ಶುಭ್‌ಮನ್‌ ಗಿಲ್‌ಗೆ ಡೆಂಘೀ ಸೋಂಕು ದೃಢ – ವಿಶ್ವಕಪ್ ಆರಂಭದಲ್ಲಿ ಟೀಮ್ ಇಂಡಿಯಾಗೆ ಬಿಗ್ ಶಾಕ್

ಶುಭ್‌ಮನ್‌ ಗಿಲ್‌ಗೆ ಡೆಂಘೀ ಸೋಂಕು ದೃಢ – ವಿಶ್ವಕಪ್ ಆರಂಭದಲ್ಲಿ ಟೀಮ್ ಇಂಡಿಯಾಗೆ ಬಿಗ್ ಶಾಕ್

ಟೀಮ್ ಇಂಡಿಯಾದ ಈ ಬಾರಿಯ ವರ್ಲ್ಡ್​ಕಪ್​ ಜರ್ನಿ ಆರಂಭವಾಗುವ ಮುನ್ನವೇ ತಂಡಕ್ಕೆ ಹೊಡೆತ ಬಿದ್ದಂತೆ ಕಾಣುತ್ತಿದೆ. ಪ್ರಮುಖ ಬ್ಯಾಟ್ಸ್​ಮನ್​​ ಶುಭ್‌ಮನ್ ಗಿಲ್​​ ಡೆಂಘೀ ಜ್ವರದಿಂದ ಬಳಲುತ್ತಿದ್ದಾರೆ. ಶುಭ್‌ಮನ್ ಭಾರಿ ಜ್ವರದಿಂದ ಬಳಲುತ್ತಿದ್ದು, ಈಗ ವಿಶ್ರಾಂತಿಯಲ್ಲಿದ್ದಾರೆ. ಹೀಗಾಗಿ ಅಕ್ಟೋಬರ್​ 8ರಂದು ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಮ್ಯಾಚ್​​ನಲ್ಲಿ ಶುಭ್‌ಮನ್  ಗಿಲ್ ಆಡೋದು ಅನುಮಾನ.

ಇದನ್ನೂ ಓದಿ: ವಿಶ್ವಕಪ್ ಆರಂಭದ ಪಂದ್ಯದಲ್ಲಿ ಸ್ಟೇಡಿಯಂ ಖಾಲಿ ಖಾಲಿ – ಪಂದ್ಯ ನಡೆಯುವ ಎಲ್ಲಾ ಸ್ಟೇಡಿಯಂನಲ್ಲೂ ಪ್ರೇಕ್ಷಕರಿಗೆ ಬಿಸಿಸಿಐನಿಂದ ಉಚಿತ ಕುಡಿಯುವ ನೀರಿನ ವ್ಯವಸ್ಥೆ

24ರ ಹರೆಯದ ಶುಭ್‌ಮನ್ ಗಿಲ್ ಏಕದಿನ ವಿಶ್ವಕಪ್‌ನಲ್ಲಿ ಭಾನುವಾರ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ವಿಶ್ವಕಪ್ ಪಂದ್ಯದಲ್ಲಿ ಆಡುವ ಸಾಧ್ಯತೆಯಿಲ್ಲ ಎಂದು ಹೇಳಲಾಗಿದೆ. ತರಬೇತಿ ಅವಧಿಯಲ್ಲಿ ಗಿಲ್ ಅವರು ಡೆಂಘೀ ಜ್ವರದಿಂದ ಬಳಲುತ್ತಿದ್ದರು ಎಂದು ವರದಿ ಆಗಿದೆ. ಗಿಲ್ ಅವರನ್ನು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಿಂದ ಕೈಬಿಡುವ ಮೊದಲು ಮತ್ತೊಮ್ಮೆ ಡೆಂಗ್ಯೂ ಪರೀಕ್ಷೆಗೆ ಒಳಗಾಗಲಿದ್ದಾರೆ. ಜ್ವರ ತೀವ್ರವಾಗಿದ್ದರೆ ಗಿಲ್ ಮೊದಲ ಎರಡು ಪಂದ್ಯಗಳನ್ನು ಕಳೆದುಕೊಳ್ಳಬಹುದು. “ಚೆನ್ನೈಗೆ ಬಂದಿಳಿದ ನಂತರ ಶುಭ್‌ಮನ್‌ಗೆ ತೀವ್ರ ಜ್ವರವಿತ್ತು. ಈ ಕುರಿತು ಪರೀಕ್ಷೆಗಳು ನಡೆಯುತ್ತಿವೆ. ಶುಕ್ರವಾರ ಟೆಸ್ಟ್ ನಡೆಸಿ ಆರಂಭಿಕ ಪಂದ್ಯದಲ್ಲಿ ಭಾಗವಹಿಸುವ ಕುರಿತು ಅಂತಿಮ ಕರೆ ತೆಗೆದುಕೊಳ್ಳಲಾಗುವುದು” ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಸಾಮಾನ್ಯವಾಗಿ ಡೆಂಘೀಗೆ ಒಳಗಾದವರು ಸಂಪೂರ್ಣವಾಗಿ ಚೇತರಿಸಿಕೊಳ್ಳಲು 7ರಿಂದ 10 ದಿನಗಳಾದರೂ ಬೇಕು. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಗಿಲ್ ಆಸ್ಟ್ರೇಲಿಯಾ ಮ್ಯಾಚ್​​ಗೆ ತಂಡವನ್ನ ಸೇರಿಕೊಳ್ಳೋದು ಅನುಮಾನ ಅಂತಾನೆ ಹೇಳಲಾಗ್ತಿದೆ. ಒಂದು ವೇಳೆ ಗಿಲ್ ಆಸ್ಟ್ರೇಲಿಯಾ ವಿರುದ್ಧ ಆಡಲ್ಲ ಅಂದರೆ, ಆಗ ರೋಹಿತ್​ ಶರ್ಮಾ ಜೊತೆಗೆ ಓಪನಿಂಗ್ ಯಾರು ಬರುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಇಶಾನ್ ಕಿಶನ್ ಅಥವಾ ಕೆಎಲ್ ರಾಹುಲ್​​ ಇವರಿಬ್ಬರಲ್ಲಿ ಯಾರಾದರೂ ಒಬ್ಬರು ಓಪನಿಂಗ್ ಮಾಡಬಹುದು. ಇದೀಗ ಟೀಂ ಇಂಡಿಯಾದ ಮೆಡಿಕಲ್ ಸ್ಟಾಫ್​​ ಶುಭ್‌ಮನ್ ಗಿಲ್​ ಆರೋಗ್ಯದ ಬಗ್ಗೆ ಮಾನಿಟರಿಂಗ್ ಮಾಡ್ತಿದ್ದು, ಆಸಿಸ್ ವಿರುದ್ಧದ ಮ್ಯಾಚ್​ ವೇಳೆಗೆ ಫಿಟ್ ಆದರೆ, ರೋಹಿತ್​ ಜೊತೆ ಗಿಲ್​ ಓಪನಿಂಗ್ ಮಾಡಬಹುದು. ಒಂದು ವೇಳೆ ಫಿಟ್ ಆಗಿಲ್ಲ ಅಂದರೆ, ರೋಹಿತ್ ಜೊತೆಗೆ ಇಶಾನ್​ ಕಿಶನ್ ಮತ್ತು ಕೆಎಲ್ ರಾಹುಲ್ ಇಬ್ಬರಲ್ಲಿ ಒಬ್ಬರು ಓಪನರ್ ಆಗಿ ಬರಬಹುದು.

Sulekha