ಪೂರ್ಣ ನಿದ್ರೆಗೆ ಜಾರಿದ ವಿಕ್ರಮ್, ಪ್ರಜ್ಞಾನ್ – ಚಂದ್ರಯಾನ – 3 ಕಾರ್ಯಾಚರಣೆ ಸಂಪೂರ್ಣ ಸ್ಥಗಿತ?
ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ 3 ಬಹುತೇಹ ಸ್ಥಗಿತಗೊಂಡಿದೆ. ಚಂದ್ರನ ಅಂಗಳದಲ್ಲಿ ನಿದ್ರೆಗೆ ಜಾರಿರುವ ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ನಿದ್ರೆಗೆ ಜಾರಿದ್ದು, ಮತ್ತೆ ಎಚ್ಚರಗೊಳ್ಳುತ್ತಿಲ್ಲ. ಹೀಗಾಗಿ ವಿಕ್ರಮ್ ಲ್ಯಾಂಡರ್ ಹಾಗೂ ಪ್ರಜ್ಞಾನ್ ರೋವರ್ ಸಂಪೂರ್ಣವಾಗಿ ನಿದ್ರೆಗೆ ಜಾರಿವೆ. ಆದರೂ ಕೊನೆಯ ದಿನದವರೆಗೂ ಕಾದು ನೋಡಲು ಇಸ್ರೋ ಅಧ್ಯಕ್ಷ ಸೋಮನಾಥ್ ಹೇಳಿದ್ದಾರೆ ಎಂದು ವರದಿಯಾಗಿದೆ.
ವಿಕ್ರಮ್ ಲ್ಯಾಂಡರ್ ಹಾಗೂ ಪ್ರಜ್ಞಾನ್ ರೋವರ್ ಅನ್ನು ಚಂದ್ರನ ಒಂದು ದಿನ (14 ಭೂಮಿಯ ದಿನಗಳು)ದ ಕಾರ್ಯಾಚರಣೆಗಾಗಿ ವಿನ್ಯಾಸಗೊಳಿಸಲಾಗಿತ್ತು. ಆದರೂ ಇವು ಎರಡನೇ ಇನ್ನಿಂಗ್ಸ್ ಆರಂಭಿಸಬಹುದು ಎಂಬ ವಿಶ್ವಾಸ ವಿಜ್ಞಾನಿಗಳಲ್ಲಿತ್ತು. ಒಂದು ಚಂದ್ರನ ದಿನದ ನಂತರ ವಿಕ್ರಮ್ ಮತ್ತು ಪ್ರಗ್ಯಾನ್ ಕಾರ್ಯಾಚರಣೆ ಸ್ಥಗಿತಗೊಳಿಸಿತು. ಇದಾದ ನಂತರ, ಪುನಃ ಸೆ.20, 21 ಮತ್ತು 22ರಂದು ಅವುಗಳಿಗೆ ಚಾಲನೆ ನೀಡಲು ಇಸ್ರೋ ವಿಜ್ಞಾನಿಗಳು ಪ್ರಯತ್ನಿಸಿದ್ದಾರೆ. ಆದರೆ ಅದು ನಿದ್ರೆಯಿಂದ ಎದ್ದಿಲ್ಲ.
ಇದನ್ನೂ ಓದಿ: ನಾಡಹಬ್ಬ ದಸರಾಗೆ ಕ್ಷಣಗಣನೆ – 9 ದಿನದಲ್ಲಿ ಅರಮನೆಯಲ್ಲಿ ಏನೇನು ಕಾರ್ಯಕ್ರಮ ನಡೆಯಲಿದೆ?
ಈ ಚಂದ್ರನ ದಿನ ಅಂದರೆ ಮುಂದಿನ 14 ಭೂಮಿಯ ದಿನಗಳವರೆಗೆ ನಾವು ವಿಕ್ರಮ್ ಮತ್ತು ಪ್ರಗ್ಯಾನ್ ಅನ್ನು ಕಾರ್ಯಚಲಿಸುವಂತೆ ಮಾಡಲು ಯತ್ನಿಸುತ್ತೇವೆ. ಕೊನೆ ಕ್ಷಣದವರೆಗೂ ನಾವು ಈ ಪ್ರಯತ್ನವನ್ನು ಮುಂದುವರಿಸಲಿದ್ದು, ಹೆಚ್ಚುವರಿಯಾಗಿ ಚಂದ್ರನ ಅಧ್ಯಯನಕ್ಕೆ ಸಿಗುವ ಯಾವುದೇ ಅವಕಾಶವನ್ನು ನಾವು ತಪ್ಪಿಸಿಕೊಳ್ಳುವುದಿಲ್ಲ ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ತಿಳಿಸಿದ್ದಾರೆ.