ಐಟಿ ದಾಳಿಯ ಬಗ್ಗೆ ಬಿಜೆಪಿ, ಜೆಡಿಎಸ್ ನವರೇ ತನಿಖಾಧಿಕಾರಿಗಳು, ಅವರೇ ನ್ಯಾಯಾಧೀಶರು, ಅವರದ್ದೇ ತೀರ್ಪು!! – ಕಾಂಗ್ರೆಸ್

ಬೆಂಗಳೂರು: ಬೆಂಗಳೂರಿನ ಗುತ್ತಿಗೆದಾರರೊಬ್ಬರ ಮನೆಯಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿ 42 ಕೋಟಿ ರುಪಾಯಿಗಳನ್ನು ವಶಕ್ಕೆ ಪಡೆದಿದ್ದು, ಈ ಐಟಿ ದಾಳಿ ಪ್ರಕರಣ ಇದೀಗ ರಾಜಕೀಯ ಪಕ್ಷಗಳ ನಡುವೆ ಜಟಾಪಟಿಗೆ ಕಾರಣವಾಗಿದೆ. ಐಟಿ ಅಧಿಕಾರಿಗಳು ವಶಕ್ಕೆ ಪಡೆದ ಹಣ ಕಮಿಷನ್ ನೀಡಲು ತಂದಿಟ್ಟಿದ್ದ ಹಣವಾಗಿದ್ದು, ತೆಲಂಗಾಣ ಚುನಾವಣೆಗೆ ಕಾಂಗ್ರೆಸ್ ರಾಜ್ಯದಲ್ಲಿ ಹಣ ಸಂಗ್ರಹಿಸುತ್ತಿದೆ ಎಂದು ಬಿಜೆಪಿ ಹಾಗೂ ಜೆಡಿಎಸ್ ಆರೋಪಿಸಿತ್ತು. ಇದೀಗ ರಾಜ್ಯ ಕಾಂಗ್ರೆಸ್ ಬಿಜೆಪಿ, ಜೆಡಿಎಸ್ ಆರೋಪಕ್ಕೆ ತಿರುಗೇಟು ನೀಡಿದೆ. ಬೆಂಗಳೂರಿನಲ್ಲಿ ನಡೆದ ಐಟಿ ದಾಳಿಯ ಬಗ್ಗೆ ಬಿಜೆಪಿ, ಜೆಡಿಎಸ್ ನವರೇ ತನಿಖಾಧಿಕಾರಿಗಳು, ಅವರೇ ನ್ಯಾಯಾಧೀಶರು, ಅವರದ್ದೇ ತೀರ್ಪು!! ಎಂದು ಕಿಡಿಕಾರಿದೆ.
ಇದನ್ನೂ ಓದಿ: ವಿಶ್ವವಿಖ್ಯಾತ ಮೈಸೂರು ದಸರಾಗೆ ಕ್ಷಣಗಣನೆ – ಕೆಎಸ್ಆರ್ಟಿಸಿ 350 ಹೆಚ್ಚುವರಿ ಬಸ್ಗಳ ಸೇವೆ
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಬೆಂಗಳೂರಿನಲ್ಲಿ ನಡೆದ ಐಟಿ ದಾಳಿಯ ಬಗ್ಗೆ ಬಿಜೆಪಿ, ಜೆಡಿಎಸ್ ನವರೇ ತನಿಖಾಧಿಕಾರಿಗಳು, ಅವರೇ ನ್ಯಾಯಾಧೀಶರು, ಅವರದ್ದೇ ತೀರ್ಪು. ಚಿಲುಮೆ ಪ್ರಕರಣದಲ್ಲಿ ಡಾ ಅಶ್ವತ್ಥ ನಾರಾಯಣ ಅವರ ಲೆಟರ್ ಹೆಡ್ ಸಿಕ್ಕಿತ್ತು. ಆದರೆ ಅವರಿಗೂ ಅದಕ್ಕೂ ಸಂಬಂಧವಿಲ್ಲವೆಂದು ವಾಧಿಸಿದ್ದರು ಎಂದು ಕಾಂಗ್ರೆಸ್ ಹೇಳಿದೆ.
ಗುತ್ತಿಗೆದಾರನ ಮೇಲಿನ ಐಟಿ ದಾಳಿಯಲ್ಲಿ ಸಿಕ್ಕ ಹಣಕ್ಕೆ ಮಾತ್ರ ಯಾವುದೇ ಸಂಬಂಧವಿಲ್ಲದಿದ್ದರೂ, ಯಾವುದೇ ಸಾಕ್ಷಿ ಇಲ್ಲದಿದ್ದರೂ ಕಾಂಗ್ರೆಸ್ ಹೊಣೆಯಾಗುತ್ತದೆ. ಇದು ಬಿಜೆಪಿಯವರ ಲಾಜಿಕ್! ರಾಜ್ಯ ಬಿಜೆಪಿ, ಯಡಿಯೂರಪ್ಪನವರ ಆಪ್ತನ ಮನೆಯ ಮೇಲೆ ಹಿಂದೆ ಐಟಿ ದಾಳಿ ನಡೆದಿತ್ತು, ಆಗ ಸಿಕ್ಕ ಹಣ ಬಿಜೆಪಿಗೆ ಸಂಬಂಧಿಸಿದ್ದೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.