ಭಾರತ-ಪಾಕಿಸ್ತಾನ ಪಂದ್ಯದ ವೇಳೆ ಅದ್ಧೂರಿ ಕಾರ್ಯಕ್ರಮ -ಅಕ್ಟೋಬರ್ 14ರಂದು ವಿವಿಐಪಿಗಳ ದರ್ಬಾರ್

ಭಾರತ-ಪಾಕಿಸ್ತಾನ ಪಂದ್ಯದ ವೇಳೆ ಅದ್ಧೂರಿ ಕಾರ್ಯಕ್ರಮ -ಅಕ್ಟೋಬರ್ 14ರಂದು ವಿವಿಐಪಿಗಳ ದರ್ಬಾರ್

ಯಾವಾಗಲೂ ವರ್ಲ್ಡ್​​ಕಪ್​​ ಟೂರ್ನಿ ಆರಂಭದ ದಿನವೇ ಓಪನಿಂಗ್ ಸೆರಮನಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಆದರೆ, ಅಕ್ಟೋಬರ್​​ 5ರಂದೇ ವರ್ಲ್ಟ್​​ಕಪ್ ಟೂರ್ನಿ ಆರಂಭವಾಗಿದ್ರೂ ಅಂದು ಯಾವುದೇ ಓಪನಿಂಗ್ ಸೆರಮನಿ ಕಾರ್ಯಕ್ರಮ ಇರಲೇ ಇಲ್ಲ. ಹೀಗಾಗಿ ಓಪನಿಂಗ್​ ಸೆರಮನಿ ಮಾಡಿಲ್ಲ ಯಾಕೆ ಅನ್ನೋ ಪ್ರಶ್ನೆ ಎಲ್ಲರಲ್ಲೂ ಇತ್ತು. ಅದಕ್ಕೆ ಉತ್ತರ ಈಗ ಸಿಗ್ತಾ ಇದೆ.

ಇದನ್ನೂ ಓದಿ: ಎರಡನೇ ಗೆಲುವಿಗೆ ಟೀಮ್ ಇಂಡಿಯಾ ಸಜ್ಜು – ದೆಹಲಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ಅಬ್ಬರಿಸಲಿದೆ ಟೀಂ ಇಂಡಿಯಾ

ಅಕ್ಟೋಬರ್ 14ರಂದು ಭಾರತ-ಪಾಕಿಸ್ತಾನ ಪಂದ್ಯದ ವೇಳೆ ಅದ್ಧೂರಿ ಕಾರ್ಯಕ್ರಮ ನಡೆಯಲಿದೆ. ​ಪಂದ್ಯ ಆರಂಭವಾಗೋ ಮುನ್ನ ಮ್ಯೂಸಿಕಲ್ ಸೆರಮನಿ ನಡೆಯಲಿದೆ. ಈ ವೇಳೆ ಖ್ಯಾತ ಸಿಂಗರ್ ಅರ್ಜಿತ್ ಸಿಂಗ್​ ಪರ್ಫಾಮ್ ಮಾಡಲಿದ್ದಾರೆ. ಇನ್ನು ಭಾರತ-ಪಾಕಿಸ್ತಾನ ಪಂದ್ಯ ನೋಡೋಕೆ ವಿವಿಐಪಿಗಳ ದೊಡ್ಡ ದಂಡೇ ಸ್ಟೇಡಿಯಂಗೆ ಬರಲಿದೆ. ಗೋಲ್ಡನ್​ ಟಿಕೆಟ್ ಪಡೆದ ಖ್ಯಾತ ನಾಮರೆಲ್ಲಾ ಈ ಮ್ಯಾಚ್​​ನ್ನ ವೀಕ್ಷಿಸಲಿದ್ದಾರೆ. ಸಚಿನ್ ತೆಂಡೂಲ್ಕರ್, ರಜಿನಿಕಾಂತ್ ಮತ್ತು ಅಮಿತಾಬ್​ ಬಚ್ಚನ್ ಸೇರಿದಂತೆ ಹಲವು ಗಣ್ಯರು ಭಾರತ-ಪಾಕಿಸ್ತಾನ ಪಂದ್ಯಕ್ಕೆ ಸಾಕ್ಷಿಯಾಗಲಿದ್ದಾರೆ.

ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕಾಗಿ ಪಾಕಿಸ್ತಾನದಿಂದ ಸುಮಾರು 20 ರಿಂದ 25 ಮೀಡಿಯಾ ಹೌಸ್​ಗಳು ಕೂಡ ಭಾರತಕ್ಕೆ ಬರಲಿವೆ. ಪಾಕಿಸ್ತಾನ ಕ್ರಿಕೆಟ್​​ ಬೋರ್ಡ್​ನ ಮಂದಿಯೂ ಪಂದ್ಯ ನೋಡಲು ಆಗಮಿಸಲಿದ್ದಾರೆ.

ಭಾರತ-ಪಾಕಿಸ್ತಾನ ಮ್ಯಾಚ್​ಗಾಗಿ ಕಂಡು ಕೇಳರಿಯದ ಭದ್ರತಾ ವ್ಯವಸ್ಥೆಗಳನ್ನ ಕೂಡ ಕೈಗೊಳ್ಳಲಾಗ್ತಿದೆ. ಭಾರತ-ಪಾಕಿಸ್ತಾನ ಮ್ಯಾಚ್​ ವೇಳೆ ಉಗ್ರರ ದಾಳಿ ಭೀತಿ ಕೂಡ ಇದೆ. ಈಗಾಗ್ಲೇ ಖಲಿಸ್ತಾನಿ ಉಗ್ರರು ನರೇಂದ್ರ ಮೋದಿ ಸ್ಟೇಡಿಯಂನ್ನ ಸ್ಫೋಟಿಸೋದಾಗಿ ಬೆದರಿಕೆ ಒಡ್ಡಿದ್ದಾರೆ. ಹೀಗಾಗಿ ಅಕ್ಟೋಬರ್​ 14ರಂದು ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ ಸುತ್ತಮುತ್ತ 11 ಸಾವಿರಕ್ಕೂ ಅಧಿಕ ಭದ್ರತಾ ಸಿಬ್ಬಂದಿಯನ್ನ ನಿಯೋಜಿಸಲಾಗ್ತಿದೆ. ಸ್ಟೇಡಿಯಂನಲ್ಲಿ ವಿವಿಐಪಿಗಳು ಕುಳಿತುಕೊಳ್ಳುವ ಜಾಗಕ್ಕೆ ಸ್ಪೆಷಲ್​ ಸೆಕ್ಯೂರಿಟಿ ಕೂಡ ನೀಡಲಾಗ್ತಿದೆ. ಸೆಂಟ್ರಲ್ ಫೋರ್ಸ್, ಱಪಿಡ್ ಆ್ಯಕ್ಷನ್ ಫೋರ್ಸ್, ಬಾರ್ಡರ್​ ಸೆಕ್ಯೂರಿಟಿ ಫೋರ್ಸ್ ಅಂದ್ರೆ ಬಿಎಸ್​ಎಫ್ ಸಿಬ್ಬಂದಿ ಕೂಡ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಭದ್ರತೆ ನೀಡಲಿದ್ದಾರೆ.

Sulekha