ಅತಿಯಾದ ಸ್ಮಾರ್ಟ್ ಫೋನ್ ಬಳಕೆಯಿಂದ ಹೃದಯ ಮತ್ತು ಮೆದುಳಿಗೆ ಎಫೆಕ್ಟ್ – ತಜ್ಞರು ಕೊಟ್ಟ ಎಚ್ಚರಿಕೆ ಏನು?
ಸ್ಮಾರ್ಟ್ ಫೋನ್ ಗಳಿಗೆ ಜನ ಅಡಿಕ್ಟ್ ಆಗಿದ್ದು, ಅವ್ರ ಲೈಫ್ ಸ್ಟೈಲ್ ಕೂಡ ಚೇಂಜ್ ಆಗಿದೆ. ಇದರ ನೇರ ಪರಿಣಾಮ ಆರೋಗ್ಯದ ಮೇಲೆ ಬೀರುತ್ತಿದೆ. ಮೊಬೈಲ್ ಬಳಕೆಯಿಂದ ಏನೆಲ್ಲಾ ಸಮಸ್ಯೆಯಾಗುತ್ತೆ. ಅತೀ ಹೆಚ್ಚು ಬಳಕೆ ಮಾಡುವುದರ ಪರಿಣಾಮ ಏನು ಅನ್ನುವ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ : ಚಿರ ಯುವಕನಂತಾಗಲು ನಿತ್ಯ 111 ಮಾತ್ರೆಗಳನ್ನು ಸೇವಿಸುತ್ತಾನೆ ಈ ಮಿಲಿಯನೇರ್! – ಈತನ ದಿನಚರಿ ಕಂಡು ಜಗತ್ತೇ ಬೆರಗು!
ಮೊಬೈಲ್ ಬಳಕೆಯಿಂದ ನೇರ ಅಪಾಯವಿರುವುದು ನಮ್ಮ ಮೆದುಳಿಗೆ. ಸ್ಮಾರ್ಟ್ ಫೋನ್ ಹೊರಸೂಸುವ ಎಲೆಕ್ಟ್ರೋ ಮ್ಯಾಗ್ನೆಟಿಕ್ ರೇಡಿಯೇಷನ್ ನಿಂದ ಆರೋಗ್ಯಕ್ಕೆ ಹಾನಿಯುಂಟಾಗುವ ಸಾಧ್ಯತೆಗಳಿವೆ. ಆದರೆ ಹೃದಯಕ್ಕೆ ಇದರ ನೇರ ಪರಿಣಾಮ ಕಡಿಮೆ ಎನ್ನಲಾಗಿದೆ. ಅತಿಯಾದ ಮೊಬೈಲ್ ಬಳಕೆಯು ವ್ಯಕ್ತಿಯನ್ನ ಜಡತ್ವಕ್ಕೆ ತಳ್ಳುತ್ತದೆ. ಇದ್ರಿಂದ ದೈಹಿಕ ಚಟುವಟಿಕೆ ಕಡಿಮೆಯಾಗಿ ಜೀವನ ಶೈಲಿ ಸಂಪೂರ್ಣವಾಗಿ ಬದಲಾಗುತ್ತದೆ. ಜಡತ್ವ ಹೆಚ್ಚಾದಷ್ಟೂ ದೈಹಿಕ ಆರೋಗ್ಯ ಹದಗೆಡುತ್ತಾ ಹೋಗುತ್ತದೆ. ರಕ್ತದೊತ್ತಡ, ಮಧುಮೇಹಗಳಂತ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಇದು ಹೃದಯಾಘಾಕ್ಕೆ ಕಾರಣವಾಗುತ್ತದೆ. ಪದೇಪದೆ ಸ್ಮಾರ್ಟ್ ಫೋನ್ ನೋಡಿ ಒತ್ತಡಕ್ಕೆ ಒಳಗಾಗುವುದು ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಹೀಗಾಗಿ ಆದಷ್ಟು ಸ್ಮಾರ್ಟ್ ಫೋನ್ ಗಳಿಂದ ದೂರ ಇರೋದೇ ಒಳ್ಳೆಯದು.