ಬಿಗ್‌ಬಾಸ್ ಮನೆಯಲ್ಲಿ ಲಾರ್ಡ್ ಪ್ರಥಮ್ ಅಬ್ಬರ – ಶಿಸ್ತಿನ ಪಾಠಕ್ಕೆ ಸ್ಪರ್ಧಿಗಳು ತತ್ತರ
ಒಳ್ಳೇ ಹುಡುಗ ಪ್ರಥಮ್ ಕೆಲವೇ ಗಂಟೆಗಳ ಕಾಲ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಇದ್ದಿದ್ದು ಕೆಲವೇ ಗಂಟೆಗಳಾದರೂ ಸ್ಪರ್ಧಿಗಳನ್ನು ಚೆನ್ನಾಗಿಯೇ ಆಟ ಆಡಿಸಿದರು. ಪ್ರಥಮ್ ಈ ಬಾರಿ ಲಾರ್ಡ್ ಪ್ರಥಮ್ ಆಗಿ ಎಂಟ್ರಿ ಕೊಟ್ಟು, ಸ್ಪರ್ಧಿಗಳ ಬೆವರಿಳಿಸಿದರು. ಪ್ರಥಮ್ ಆಟ ಸ್ಪರ್ಧಿಗಳ ಸಂಕಟ ಹೇಗಿತ್ತು ನೋಡೋಣ.
ಇದನ್ನೂ ಓದಿ: ಬಿಗ್‌ಬಾಸ್ ಮನೆಯಲ್ಲಿ ಪ್ರದೀಪ್ ಈಶ್ವರ್ ಪಂಚಿಂಗ್ ಡೈಲಾಗ್ಸ್ –ಟೀಕಿಸಿದವರಿಗೆ ಶಾಸಕರಿಂದ ಖಡಕ್ ತಿರುಗೇಟು
ಒಳ್ಳೆ ಹುಡುಗ ಬಂದಿದ್ದ ಪ್ರಥಮ್ ಈ ಬಾರಿ ಲಾರ್ಡ್ ಪ್ರಥಮ್ ಆಗಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟರು. ‘ಐ ಆಮ್ ವಿಲನ್’ ಎಂದು ಸರ್ವಾಧಿಕಾರಿಯಂತೆ ಸಮವಸ್ತ್ರ ತೊಟ್ಟು ಖಡಕ್ ಆಗಿ ಎಂಟ್ರಿ ಕೊಟ್ಟ ಪ್ರಥಮ್, ಸ್ಪರ್ಧಿಗಳಿಗೆ ಶಿಸ್ತಿನ ಪಾಠ ಮಾಡಿದರು. ಪ್ರಥಮ್ ಅಬ್ಬರಕ್ಕೆ ಸ್ಪರ್ಧಿಗಳು ತತ್ತರಗೊಂಡರು. ಪ್ರಥಮ್ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟ ಕೂಡಲೇ ತಮ್ಮ ಶಿಸ್ತಿನ ಕಠು ಮಾತುಗಳಿಂದ ಎಲ್ಲರಿಗೂ ಭಯ ಮೂಡಿಸಿದರು. ಎಲ್ಲರೂ ತಮಗೆ ಗೌರವ ನೀಡುವಂತೆಯೂ, ಲಾರ್ಡ್ ಪ್ರಥಮ್ ಎಂದೇ ಸಂಭೋದಿಸುವಂತೆಯೂ ಆದೇಶ ಮಾಡಿದ ಪ್ರಥಮ್ ಎಲ್ಲರನ್ನೂ ಚೆನ್ನಾಗಿಯೇ ಆಟ ಆಡಿಸಿದ್ದಂತೂ ಸುಳ್ಳಲ್ಲ. ಪ್ರಥಮ್, ಥೇಟ್ ಸರ್ವಾಧಿಕಾರಿಯಂತೆ, ಕೈ ಒತ್ತಲು ತುಕಾಲಿ ಸಂತೋಷ್‌ಗೆ ಹೇಳಿದ್ದು, ಜೊತೆಗೆ ಸಂಗೀತಾ ಶೃಂಗೇರಿ ಸ್ವತಃ ತನ್ನ ಕೈಯಲ್ಲೇ ಸ್ವೀಟ್ ತಿನ್ನಿಸಬೇಕು ಎಂದು ಆರ್ಡರ್ ಮಾಡಿದ್ದು ನೋಡುಗರಿಗೆ ಸಖತ್ ಮಜಾ ನೀಡಿತ್ತು. ಬಿಸಿ ತಿನ್ನಿಸಬೇಡ. ಬಾಯಲ್ಲಿ ಗಾಳಿ ಊದುತ್ತಾ, ಆರಿಸಿ ತಿನ್ನಿಸು ಎಂದು ಹೇಳಿದ್ದು, ಕಾರ್ತಿಕ್ ಗೆ ಹೊಟ್ಟೆಯುರಿಸಿದ್ದು ಸಖತ್ ಫನ್ನಿಯಾಗಿತ್ತು.
ತಮ್ಮ ಆದೇಶ ಮೀರಿದವರನ್ನು, ತಮಗೆ ವ್ಯತಿರಿಕ್ತವಾಗಿ ವರ್ತಿಸಿದವರನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋಗುವುದಾಗಿ ಬೆದರಿಸಿದರು. ಅದರಲ್ಲೂ ತನ್ನೆದುರು ಸರಿಯಾಗಿ ಕೂತುಕೊಳ್ಳದೆ ಇದ್ದ ಸ್ಪರ್ಧಿಗಳಿಗೂ ಖಡಕ್ ಸಂದೇಶ ನೀಡಿದರು. ಸ್ನೇಕ್ ಶ್ಯಾಮ್ ಮತ್ತು ಹಳ್ಳಿಕಾರ್ ಸಂತೋಷ್‌ಗೂ ಬಿಗ್‌ಬಾಸ್ ಮನೆಯಲ್ಲಿ ನೀವು ಹೇಗಿರಬೇಕು ಎಂಬುದನ್ನು ಸೂಚಿಸಿದ ಪ್ರಥಮ್ ಮಾತು ಮೆಚ್ಚುಗೆ ಪಡೆಯಿತು. ಗೌರೀಶ್ ಅಕ್ಕಿಯವರು ಹೆಚ್ಚು ಮಾತನಾಡಬೇಕೆಂದು, ಸಂತೋಶ್ ಹಳ್ಳಿಕಾರ್ ಸಹ ಸರಿಯಾಗಿ ಎಲ್ಲರೊಟ್ಟಿಗೆ ಬೆರೆಯಬೇಕೆಂದು, ಮೈಖಲ್ ಮನೆಯಲ್ಲಿ ಸರಿಯಾಗಿ ತೊಡಗಿಸಿಕೊಳ್ಳಬೇಕೆಂದು. ಹೀಗೆ ಎಲ್ಲರಿಗೂ ವಿವಿಧ ಸಲಹೆಗಳನ್ನು ಪ್ರಥಮ್ ನೀಡಿದರು. ಡ್ರೋನ್ ಪ್ರತಾಪ್‌ಗೆ ವಿಶೇಷ ಸಲಹೆ ಹಾಗೂ ಸೂಚನೆಗಳನ್ನು ನೀಡಿದರು. ಜೊತೆಗೆ ಮನೆಯ ಇತರೆ ಸದಸ್ಯರಿಗೆ ಡ್ರೋನ್ ಪ್ರತಾಪ್ ಅವರ ಹೊರಗಿನ ವಿಷಯಕ್ಕೆ ಇಲ್ಲಿ ಅವರನ್ನು ಹೀಗಳೆಯುವುದು ಬೇಡ, ಬದಲಿಗೆ ಮನೆಯ ಒಳಗಿನ ಅವರ ವರ್ತನೆ ಬಗ್ಗೆ ಟೀಕೆ ಮಾಡಿ ಶಿಕ್ಷೆ ನೀಡಿ ಎಂದು ಸಲಹೆ ನೀಡಿದರು.