ಭಾರತ ವಿರುದ್ಧ ನಡೆಯುವ ಪಂದ್ಯದಲ್ಲಿ ಪಾಕ್ ಸೋತರೆ ನಾಯಕತ್ವ ಕಳೆದುಕೊಳ್ತಾರಾ ಬಾಬರ್ ಆಜಂ – ಪಾಕ್ ನಾಯಕನಿಗೆ ಎದುರಾಗಲಿದೆ ಅಗ್ನಿಪರೀಕ್ಷೆ..!

ಭಾರತ ವಿರುದ್ಧ ನಡೆಯುವ ಪಂದ್ಯದಲ್ಲಿ ಪಾಕ್ ಸೋತರೆ ನಾಯಕತ್ವ ಕಳೆದುಕೊಳ್ತಾರಾ ಬಾಬರ್ ಆಜಂ – ಪಾಕ್ ನಾಯಕನಿಗೆ ಎದುರಾಗಲಿದೆ ಅಗ್ನಿಪರೀಕ್ಷೆ..!

ಭಾರತ-ಪಾಕಿಸ್ತಾನ ಪಂದ್ಯದ ರಿಸಲ್ಟ್​ ಎರಡೂ ತಂಡಗಳ ಮೇಲೆ ಎಫೆಕ್ಟ್ ಆಗಲಿದೆ. ಗೆದ್ದರೆ ಪಾಸಿಟಿವ್ ಎಫೆಕ್ಟ್.. ಸೋತರೆ ನೆಗೆಟಿವ್ ಎಫೆಕ್ಟ್. ಅದರಲ್ಲೂ ಪಾಕಿಸ್ತಾನದ ಕ್ಯಾಪ್ಟನ್ ಬಾಬರ್ ಆಜಂ ಅಕ್ಷರಶ: ಅಗ್ನಿಪರೀಕ್ಷೆಯನ್ನೇ ಎದುರಿಸಬೇಕು. ಭಾರತದ ವಿರುದ್ಧದ ಪಂದ್ಯ ಬಾಬರ್ ಭವಿಷ್ಯವನ್ನ ಕೂಡ ನಿರ್ಧರಿಸುವ ಸಾಧ್ಯತೆ ಇದೆ. ಒಂದು ವೇಳೆ ಮ್ಯಾಚ್​ ಸೋತರೆ ಬಾಬರ್ ಆಜಂ ಕ್ಯಾಪ್ಟನ್ಸಿಯನ್ನೇ ಕಳೆದುಕೊಳ್ಳುತ್ತಾರಾ ಎಂಬ ಬಗ್ಗೆ ಚರ್ಚೆ ಶುರುವಾಗಿದೆ.

ಇದನ್ನೂ ಓದಿ: ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ – ವೈರಿ ರಾಷ್ಟ್ರದ ಜೊತೆಗಿನ ಮ್ಯಾಚ್ ಬೇಡ ಎಂದು ಬಾಯ್ಕಟ್ ಟ್ರೆಂಡ್

ಬಾಬರ್ ಆಜಂ ಕ್ಯಾಪ್ಟನ್ಸಿ ಮೇಲೆ ಕಳೆದ ಕೆಲ ಸಮಯದಿಂದ ತೂಗುಗತ್ತಿ ನೇತಾಡುತ್ತಲೇ ಇದೆ. ಬಾಬರ್​ ಕ್ಯಾಪ್ಟನ್ಸಿ ಬಗ್ಗೆ ಪಾಕಿಸ್ತಾನದಲ್ಲಿ ಸಾಕಷ್ಟು ಟೀಕೆಗಳು ಕೂಡ ಕೇಳಿ ಬರುತಿತ್ತು. ಜೊತೆಗೆ ಬಾಬರ್​ ಕೂಡ ಇತ್ತೀಚಿನ ದಿನಗಳಲ್ಲಿ ಹೇಳಿಕೊಳ್ಳುವಂತಾ ಪರ್ಫಾಮೆನ್ಸ್ ನೀಡಿಲ್ಲ. ಈ ಎಲ್ಲಾ ಕಾರಣಗಳಿಂದ ಬಾಬರ್​ ಆಜಂ ಮೇಲೆ ಸಾಕಷ್ಟು ಒತ್ತಡ ಕೂಡ ಇದೆ. ಹೀಗಾಗಿ ಭಾರತದ ವಿರುದ್ಧದ ಮ್ಯಾಚ್​ ಬಾಬರ ಆಜಂ ಪಾಲಿಗೆ ಅತ್ಯಂತ ಕ್ರೂಶಿಯಲ್​. ಪಂದ್ಯಕ್ಕೂ ಮುನ್ನ ಪ್ರೆಸ್​​ಮೀಟ್​​ನಲ್ಲಿ ನಿಮಗೆ ಕ್ಯಾಪ್ಟನ್ಸಿ ಕಳೆದುಕೊಳ್ಳುವ ಭಯ ಇದೆಯಾ ಅಂತಾ ಬಾಬರ್​​​ರನ್ನ ಪ್ರಶ್ನಿಸಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಾಬರ್, ನಾನು ಒಂದು ಮ್ಯಾಚ್​​ನಿಂದಾಗಿ ನಾಯಕತ್ವ ಗಳಿಸಿಕೊಂಡಿಲ್ಲ. ಅದೇ ರೀತಿ ಒಂದು ಮ್ಯಾಚ್​​ನಿಂದ ಕ್ಯಾಪ್ಟನ್ಸಿಯನ್ನ ಕಳೆದುಕೊಳ್ಳೋದು ಇಲ್ಲ ಅಂತಾ ಹೇಳಿದ್ದಾರೆ.

ಬಾಬರ್ ಆಜಂ ಏನೇ ಹೇಳಿದರೂ ಭಾರತ ವಿರುದ್ಧದ ಮ್ಯಾಚ್​​ ಮತ್ತು ಈ ವಿಶ್ವಕಪ್​ ಟೂರ್ನಿ ಕ್ಯಾಪ್ಟನ್ ಆಗಿ ಬಾಬರ್ ಭವಿಷ್ಯವನ್ನ ನಿರ್ಧರಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ. ಒಂದು ವೇಳೆ ಭಾರತದ ವಿರುದ್ಧ ಸೋತು, ಮುಂದಿನ ದಿನಗಳಲ್ಲಿ ನಂತರ ಸೆಮಿಫೈನಲ್ ಕೂಡ ಪ್ರವೇಶಿಸದೇ ಇದ್ದಲ್ಲಿ ಬಾಬರ್​ ಕ್ಯಾಪ್ಟನ್ಸಿ ಕಂಟಕ ಎದುರಾಗೋದಂತೂ ಗ್ಯಾರಂಟ. ನಾಯಕತ್ವ ಬದಲಾವಣೆಗೆ ಪಾಕಿಸ್ತಾನದಲ್ಲಿ ತೀವ್ರ ಒತ್ತಾಯ ಕೇಳಿ ಬರಲಿದೆ. ಭಾರತ ವಿರುದ್ಧದ ಮ್ಯಾಚ್​ನ್ನ ಪಾಕಿಸ್ತಾನ ಗೆದ್ದರೆ ಬಾಬರ್ ಆಜಂ ಹೊಸ ಇತಿಹಾಸವನ್ನೇ ಸೃಷ್ಟಿಸಲಿದ್ದಾರೆ. ಯಾಕಂದ್ರೆ ಇದುವರೆಗೆ ಏಕದಿನ ವಿಶ್ವಕಪ್​ನಲ್ಲಿ ಒಂದೇ ಒಂದು ಪಂದ್ಯದಲ್ಲಿ ಟೀಂ ಇಂಡಿಯಾವನ್ನ ಪಾಕಿಸ್ತಾನ ಮಣಿಸಿಲ್ಲ. ಹೀಗಾಗಿ ಬಾಬರ್ ಆಜಂ ನೇತೃತ್ವದಲ್ಲಿ ಪಾಕ್ ಈ ಸಾಧನೆ ಮಾಡಿದ್ರೆ, ಮುಂದಿನ ದಿನಗಳಲ್ಲಿ ವರ್ಲ್ಡ್​​ಕಪ್​ ಸೋತರೂ ಕೂಡ ಬಾಬರ್ ಆಜಂ ಕ್ಯಾಪ್ಟನ್ಸಿಗೆ ಏನೂ ಸಮಸ್ಯೆ ಆಗಲಿಕ್ಕಿಲ್ಲ. ಭಾರತದ ವಿರುದ್ಧ ಗೆದ್ರೆ ಸಾಕು ಬಾಬರ್ ಆಜಂ ಕ್ಯಾಪ್ಟನ್ಸಿ ಸದ್ಯಕ್ಕಂತೂ ಇನ್ನಷ್ಟು ಗಟ್ಟಿಯಾಗಲಿದೆ.

ವಿಶ್ವಕಪ್​​ನ ಮೊದಲ ಎರಡು ಪಂದ್ಯಗಳಲ್ಲೂ ಬಾಬರ್​ ಬ್ಯಾಟ್​ನಿಂದ ರನ್ ಬಂದಿರಲಿಲ್ಲ. ನೆದರ್​ಲ್ಯಾಂಡ್ ವಿರುದ್ಧ 5 ರನ್. ಶ್ರೀಲಂಕಾ ವಿರುದ್ಧ ಬಾಬರ್​ ಸ್ಕೋರ್ ಮಾಡಿದ್ದು 10 ರನ್. ಇನ್ನು ಭಾರತದ ವಿರುದ್ಧ ಒಟ್ಟು 7 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಬಾಬರ್ ಗಳಿಸಿರೋದು ಕೇವಲ 168 ರನ್. ಹೀಗಾಗಿ ಭಾರತ ವಿರುದ್ಧದ ವರ್ಲ್ಡ್​ಕಪ್ ಪಂದ್ಯ ಬಾಬರ್ ಮೇಲೆ ನೇರ ಪರಿಣಾಮ ಬೀರೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಮ್ಯಾಚ್​ ಗೆದ್ರೆ ಬಾಬರ್​ ಆಜಂರನ್ನ ಸದ್ಯಕ್ಕಂತೂ ಯಾರೂ ಪ್ರಶ್ನಿಸೋಕೆ ಆಗಲ್ಲ. ಭಾರತದ ವಿರುದ್ಧ ಗೆದ್ದರೆ ಸಾಕು ಪಾಕಿಸ್ತಾನ ವಿಶ್ವಕಪ್​ನ್ನ ಗೆದ್ದಷ್ಟೇ ಸಂಭ್ರಮಿಸಲಿದೆ. ಒಂದು ಪಾಕಿಸ್ತಾನ ಸೋತ್ರೆ ಬಾಬರ್​ ಕ್ಯಾಪ್ಟನ್ಸಿಗೆ ಸಮಸ್ಯೆ ಎದುರಾಗೋದು ಖಂಡಿತಾ. ಈ ಎಲ್ಲಾ ಕಾರಣಗಳಿಂದ ಭಾರತದ ವಿರುದ್ಧದ ಮ್ಯಾಚ್ ಬಾಬರ್​ ಆಜಂ ನಾಯಕತ್ವಕ್ಕೆ ಅಗ್ನಿಪರೀಕ್ಷೆಯಾಗಿದೆ.

Sulekha