30 ಗ್ರಾಂ ಚಿನ್ನ, 500 ಗ್ರಾಂ ಬೆಳ್ಳಿ, ಕಲರ್ ಕಲರ್ ರೇಷ್ಮೆ ದಾರದ ಕಮಾಲ್ – ಗೋಸುಂಬೆಯಂತೆ ಬಣ್ಣ ಬದಲಾಯಿಸುತ್ತೆ ಈ ಸೀರೆ!
ಬಣ್ಣ ಬದಲಾಯಿಸೋದು ಅಂದಾಕ್ಷಣ ಥಟ್ ಅಂತಾ ಗೋಸುಂಬೆ ನೆನಪಾಗುತ್ತೆ. ಕೆಲವೊಮ್ಮೆ ಬೈಗುಳದಲ್ಲೂ ಈ ಪದವನ್ನ ಬಳಸುತ್ತಾರೆ. ಆದರೆ ಗೋಸುಂಬೆಯಂತೆಯೇ ಬಣ್ಣ ಬದಲಿಸೋ ಸೀರೆಯನ್ನ ಇದೆ ಅಂದರೆ ನೀವು ನಂಬಲೇಬೇಕು. ಸ್ವತಃ ನೇಕಾರರೂ ಆಶ್ಚರ್ಯ ಪಡುವಂತೆ ಬಣ್ಣ ಬದಲಿಸುವ ಸೀರೆಯನ್ನ ನೇಯಲಾಗಿದೆ.
ಇದನ್ನೂ ಓದಿ : ಮೇಲ್ಸೇತುವೆಯಿಂದ ವಿದ್ಯುತ್ ತಂತಿ ಮೇಲೆ ಬಿದ್ದ ಪ್ರವಾಸಿಗರ ಬಸ್ – 21 ಮಂದಿ ಸಾವು
ತೆಲಂಗಾಣದ ನೇಕಾರ ನಲ್ಲ ವಿಜಯ್ ಬಣ್ಣ ಬದಲಿಸುವ ಸೀರೆಯನ್ನ ತಯಾರಿಸಿದ್ದಾರೆ. ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ನೇಕಾರ ನಲ್ಲ ವಿಜಯ್ ಅವರು ವಿವಿಧ ಛಾಯೆಗಳೊಂದಿಗೆ ತನ್ನ ಬಣ್ಣವನ್ನು ಸ್ವಯಂಚಾಲಿತವಾಗಿ ಬದಲಾಯಿಸುವ ರೇಷ್ಮೆ ಸೀರೆಯನ್ನು ನೇಯ್ದಿದ್ದಾರೆ. ತೆಲಂಗಾಣ ಸಚಿವ ಕೆ.ಟಿ.ರಾಮರಾವ್ ಅವರು ಇತ್ತೀಚೆಗೆ ಹೈದರಾಬಾದ್ನ ಡಾ. ಬಿ.ಆರ್. ಅಂಬೇಡ್ಕರ್ ಸೆಕ್ರೆಟರಿಯೇಟ್ನಲ್ಲಿ ಈ ವಿಶೇಷ ಸೀರೆಯನ್ನು ಬಿಡುಗಡೆ ಮಾಡಿದ್ದಾರೆ. ಈ ಒಂದೇ ಸೀರೆ ಗುಲಾಬಿ ಮತ್ತು ಬಂಗಾರದ ಬಣ್ಣಗಳಲ್ಲಿದೆ. ವಿಜಯ್ ಸೀರೆ ನೇಯಲು 30 ಗ್ರಾಂ ಚಿನ್ನ, 500 ಗ್ರಾಂ ಬೆಳ್ಳಿ ಮತ್ತು ರೇಷ್ಮೆ ದಾರಗಳನ್ನು ವಿವಿಧ ಬಣ್ಣಗಳಲ್ಲಿ ಬಳಸಿದ್ದೇನೆ. ಈ ಸೀರೆ ನೇಯಲು ಬರೋಬ್ಬರಿ 30 ದಿನ ಬೇಕಾಗಿದ್ದು, 2.50 ಲಕ್ಷ ಖರ್ಚಾಗಿದೆ ಎಂದು ತಿಳಿಸಿದ್ದಾರೆ.
ಈ ಬಣ್ಣ ಬದಲಿಸುವ ಸೀರೆ 6.30 ಮೀಟರ್ ಉದ್ದ ಮತ್ತು 48 ಇಂಚು ಅಗಲದ ಸೀರೆಯು 600 ಗ್ರಾಂ ತೂಕವನ್ನು ಹೊಂದಿದೆ. ಮುಂದಿನ ದಿನಗಳಲ್ಲಿ 25 ಲಕ್ಷ ವೆಚ್ಚದ ಅದ್ಬುತ ಸೀರೆಯನ್ನು ಎಂದು ಬಣ್ಣ ಬದಲಿಸುವ ಸೀರೆ ನೇಯ್ದ ನೇಕಾರ ವಿಜಯ್ ತಿಳಿಸಿದ್ದಾರೆ. ಇಷ್ಟು ದಿನ ಗೋಸುಂಬೆಯನ್ನ ಮಾತ್ರ ಬಣ್ಣ ಬದಲಿಸುತ್ತೆ ಅಂತಿದ್ದ ಜನ ಇನ್ನು ಮುಂದೆ ಸೀರೆಯೂ ಬಣ್ಣ ಬದಲಿಸುತ್ತೆ ಎನ್ನಬೇಕಾಗುತ್ತದೆ.