ತೀವ್ರಗೊಂಡ ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷ – ಯುದ್ಧದಲ್ಲಿ ಮೃತಪಟ್ಟವರ ಸಂಖ್ಯೆ 1,100ಕ್ಕೆ ಏರಿಕೆ!
ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಸಂಘರ್ಷ ಆರಂಭವಾಗಿ ಮೂರು ದಿನಗಳು ಕಳೆದಿದೆ. ಹಮಾಸ್ ಉಗ್ರರು ಗಾಜಾ ಪಟ್ಟಿಯಿಂದ ಇಸ್ರೇಲ್ ಮೇಲೆ ದಾಳಿ ನಡೆಸಿದ್ದು, ಸಂಘರ್ಷ ತೀವ್ರಗೊಂಡಿದೆ. ಈ ಯುದ್ಧದಲ್ಲಿ ಇದುವರೆಗೆ 1,100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲಿ ಸೇನಾ ವಕ್ತಾರರು ವರದಿ ಮಾಡಿದ್ದಾರೆ.
ಶನಿವಾರ, ಹಮಾಸ್ ಇಸ್ರೇಲಿನ ವಿವಿಧ ನಗರಗಳ ಮೇಲೆ 5,000 ಕ್ಕೂ ಹೆಚ್ಚು ರಾಕೆಟ್ಗಳನ್ನು ಹಾರಿಸಿದೆ. ಇದಾದ ಕೇವಲ ಎರಡೇ ದಿನಗಳಲ್ಲಿ ಈ ಸಂಘರ್ಷ ಭುಗಿಲೆದ್ದಿದ್ದು, ಇದರಿಂದ ಸಾವಿರಾರು ನಾಗರಿಕರು ಪ್ರಾಣಕಳೆದುಕೊಂಡಿದ್ದಾರೆ. ಇಸ್ರೇಲ್ನಲ್ಲಿ 44 ಸೈನಿಕರು ಸೇರಿದಂತೆ 700ಕ್ಕೂ ಹೆಚ್ಚು ಜನರನ್ನು ಕೊಲ್ಲಲಾಗಿದೆ. ಹಮಾಸ್ ಆಕ್ರಮಣದ ವಿರುದ್ಧ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹಾಗೂ ಉಗ್ರಗಾಮಿ ಗುಂಪುಗಳ ಅಡಗುತಾಣಗಳನ್ನು ನಾಶಪಡಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಭಾನುವಾರ ಗಾಜಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು, ಇದರಲ್ಲಿ 413 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ.
ಇದನ್ನೂ ಓದಿ: ಅಬ್ಬಬ್ಬಾ.. ಈ ದಾಖಲೆಯನ್ನ ಯಾರೂ ಮುರಿಯೋಕೆ ಆಗಲ್ಲ – ಈ ಮಹಾತಾಯಿಗೆ ಜನಿಸಿದ್ದು ಎಷ್ಟು ಮಕ್ಕಳು ಗೊತ್ತಾ?
ಹಮಾಸ್ ಇಸ್ರೇಲ್ನ ಮೇಲೆ ಸಾವಿರಾರು ರಾಕೆಟ್ಗಳ ದಾಳಿಯನ್ನು ನಡೆಸಿ ನಾಗರಿಕರನ್ನು ಕೊಂದಿದೆ. 100ಕ್ಕೂ ಹೆಚ್ಚು ಜನರನ್ನು ಒತ್ತೆಯಾಳಾಗಿ ಇಟ್ಟಿರುವ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜಾಗತಿಕವಾಗಿ ಜನರು ಬೆಚ್ಚಿ ಬೀಳುವಂತೆ ಮಾಡಿದೆ.