ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ ತೂಕ ಹೆಚ್ಚಳಕ್ಕೆ ಫ್ಯಾನ್ಸ್ ಬೇಸರ – ಟ್ರೋಲ್‌ನಲ್ಲಿ ನಟಿಯನ್ನು ರೆಡಿ ಮಾಡಿದವರಿಗೂ ಬೈಗುಳ..!

ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ ತೂಕ ಹೆಚ್ಚಳಕ್ಕೆ ಫ್ಯಾನ್ಸ್ ಬೇಸರ – ಟ್ರೋಲ್‌ನಲ್ಲಿ ನಟಿಯನ್ನು ರೆಡಿ ಮಾಡಿದವರಿಗೂ ಬೈಗುಳ..!

ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ ಅವರು ಪ್ಯಾರಿಸ್ ಫ್ಯಾಶನ್ ವೀಕ್ 2023 ನಲ್ಲಿ  ಮಿಂಚಿದ್ದು ಎಲ್ಲರಿಗೂ ಗೊತ್ತೇ ಇದೆ. ಆದರೆ, ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಪ್ಯಾರಿಸ್ ಫ್ಯಾಶನ್ ವೀಕ್ ನಲ್ಲಿ ವಾಕ್ ಮಾಡಿದ ಮೇಲೆ ಏನಾಯ್ತು ಗೊತ್ತಾ. ಇದೀಗ ಬ್ಯೂಟಿಕ್ವೀನ್ ಐಶ್ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ. ಅದು ಕೂಡಾ ಟ್ರೋಲ್ ಮಾಡುವವರು ಬರೀ ಐಶ್ ಸುದ್ದಿಗೆ ಹೋಗಿಲ್ಲ. ಐಶ್ವರ್ಯಾ ರೈ ಅವರನ್ನು ರೆಡಿ ಮಾಡಿದವರನ್ನೂ ಕೂಡಾ ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಎಮೋಷನ್, ರಿವೇಂಜ್, ಫುಲ್ ಮಾಸ್ – ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ ಲಿಯೋ ಸಿನಿಮಾ ಟ್ರೈಲರ್  

ಪ್ಯಾರಿಸ್‌ನ ಐಫೆಲ್ ಟವರ್‌ನಲ್ಲಿ ನಡೆದ ಫ್ಯಾಷನ್ ಶೋನಲ್ಲಿ ಐಶ್ವರ್ಯಾ ರೈ ಬಚ್ಚನ್ ಅವರು ಉದ್ದನೆಯ ಕೇಪ್‌ನೊಂದಿಗೆ ಗೋಲ್ಡನ್-ಕಪ್ಪು ಗೌನ್ ಧರಿಸಿದ್ದರು. ಐಶ್ ಱಂಪ್ ವಾಕ್ ಮಾಡುವುದನ್ನು ನೋಡಲು ಅಭಿಮಾನಿಗಳು ಕೂಡಾ ಕಾಯುತ್ತಿದ್ದರು. ಐಶ್ವರ್ಯಾ ರೈ ಬಚ್ಚನ್ ಕೂಡಾ ಸೊಂಟ ಬಳುಕಿಸುತ್ತಾ ಕ್ಯಾಟ್ ವಾಕ್ ಮಾಡುತ್ತಾ ಬಂದರು. ಇದೆಲ್ಲಾ ಆದ ಮೇಲೆ ಸಿಕ್ಕಾಪಟ್ಟೆ ಟ್ರೋಲ್‌ಗೆ ಗುರಿಯಾಗಿದ್ದಾರೆ.  ಐಶ್ ಮುಖದ ಸರ್ಜರಿ ನೋಡಿ ಅನೇಕರು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ. ಐಶ್ವರ್ಯ ರೈ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ದಾರೆ. ಈ ಬಗ್ಗೆ ಅಭಿಮಾನಿಯೊಬ್ಬರು ಹೀಗೆ ಬರೆದುಕೊಂಡಿದ್ದಾರೆ. ‘ನಾನು ಆಕೆಯನ್ನು ತುಂಬಾ ಪ್ರೀತಿಸುತ್ತೇನೆ. ಅವಳು ಇನ್ನೂ ಕೂಡ ಬಹುಕಾಂತೀಯಳಾಗಿದ್ದಾಳೆ. ಆದರೆ ಇತರ ರೂಪದರ್ಶಿಯರ ಗುಂಪಿನೊಂದಿಗೆ ಅವಳ ಮುಖವು ತುಂಬಾ ಕೆಟ್ಟದಾಗಿ ಕಾಣುತ್ತಿದೆ. ಅವಳ ಮುಖ ತುಂಬಿದಂತೆ ಕಾಣುತ್ತದೆ. ಆಕೆಯ ದೇಹ ಪ್ರಕಾರಕ್ಕೆ ಉಡುಗೆ ಸಂಪೂರ್ಣವಾಗಿ ತಪ್ಪಾಗಿದೆ  ಈ ರೀತಿ ಮಾಡಿದ ಇಡೀ ತಂಡವನ್ನು ಆಕೆ ವಜಾಗೊಳಿಸಬೇಕಾಗಿದೆ. ಆ ಮುಖವನ್ನೇಕೆ ಆ ರೀತಿ ವಿರೂಪಗೊಳಿಸಿರುವುದು’ ಎಂದು ಕಮೆಂಟ್ ಮಾಡಿದ್ದಾರೆ.

49 ವರ್ಷದ ಚೆಲುವೆ ಐಶ್ ತನ್ನ ಸೌಂದರ್ಯವನ್ನೂ ಇಂದಿಗೂ ಉಳಿಸಿಕೊಂಡಿದ್ದಾರೆ. ಆದರೆ, ಇತ್ತೀಚೆಗೆ ಸ್ವಲ್ಪ ದಪ್ಪವಾಗಿದ್ದಾರೆ. ಕೆಲವರು ಐಶ್ವರ್ಯಾರನ್ನು ಗೋಲ್ಡನ್ ಗರ್ಲ್ ಎಂದು ಹೊಗಳಿದರೆ, ಇನ್ನು ಕೆಲವರು, ಐಶ್‌ಳ ತೂಕವನ್ನು ಒಪ್ಪಿಕೊಳ್ಳಲು ರೆಡಿಯಿಲ್ಲ.

ಐಶ್ವರ್ಯಾ ಮಿರ ಮಿರ ಮಿಂಚುವ ಗೋಲ್ಡನ್-ಕಪ್ಪು ಹೊಳೆಯುವ ಕೇಪ್  ಗೌನ್ ಧರಿಸಿದ್ದರು. ಹಿಂಭಾಗಕ್ಕೆ ಪಾರದರ್ಶಕ ಕೇಪ್ ಅನ್ನು ಜೋಡಿಸಲಾಗಿತ್ತು. ಇದರ ಜೊತೆಗೆ, ವಜ್ರದ ಉಂಗುರಗಳು, ಕಿವಿಯೋಲೆಗಳು ಮತ್ತು ಗೋಲ್ಡನ್ ಹೈ ಹೀಲ್ಸ್ ಅನ್ನು ಧರಿಸಿದ್ದರು. ಅಂತರಾಷ್ಟ್ರೀಯ  ಸ್ಟಾರ್ ಗಳ ಜೊತೆಗೆ ಪ್ಯಾರಿಸ್ ಫ್ಯಾಶನ್ ವೀಕ್ 2023 ರಲ್ಲಿ ಐಶ್ವರ್ಯಾ ಲೋರಿಯಲ್ ಪ್ಯಾರಿಸ್ ಅನ್ನು ಪ್ರತಿನಿಧಿಸಿದರು. ಗುಲಾಬಿ ಬಣ್ಣದ ಲಿಪ್‌ಸ್ಟಿಕ್ ಧರಿಸಿದ್ದರು.

ಐಶ್ವರ್ಯ  ರೈ 1994ರ ವಿಶ್ವ ಸುಂದರಿ, ನಟಿ, ರೂಪದರ್ಶಿ, ಹಲವಾರು ಜಾಗತಿಕ ಬ್ರ್ಯಾಂಡ್ಗಳಿಗೆ ಬ್ರಾಂಡ್ ಅಂಬಾಸಿಡರ್. ವಿಶ್ವ ಸುಂದರಿ ಪ್ರಶಸ್ತಿ  ಗೆದ್ದು ಸುಮಾರು 30 ವರ್ಷಗಳಾದರೂ ಅವರು ತಮ್ಮ ಸೌಂದರ್ಯಕ್ಕಾಗಿಯೇ ಬೆಕ್ಕಿನ ಕಣ್ಣಿನ ಚೆಲುವೆ ಜಾಗತಿಕವಾಗಿ ಪ್ರಸಿದ್ಧಿಯಾಗಿದ್ದಾರೆ. 49 ವರ್ಷದ ಐಶ್ವರ್ಯಾ ಜೊತೆಗೆ ಅವರ ಮಗಳು ಆರಾಧ್ಯ ಕೂಡ ಹೋಗಿದ್ದು ಏರ್ ಪೋರ್ಟ್ ನ ಫೋಟೋ, ವಿಡಿಯೊಗಳು ಸಾಕಷ್ಟು ಹರಿದಾಡುತ್ತಿವೆ. ಫ್ಯಾಶನ್ ಶೋಗೆ ಸಿದ್ದವಾಗುತ್ತಿರುವ  ವಿಡಿಯೋ ವೈರಲ್ ಆಗಿವೆ.

Sulekha