ರಾಜನಂತಿದ್ದ ನಾಯಿ ಈಗ ಅನಾಥ! – ಮುದ್ದಿನ ಶ್ವಾನವನ್ನು ವೈಟ್ಹೌಸ್ನಿಂದ ಬೈಡೆನ್ ಹೊರಹಾಕಿದ್ದೇಕೆ?
ಅತ್ತೆಗೊಂದು ಕಾಲ. ಸೊಸೆಗೊಂದು ಕಾಲ ಎಂಬ ಮಾತನ್ನು ನಾವು ಕೇಳಿರುತ್ತೇವೆ. ಈ ಮಾತು ಅನೇಕ ಸಲ ನಿಜವಾಗಿದೆ. ಏನೂ ಇಲ್ಲದ ಕಡು ಬಡವ ಕೂಡ ಏಕಾಏಕಿ ಶ್ರೀಮಂತನಾಗಿರುವ ಬಗ್ಗೆಯೂ ನಾವು ಕೇಳಿರುತ್ತೇವೆ. ಒಂದು ಸಮಯದಲ್ಲಿ ಇಡೀ ರಾಜ್ಯವನ್ನು ಆಳಿದವ, ಇನ್ನೊಂದು ಸಮಯದಲ್ಲಿ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿಗೆ ತಲುವುದರ ಬಗ್ಗೆಯೂ ಕೇಳಿದ್ದೇವೆ. ಇದೀಗ ಇಲ್ಲೊಂದು ನಾಯಿಯ ಸ್ಥಿತಿಯೂ ಹೀಗೆ ಆಗಿದೆ. ವೈಟ್ಹೌಸ್ನಲ್ಲಿ ಡಾಗ್ ಕಮಾಂಡರ್ ಸೇವೆಗೆ ನಿಯುಕ್ತಿಗೊಂಡ ಜರ್ಮನ್ ಶೆಫರ್ಡ್ ನಾಯಿ ಈಗ ಅನಾಥವಾಗಿದೆ.
ಬೈಡೆನ್ ಮುದ್ದಿನ ಶ್ವಾನ ಈಗ ಅನಾಥ!
ಹೌದು, ಅಮೆರಿಕದ ವೈಟ್ಹೌಸ್ನಲ್ಲಿ ಡಾಗ್ ಕಮಾಂಡರ್ ಸೇವೆಗೆ ನಿಯುಕ್ತಿಗೊಂಡ ಜರ್ಮನ್ ಶೆಫರ್ಡ್ ನಾಯಿಯ ಕತೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರ ನಾಯಿಯಾಗಿತ್ತು. ಹಲವು ಬಾರಿ ತಮ್ಮ ಮುದ್ದಿನ ನಾಯಿ ಜೊತೆ ಕಾಣಿಸಿಕೊಂಡಿದ್ದಾರೆ. 2 ವರ್ಷದ ಜರ್ಮನ್ ಶೆಫರ್ಡ್, ಜೋ ಬೈಡೆನ್ ಡಾಗ್ ಕಮಾಂಡರ್ ಆಗಿ ನೇಮಕಗೊಂಡಿತ್ತು. 2021ರಲ್ಲಿ ವೈಟ್ಹೌಸ್ನಲ್ಲಿ ಡಾಗ್ ಕಮಾಂಡರ್ ಸೇವೆಗೆ ನಿಯುಕ್ತಿಗೊಂಡ ಜರ್ಮನ್ ಶೆಫರ್ಡ್ ಇದೀಗ ವೈಟ್ಹೌಸ್ನಿಂದಲೇ ಹೊರಬಿದ್ದಿದೆ.
ಇದನ್ನೂ ಓದಿ: ಕೂತಲ್ಲೇ ಪಾರ್ಶ್ವವಾಯು ಅಟ್ಯಾಕ್! – 100ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಕಾಡುತ್ತಿದೆ ವಿಚಿತ್ರ ಕಾಯಿಲೆ!
ವೈಟ್ ಹೌಸ್ನಿಂದ ಹೊರಗೆ ಹಾಕಿದ್ದೇಕೆ?
ಹಲವು ಸಮಯದಿಂದ ವೈಟ್ ಹೌಸ್ನಲ್ಲಿ ಈ ನಾಯಿ ರಾಜನಂತೆ ಮೆರೆಯುತ್ತಿತ್ತು. ಹಲವು ಭಕ್ಷ್ಯಗಳನ್ನು ಸವಿಯುತ್ತಿತ್ತು. ಇದ್ರಿಂದಾಗಿಯೇ ಈ ನಾಯಿಗೆ ಸೊಕ್ಕು ಬಂದಿತೋ ಏನೋ. ಒಳ್ಳೆ ಊಟ ತಿಂದು ಮೈಬೆಳೆಸಿಕೊಂಡಿದ್ದ ಶ್ವಾನ ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಲು ಶುರುಮಾಡಿದೆ. ಸಿಬ್ಬಂದಿಯನ್ನೂ ಬಿಡದೇ ಕಚ್ಚಲು ಶುರುಮಾಡಿದೆ. ಈಗಾಗಲೇ ವೈಟ್ಹೌಸ್ ಸಿಬ್ಬಂದಿ ಸೇರಿದಂತೆ ಒಟ್ಟು 11 ಮಂದಿಗೆ ಜೆರ್ಮನ ಶೆಫರ್ಡ್ ಕಚ್ಚಿದೆ. ಹೆಚ್ಚು ಆಕ್ರಮಣಕಾರಿಯಾಗಿದ್ದ ಈ ಜೆರ್ಮನ್ ಶೆಫರ್ಡ್ನಿಂದ ಗಾಯಗೊಂಡವರ ಸಂಖ್ಯೆಯೇ ಹೆಚ್ಚಿದೆ. ಹೀಗಾಗಿ ಈ ನಾಯಿಗೆ ವೈಟ್ಹೌಸ್ನಿಂದ ಗೇಟ್ಪಾಸ್ ನೀಡಿದೆ. ಸೆಕ್ರೆಟರಿ ಸರ್ವೀಸ್ ಎಜೆಂಟ್ ನಾಯಿ ಕಡಿತದಿಂದ ತೀವ್ರವಾಗಿ ಗಾಯಗೊಂಡಿದ್ದರು. ಇಷ್ಟೇ ಅಲ್ಲ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಾಗ್ ಕಮಾಂಡರ್ನಿಂದ ಅಪಾಯ ಹೆಚ್ಚುತ್ತಿದ್ದಂತೆ ನಾಯಿಗೆ ಗೇಟ್ ಪಾಸ್ ನೀಡುವ ನಿರ್ಧಾರಕ್ಕೆ ಬರಲಾಗಿದೆ.
ಅಕ್ಟೋಬರ್ 1 ರಿಂದ ವೈಟ್ಹೌಸ್ನಿಂದ ಜರ್ಮನ್ ಶೆಫರ್ಡ್ ಹೊರಬಿದ್ದಿದೆ. ಇನ್ನು ಈ ಡಾಗ್ ಕಮಾಂಡರನ್ನು ಎಲ್ಲಿಗೆ ಸ್ಥಳಾಂತರಿಸಲಾಗಿದೆ. ಯಾರು ನೋಡಿಕೊಳ್ಳುತ್ತಿದ್ದಾರೆ ಅನ್ನೋ ಯಾವುದೇ ಮಾಹಿತಿ ಲಭ್ಯವಿಲ್ಲ.
ಜುಲೈ ತಿಂಗಳಲ್ಲಿ ಸಂವಹನ ನಿರ್ದೇಶಕ ಹಾಗೂ ಇತರ ಕೆಲ ಅಧಿಕಾರಿಗಳ ತಂಡ ಸಭೆ ಸೇರಿ ಹೊಸ ನಿಯಮ ರೂಪಿಸಿತ್ತು. ಬಳಿಕ ಈ ಕುರಿತು ಜೋ ಬೈಡೆನ್ ಪತ್ನಿಗೆ ಮನವರಿಕೆ ಮಾಡಿಕೊಡಲಾಗಿತ್ತು. ನಾಯಿಗೆ ಗೇಟ್ಪಾಸ್ ನೀಡುವ ಕುರಿತು ಬೈಡೆನ್ ಪತ್ನಿಗೆ ಮಾಹಿತಿ ನೀಡಿ ಕ್ರಮ ಕೈಗೊಳ್ಳಲಾಗಿದೆ.