೆ. ಹೀಗಾಗಿ ನಿಮ್ಮ ಸುರಕ್ಷತೆಗಾಗಿ ಇಂತh ಅಭ್ಯಾಸಗಳನ್ನು ಇಂದೇ ಬಿಟ್ಟುಬಿಡಿ.