ವಿಶ್ವಕಪ್ ಆರಂಭದ ಪಂದ್ಯದಲ್ಲಿ ಸ್ಟೇಡಿಯಂ ಖಾಲಿ ಖಾಲಿ – ಪಂದ್ಯ ನಡೆಯುವ ಎಲ್ಲಾ ಸ್ಟೇಡಿಯಂನಲ್ಲೂ ಪ್ರೇಕ್ಷಕರಿಗೆ ಬಿಸಿಸಿಐನಿಂದ ಉಚಿತ ಕುಡಿಯುವ ನೀರಿನ ವ್ಯವಸ್ಥೆ

ವಿಶ್ವಕಪ್ ಆರಂಭದ ಪಂದ್ಯದಲ್ಲಿ ಸ್ಟೇಡಿಯಂ ಖಾಲಿ ಖಾಲಿ – ಪಂದ್ಯ ನಡೆಯುವ ಎಲ್ಲಾ ಸ್ಟೇಡಿಯಂನಲ್ಲೂ ಪ್ರೇಕ್ಷಕರಿಗೆ ಬಿಸಿಸಿಐನಿಂದ ಉಚಿತ ಕುಡಿಯುವ ನೀರಿನ ವ್ಯವಸ್ಥೆ

ಅಹ್ಮದಾಬಾದ್​ನಲ್ಲಿರುವ ಜಗತ್ತಿನ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಬಾರಿಯ ವರ್ಲ್ಡ್​​ಕಪ್ ಆರಂಭವಾಗಿದೆ. ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ಮಧ್ಯೆ ಓಪನಿಂಗ್ ಮ್ಯಾಚ್ ನಡೆದಿದೆ. ಹೇಳಿಕೇಳಿ ಈ ಫಸ್ಟ್ ಮ್ಯಾಚ್​ ನಡೆದಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭರ್ತಿ 1 ಲಕ್ಷದ 10 ಸಾವಿರ ಮಂದಿ ಕುಳಿತು ನೋಡಬಹುದಾಗಿದೆ. ಆದ್ರೆ ಮೊದಲಿಗೆ ಇಂಗ್ಲೆಂಡ್ ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ಮ್ಯಾಚ್​ನ್ನ ನೋಡಲು ಪ್ರೇಕ್ಷಕರೇ ಬಂದಿಲ್ಲ ಎಂಬುದು ಸ್ಪಷ್ಟವಾಗಿ ಗೋಚರವಾಗಿದೆ.

ಇದನ್ನೂ ಓದಿ:  ಕ್ಯಾಪ್ಟನ್ಸಿ ಡೇನಲ್ಲಿ ರೋಹಿತ್ ಶರ್ಮಾ ಗರಂ – ಹಿಟ್‌ಮ್ಯಾನ್ ಸಿಟ್ಟು ನೋಡಿ ಪಾಕ್ ಕ್ಯಾಪ್ಟನ್‌ಗೆ ನಗು ತಡೆಯಲಾಗಲಿಲ್ಲ ಯಾಕೆ??

ಮೊದಲ ಪಂದ್ಯ​ದಲ್ಲಿಯೇ ನರೇಂದ್ರ ಮೋದಿ ಸ್ಟೇಡಿಯಂ ಖಾಲಿ ಹೊಡೆದಿದೆ. ಒಂದಷ್ಟು ಬೆರಳೆಣಿಕೆಯ ಸಂಖ್ಯೆಯಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್​ ಬೆಂಬಲಿಗರು ಕುಳಿತಿದ್ದರು ಅನ್ನೋದು ಬಿಟ್ಟರೆ, ಇಡೀ ಸ್ಟೇಡಿಯಂ ಖಾಲಿ ಖಾಲಿಯಾಗಿತ್ತು. ಬಳಿಕ ಸಂಜೆಯಾಗುತ್ತಿದ್ದಂತೆ ನ್ಯೂಜಿಲ್ಯಾಂಡ್ ಬ್ಯಾಟಿಂಗ್ ವೇಳೆ ಒಂದಷ್ಟು ಸೀಟ್​ಗಳಲ್ಲಿ ಜನ ಕೂತಿದ್ದು ಕಂಡು ಬಂತು. ಅಸಲಿಗೆ ವಿಶ್ವಕಪ್​ ಟೂರ್ನಿಯ ಎಲ್ಲಾ ಪಂದ್ಯಗಳ ಟಿಕೆಟ್ ಕೂಡ ಬಹುತೇಕ ಸೋಲ್ಡ್​ಔಟ್ ಆಗಿದೆ. ಆದ್ರೂ ಓಪನಿಂಗ್​ ಪಂದ್ಯಕ್ಕೆ ಜನ ಇಷ್ಟೊಂದು ಕಡಿಮೆ ಪ್ರಮಾಣದಲ್ಲಿ ಬಂದಿರೋದು ನಿಜಕ್ಕೂ ಆಶ್ಚರ್ಯ. ಇನ್ನು ಮ್ಯಾಚ್​​ಗೂ ಮುನ್ನ ಯಾವುದೇ ಓಪನಿಂಗ್ ಸೆರಮನಿ ಕಾರ್ಯಕ್ರಮ ಕೂಡ ಇರಲಿಲ್ಲ. ಇವೆಲ್ಲದರ ಮಧ್ಯೆ ವರ್ಲ್ಡ್​ಕಪ್​ ಟೂರ್ನಿ ವೇಳೆ ದೇಶಾದ್ಯಂತ ಎಲ್ಲಾ ಸ್ಟೇಡಿಯಂಗಳಲ್ಲಿ ಪ್ರೇಕ್ಷಕರಿಗೆ ಉಚಿತವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಬಿಸಿಸಿಐ ನಿರ್ಧರಿಸಿದೆ. ಹೀಗಾಗಿ ದುಪ್ಪಟ್ಟು ಹಣ ಕೊಟ್ಟು ಸ್ಟೇಡಿಯಂನಲ್ಲಿ ವಾಟರ್ ಬಾಟಲ್ ಖರೀದಿಸುವ ಅವಶ್ಯಕತೆ ಇಲ್ಲ. ಹೀಗಾಗಿ ಕ್ರಿಕೆಟ್​​ ಅಭಿಮಾನಿಗಳಿಗೂ ಹಣ ಸ್ವಲ್ಪ ಉಳಿಯುತ್ತೆ. ಇಲ್ಲವಾದ್ರೆ ಸ್ಟೇಡಿಯಂನಲ್ಲಿ ಮಾರಾಟ ಮಾಡುವ ನೀರು ಅಂಬಾನಿ ಮನೆಯಿಂದ ತಂದು ಕೊಟ್ಟಂತೆ ಇರುತ್ತೆ. ಯಾಕೆಂದರೆ ಆ ರೇಂಜಿಗೆ ರೇಟ್ ಹಾಕಿರ್ತಾರೆ.

Sulekha