ಬಿಗ್ ಬಾಸ್ ನಲ್ಲೀಗ ‘ಹಳ್ಳಿಕಾರ್ ಒಡೆಯ’ನ ಹವಾ – ಹಳ್ಳಿಕಾರ್ ತಳಿಯ ಬಗ್ಗೆ ಜಗತ್ತಿಗೆ ತಿಳಿಸಲು ದೊಡ್ಮನೆಗೆ ಎಂಟ್ರಿ  

ಬಿಗ್ ಬಾಸ್ ನಲ್ಲೀಗ ‘ಹಳ್ಳಿಕಾರ್ ಒಡೆಯ’ನ ಹವಾ – ಹಳ್ಳಿಕಾರ್ ತಳಿಯ ಬಗ್ಗೆ ಜಗತ್ತಿಗೆ ತಿಳಿಸಲು ದೊಡ್ಮನೆಗೆ ಎಂಟ್ರಿ  

ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲೀಗ ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ ಹವಾ ಶುರುವಾಗಿದೆ. ಯಾಕೆಂದರೆ ಇವರು ರೈತ ಆದ್ರೂ ನಾನು ಶೋಕಿ ಮಾಡುವ ಶ್ರೀಮಂತ ಅಂತಾನೇ ಹೇಳಿಕೊಂಡಿದ್ದಾರೆ.. ಅಖಿಲ ಭಾರತ ಹಳ್ಳಿಕಾರ್‌ ತಳಿ ಸಂರಕ್ಷಣಾ ಸಮಿತಿಯ ಅಧ್ಯಕ್ಷರಾಗಿರುವ ಸಂತೋಷ್ ಹಳ್ಳಿಕಾರ್ ತಳಿಗಳ ಉಳಿವಿಗೆ ಹೋರಾಟ ಮಾಡುತ್ತಿದ್ದಾರೆ.

ಇದನ್ನೂ ಓದಿ : ಬಿಗ್‌ಬಾಸ್ ಮನೆಯಲ್ಲಿ 17 ಸ್ಪರ್ಧಿಗಳ ಆಟ – ದೊಡ್ಮನೆ ಎಂಟ್ರಿ ದಿನವೇ ಸ್ಪರ್ಧಿಗಳಿಗೆ ಬಿಗ್ ಟ್ವಿಸ್ಟ್

ಹಳ್ಳಿಕಾರ್‌ ತಳಿಯ ಜಾನುವಾರು ಸಾಕಾಣಿಕೆ ಮೂಲಕ ಜನಪ್ರಿಯತೆ ಪಡೆದಿರುವ ವರ್ತೂರು ಸಂತೋಷ್‌ ಅವರು ಕರ್ನಾಟಕದ ಜನಪ್ರಿಯ ವ್ಯಕ್ತಿ. ಇವರು ಹಳ್ಳಿಕಾರ್‌ ಕ್ಯಾಟಲ್‌ ಬ್ರೀಡ್‌ ಅಥವಾ ಅಖಿಲ ಭಾರತ ಹಳ್ಳಿಕಾರ್‌ ತಳಿ ಸಂರಕ್ಷಣಾ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಇವರು ಹಳ್ಳಿಕಾರ್‌ ಒಡೆಯ ಎಂದೇ ಜನಪ್ರಿಯತೆ ಪಡೆದಿದ್ದಾರೆ. ಎಜುಕೇಷನ್‌ ಎನ್ನುವುದು ಮಾಹಿತಿ, ಅದೇ ಜೀವನವಲ್ಲ ಎಂದು ಇವರು ಸಂದರ್ಶನವೊಂದರಲ್ಲಿ ಹೇಳಿದ್ದರು. ಹಸು ಸಾಕಲು ಸಾಧ್ಯವಿರುವವರು ಹಸು ಸಾಕ್ರಿ, ಹೋರಿ ಸಾಕೋರು ಹೋರಿ ಸಾಕ್ರಿ, ಒಟ್ಟಾರೆ ಹಳ್ಳಿಕಾರ್‌ ತಳಿ ಉಳಿಸಿ. ಮನೆಯಲ್ಲಿ ಮೂಕ ಜೀವಗಳು ಇರಬೇಕು ಎಂದು ನನ್ನ ಅಜ್ಜಿ ಹೇಳಿದ್ದರು. ಹಳ್ಳಿಕಾರ್‌ ದನ ಸಾಕಲು ಇವರೇ ನನಗೆ ಸ್ಪೂರ್ತಿ ಎಂದು ಯೂಟ್ಯೂಬ್‌ ಸಂದರ್ಶನವೊಂದರಲ್ಲಿ ಇವರು ಹೇಳಿದ್ದಾರೆ.

ಹಳ್ಳಿಕಾರ್ ತಳಿಯನ್ನು ಉಳಿಸಬೇಕು ಎಂಬ ಗುರಿ ಇಟ್ಟುಕೊಂಡಿರುವ ಶ್ರೀಮಂತ ರೈತ ವರ್ತೂರು ಸಂತೋಷ್  ಬೆಂಗಳೂರು ಗ್ರಾಮಾಂತರ ವರ್ತೂರ್​ನಿಂದ ವರ್ತೂರ್ ಸಂತೋಷ್ ಅವರು ಆಯ್ಕೆ ಆಗಿದ್ದಾರೆ. ವರ್ತೂರ್​ ಸಂತೋಷ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೆ ಟ್ರೆಂಡಿಂಗ್​ನಲ್ಲಿ ಇದ್ದಾರೆ. ಅದು ಒಳ್ಳೆಯ ವಿಷಯಕ್ಕೆನೇ. ಹಳ್ಳಿಕಾರ್ ಎಂಬ ಗೋವಿನ ತಳಿ ಉಳಿಸುವ ಸಲುವಾಗಿ ಇವರ ಹೋರಾಟ. ಇತ್ತೀಚೆಗೆ ಈ ತಳಿಯ ಹೋರಿಗಳು ಎಲ್ಲಿಯೂ ಕಾಣಸಿಗೋದಿಲ್ಲ. ಇರುವಷ್ಟು ತಳಿಗಳನ್ನು ಉಳಿಸಿಕೊಳ್ಳೋ ಪ್ರಯತ್ನ ಮಾಡೋಣ ಎನ್ನುವುದೇ ವರ್ತೂರ್ ಸಂತೋಷ್ ಅವರ ಕೂಗು. ಸೋಷಿಯಲ್ ಮೀಡಿಯಾದಲ್ಲಿ ಇವರ ಈ ಒಳ್ಳೆಯ ಕೆಲಸಗಳಿಗೆ ಕರ್ನಾಟಕ ಸಾಥ್ ನೀಡುತ್ತಿದೆ.

 

Shantha Kumari