ಹೈಪರ್ ಟೆನ್ಷನ್, ಮೂಡ್ ಸ್ವಿಂಗ್ಸ್ ನಿಂದ ಬಳಲುತ್ತಿರುವ ಪತ್ನಿ – ಕಿರುಕುಳಕ್ಕೆ ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದ ಪತಿ!
ಬೆಂಗಳೂರು: ಇದು ಡಿಜಿಟಲ್ ಯುಗ.. ಎಲ್ಲ ಕೆಲಸಗಳು ಫೋನ್ ಮೂಲಕವೇ ಆಗುತ್ತದೆ. ಇತ್ತೀಚೆಗೆ ಮದುವೆಗೆ ಹೆಣ್ಣು ಹುಡುಕಲು ಸಾಕಷ್ಟು ಅಪ್ಲಿಕೇಷನ್ ಗಳು ಬಂದಿವೆ. ಇದರಲ್ಲೇ ಪರಿಚಯ ಮಾಡಿಕೊಂಡು ಅನೇಕರು ಮದುವೆಯಾಗುತ್ತಾರೆ. ಇಲ್ಲೊಬ್ಬ ವ್ಯಕ್ತಿ ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗಿದ್ದ ಯುವತಿಯೊಬ್ಬಳನ್ನು ಮದುವೆಯಾಗಿದ್ದು, ಆಕೆಯ ಕಿರುಕುಳಕ್ಕೆ ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
ಏನಿದು ಘಟನೆ?
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈ ಘಟನೆ ನಡೆದಿದೆ. ಹೈಪರ್ ಟೆನ್ಷನ್ ಹಾಗೂ ಮೂಡ್ ಸ್ವಿಂಗ್ ಖಾಯಿಲೆಯಿಂದ ಬಳಲುತ್ತಿರುವ ಪತ್ನಿಯು ಪತಿಗೆ ಕಿರುಕುಳ ನೀಡುತ್ತಿದ್ದಾಳೆ ಎಂದು ಪತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಆತನ ಪತ್ನಿ ಹಾಗೂ ತಾಯಿ ವಿರುದ್ಧ ದೂರು ದಾಖಲಿಸಿದ್ದಾನೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಬಿಬಿಎಂಪಿ ಬಸ್ ಶೆಲ್ಟರ್ ಕಳ್ಳತನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! – ಪೊಲೀಸ್ ತನಿಖೆಯಲ್ಲಿ ಬಯಲಾಗಿದ್ದೇನು?
ಕರುಣಾಕರನ್ ಎಂಬಾತ ಮ್ಯಾಟ್ರಿಮೋನಿ ಅಪ್ಲಿಕೇಷನ್ ಬಳಸುತ್ತಿದ್ದ. ಈ ವೇಳೆ ಆತನಿಗೆ ಲೇಖನಾಶ್ರೀ ಎಂಬ ಯುವತಿ ಪರಿಚಯವಾಗಿದ್ದಾಳೆ. ಬಳಿಕ ಕುಟುಂಬಸ್ಥರ ಒಪ್ಪಿಗೆ ಪಡೆದು ಮದುವೆಯೂ ಆಗಿದ್ದಾರೆ. ವಿವಾಹವಾದ ನಂತರ ಇಬ್ಬರ ಮಧ್ಯೆಯೂ ಪದೇ ಪದೇ ಮನಸ್ತಾಪ ಉಂಟಾಗುತ್ತಿತ್ತು. ಇದೀಗ ಪತ್ನಿ ಹಾಗೂ ಆಕೆಯ ತಾಯಿ ಐದು ವರ್ಷದ ಹಿಂದಿನ ಕೆಲ ಖಾಸಗಿ ಫೋಟೋಗಳನ್ನು ತೋರಿಸಿ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾನೆ.
ಐದು ವರ್ಷದ ಫೋಟೋಗಳನ್ನ ಇಟ್ಟುಕೊಂಡು ತೊಂದರೆ ನೀಡಿದ್ದ ಹಿನ್ನೆಲೆಯಲ್ಲಿ ಕರುಣಾಕರನ್ ಚೆನ್ನೈಗೆ ತೆರಳಿದ್ದ. ಈ ವೇಳೆ ಪತ್ನಿ ಹಾಗೂ ಅತ್ತೆ ಮಿಸ್ಸಿಂಗ್ ಕಂಪ್ಲೆಂಟ್ ಕೂಡ ನೀಡಿದ್ದರು. ನಂತರ ಮನೆಗೆ ಬಂದಾಗ ಕಟ್ಟಿಗೆಯಿಂದ ಹಲ್ಲೆ ನಡೆಸಿದ್ದಾರೆ. ಹೀಗಾಗಿ ಪತ್ನಿ ಹಾಗೂ ಅತ್ತೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರುಣಾಕರನ್ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.