ಬಿಗ್‌ಬಾಸ್ ಮನೆಗೆ ಶಾಸಕ ಪ್ರದೀಪ್ ಈಶ್ವರ್ ಎಂಟ್ರಿ – ಎಂಎಲ್ಎ ದೊಡ್ಮನೆ ಪ್ರವೇಶಕ್ಕೆ ಕೇಳಿಬಂತು ಅಪಸ್ವರ..!
ಬಿಗ್‌ಬಾಸ್ ಹತ್ತನೇ ಸೀಸನ್‌ನಲ್ಲಿ ಹಲವು ವಿಶೇಷತೆಗಳಿವೆ. ಹ್ಯಾಪಿ ಬಿಗ್‌ಬಾಸ್ ಎಂಬ ಥೀಮ್ ಇಟ್ಟುಕೊಂಡು ಈ ಬಾರಿ ಬಿಗ್‌ಬಾಸ್ ಕಾರ್ಯಕ್ರಮ ಶುರುಮಾಡಲಾಗಿದೆ. 17 ಮಂದಿ ಸ್ಪರ್ಧಿಗಳು ದೊಡ್ಮನೆ ಪ್ರವೇಶ ಮಾಡಿಯಾಗಿದೆ. ಆದರೆ, ಬಿಗ್‌ಬಾಸ್ ಗೆ ಯಾರೆಲ್ಲಾ ಎಂಟ್ರಿ ಆಗ್ತಾರೆ ಎಂದು ನೋಡಿದವರು ಒಂದು ದಿನ ಕಳೆದ ಮೇಲೆ ನಿಜವಾಗಿಯೂ ಶಾಕ್ ಆಗಿದ್ದಾರೆ. ಮಾತಲ್ಲೇ ಮೋಡಿ ಮಾಡುವ, ಚುನಾವಣೆಯಲ್ಲಿ ಎಲ್ಲಾ ಲೆಕ್ಕಾಚಾರ ಮೇಲುಕೆಳಗು ಮಾಡಿ ಗೆದ್ದು ಬಂದ ಶಾಸಕ ಪ್ರದೀಪ್ ಈಶ್ವರ್ ಬಿಗ್‌ಬಾಸ್ ಮನೆಗೆ ಬಂದಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ನಲ್ಲೀಗ ‘ಹಳ್ಳಿಕಾರ್ ಒಡೆಯ’ನ ಹವಾ – ಹಳ್ಳಿಕಾರ್ ತಳಿಯ ಬಗ್ಗೆ ಜಗತ್ತಿಗೆ ತಿಳಿಸಲು ದೊಡ್ಮನೆಗೆ ಎಂಟ್ರಿ
ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಬಿಗ್ ಬಾಸ್ ಮನೆಗೆ ಎಂಟ್ರಿಯಾಗಿದ್ದಾರೆ. ಅದು ಕೂಡಾ ಒಂದು ದಿನ ತಡವಾಗಿ. ಡೊಳ್ಳುಕುಣಿತದ ಮೂಲಕ ಪ್ರದೀಪ್ ಈಶ್ವರ್ ಅವರನ್ನು ಬಿಗ್‌ಬಾಸ್ ಗ್ರ್ಯಾಂಡ್ ಆಗಿಯೇ ವೆಲ್‌ಕಮ್ ಮಾಡಿದೆ. ಜೊತೆಗೆ ಬಿಳಿಬಣ್ಣದ ಬಟ್ಟೆತೊಟ್ಟು ಬಂದಿದ್ದ ಪ್ರದೀಪ್ ಈಶ್ವರ್ ಬಿಗ್‌ಬಾಸ್ ಸ್ಪರ್ಧಿಗಳ ಜೊತೆ ಕುಣಿದು ಖುಷಿಪಟ್ಟರು. ಬಿಗ್ ಬಾಸ್ ಮನೆಯಲ್ಲಿ ನಾವು ಎಂಎಲ್ಎ ಜೊತೆ ಸ್ಪರ್ಧಿಸಬೇಕಲ್ಲ ಎಂದು ಉಳಿದ ಸ್ಪರ್ಧಿಗಳು ಹೇಳಿಕೊಂಡಿದ್ದಾರೆ. ಕಲರ್‌ಫುಲ್ ಮನೆಗೆ ತಾಳ್ಮೆಯ ಬಿಳುಪು, ಎಂಟ್ರಿಕೊಟ್ರು ಎಂಎಲ್‌ಎ ಪ್ರದೀಪು ಎಂದು ಕಲರ್ಸ್ ಕನ್ನಡವಾಹಿನಿ ಪ್ರೋಮೋ ಹಂಚಿಕೊಂಡಿದೆ.
ಪ್ರದೀಪ್ ಈಶ್ವರ್ ತುಂಬಾ ಜನಪ್ರಿಯವ್ಯಕ್ತಿ. ಇವರ ಜನಪ್ರಿಯತೆಯ ಲಾಭ ಪಡೆಯಲು ಬಿಗ್‌ಬಾಸ್ ಕೂಡಾ ಮುಂದಾಯ್ತಾ ಅನ್ನೋ ಮಾತು ಕೂಡಾ ಕೇಳಿಬರುತ್ತಿದೆ. ಯಾಕೆಂದರೆ, ಸೋಶಿಯಲ್ ಮೀಡಿಯಾ ಬಳಕೆದಾರರಿಗೆ ಪ್ರದೀಪ್ ಈಶ್ವರ್ ಯಾರು ಎಂಬುದು ಚೆನ್ನಾಗಿಯೇ ಗೊತ್ತು. ಆದರೆ, ರಾಜ್ಯದ ಜನತೆಗೆ ತುಂಬಾ ಚೆನ್ನಾಗಿ ಗೊತ್ತಾಗಿದ್ದು ಈ ಬಾರಿಯ ಚುನಾವಣೆಯಲ್ಲಿ. ಇದೀಗ ಒಬ್ಬ ಶಾಸಕನಾಗಿ, ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ಬಿಗ್ ಬಾಸ್ ಮನೆಗೆ ಪ್ರದೀಪ್ ಈಶ್ವರ್ ಕಾಲಿಟ್ಟಿರುವುದು ಚರ್ಚೆಗೆ ಕಾರಣವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಪ್ರದೀಪ್ ಈಶ್ವರ್ ಬಗ್ಗೆ ನಾನಾ ರೀತಿಯಲ್ಲಿ ಚರ್ಚೆಯಾಗುತ್ತಿದೆ. ಪ್ರದೀಪ್ ಈಶ್ವರ್ ಬಿಗ್ ಬಾಸ್‌ಗೆ ಎಂಟ್ರಿಯಾಗಿರುವುದರ ಬಗ್ಗೆ ಅನೇಕರು ತಕರಾರು ತೆಗೆದಿದ್ದಾರೆ. ಶಾಸಕರಿಗೆ ಬೇರೆ ಕೆಲಸವಿಲ್ವಾ ಎಂದು ಜನ ಕೇಳುತ್ತಿದ್ದಾರೆ. ಬಿಗ್‌ಬಾಸ್ ಎಂಟ್ರಿ ಹಿಂದಿರುವ ಲೆಕ್ಕಾಚಾರವೇನು. ಒಂದು ವೇಳೆ ಶಾಸಕರದ್ದು ಗೆಸ್ಟ್ ಎಪಿರಿಯನ್ಸ್ ಇರಬಹುದಾ. ಇಲ್ಲ ಒಂದೆರೆಡು ದಿನಗಳ ಕಾಲ ಇದ್ದು ವಾಪಸ್ ಹೋಗಬಹುದಾ ಎಂಬ ಲೆಕ್ಕಾಚಾರ ಶುರುವಾಗಿದೆ. ಇನ್ನು ಸ್ಪರ್ಧಿಗಳೆಲ್ಲಾ ಬದುಕಿನ ಪಾಠ ಕಲಿಯಲು ಬಿಗ್‌ಬಾಸ್ ಒಂದೊಳ್ಳೇ ವೇದಿಕೆ ಅಂತಾ ಹೇಳುತ್ತಿದ್ದರು. ಮೊದಲೇ ಮೆಡಿಕಲ್ ವಿದ್ಯಾರ್ಥಿಗಳಿಗೆ ಪಾಠ ಮಾಡಿ ಎಕ್ಸ್‌ಪೀರಿಯನ್ಸ್ ಇರುವ ಪ್ರದೀಪ್ ಈಶ್ವರ್ ಈಗ ಬಿಗ್ ಬಾಸ್ ಸ್ಪರ್ಧಿಗಳಿಗೂ ಬದುಕಿನ ಪಾಠ ಹೇಳಿಕೊಡಲು ಬಂದಿದ್ದಾರಾ ಅನ್ನೋ ಲೆಕ್ಕಾಚಾರ ಕೂಡಾ ನಡೀತಿದೆ.