ಐಟಿ ಅಧಿಕಾರಿಗಳ ಭರ್ಜರಿ ಬೇಟೆ – ಮಾಜಿ ಕಾರ್ಪೊರೇಟರ್ ಸಂಬಂಧಿ ಮನೆಯಲ್ಲಿ ಪತ್ತೆಯಾಯ್ತು ಕಂತೆ ಕಂತೆ ಹಣ!
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಗುರುವಾರ ತಡರಾತ್ರಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಬಿಬಿಎಂಪಿ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಆರ್.ಅಂಬಿಕಾಪತಿ ಹಾಗೂ ಮಾಜಿ ಕಾರ್ಪೊರೇಟರ್ ಅಶ್ವಥಮ್ಮ ದಂಪತಿ ಮನೆಯ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಕೋಟ್ಯಂತರ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ.
ಐಟಿ ಅಧಿಕಾರಿಗಳು ಗುರುವಾರ ತಡರಾತ್ರಿ ಏಕಾಏಕಿ ಬಿಬಿಎಂಪಿ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಆರ್.ಅಂಬಿಕಾಪತಿ ಹಾಗೂ ಮಾಜಿ ಕಾರ್ಪೊರೇಟರ್ ಅಶ್ವಥಮ್ಮ ದಂಪತಿ ಮನೆಯ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಶ್ವಥಮ್ಮ ಅವರು ವಾರ್ಡ್ ನಂಬರ್ 95ರಲ್ಲಿ ಕಾರ್ಪೋರೇಟರ್ ಆಗಿದ್ದು, ಇದೀಗ ಅವರ ಸುಲ್ತಾನ್ ಪಾಳ್ಯದ ಮನೆಯ ಮೇಲೆ ಐಟಿ ದಾಳಿ ನಡೆದಿದೆ.
ಇದನ್ನೂ ಓದಿ: ‘ಆಪರೇಷನ್ ಅಜಯ್’- ಮೊದಲ ವಿಮಾನದಲ್ಲಿ ಇಸ್ರೇಲ್ನಿಂದ 212 ಭಾರತೀಯರು ತಾಯ್ನಾಡಿಗೆ ವಾಪಸ್
ಅಂಬಿಕಾಪತಿ ಮನೆ ಹಾಗೂ ಅಂಬಿಕಾಪತಿ ತಮ್ಮ ಪ್ರದೀಪ್ ವಾಸವಿರುವ ಮನೆ ಮೇಲೆ ದಾಳಿ ನಡೆದಿದೆ. ಅಂಬಿಕಾಪತಿ ಪತ್ನಿ ಆಶ್ವಥಮ್ಮ ಹೆಸರಲ್ಲಿರುವ ಆತ್ಮಾನಂದ ಕಾಲೋನಿಯಲ್ಲಿರುವ ಫ್ಲಾಟ್ ಮೇಲೆ ದಾಳಿ ನಡೆದಿದ್ದು, ಈ ಫ್ಲಾಟ್ ನಲ್ಲಿ ಅಂಬಿಕಾಪತಿ ಪತ್ನಿಯ ಸಹೋದರ ಪ್ರದೀಪ್ ವಾಸ ಮಾಡುತ್ತಿದ್ದಾರೆ. ಈ ಮನೆಯಲ್ಲೇ ಸುಮಾರು 23 ಬಾಕ್ಸ್ಗಳಲ್ಲಿ 42 ಕೋಟಿ ರೂಪಾಯಿ ಸಿಕ್ಕಿದೆ. ಈ ನಗದನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ದಾಳಿ ವೇಳೆ ಮನೆಯ ಬೆಡ್ರೂಂನಲ್ಲಿ 42 ಕೋಟಿ ಹಣ ಸಿಕ್ಕಿದೆ. ಬಾಕ್ಸ್ ಗಳಲ್ಲಿ ಗರಿ ಗರಿ 500 ರೂಪಾಯಿ ನೋಟಿನ ಕಂತೆಗಳು ಪತ್ತೆಯಾಗಿದೆ. 23 ಬಾಕ್ಸ್ ನಲ್ಲಿ 42 ಕೋಟಿ ಹಣ ಸಿಕ್ಕಿದ್ದು, ಒಂದೊಂದು ಬಾಕ್ಸ್ ಅಲ್ಲೂ 1ಕೋಟಿ 65 ಲಕ್ಷ ಹಣ ಕೂಡಿಡಲಾಗಿತ್ತು. ಕೇವಲ 1 ಗಂಟೆ ಕಳೆದಿದ್ದರೆ ಹಣದ ಸಮೇತ ಎಸ್ಕೇಪ್ ಆಗುತ್ತಿದ್ದರು. ಕಾರಿನಲ್ಲಿ ತಮಿಳುನಾಡಿಗೆ ಹಣ ಸಾಗಾಟ ಮಾಡಲು ತಯಾರು ಮಾಡಿದ್ದರು ಎಂದು ವರದಿಯಾಗಿದೆ.