ಹೆಚ್ಚಾಗುತ್ತಿದೆ ನಾಯಿ ದಾಳಿ ಪ್ರಕರಣ – ಆಕ್ರಮಣಕಾರಿ ಶ್ವಾನಗಳ ದತ್ತು ನಿಷೇಧಿಸುತ್ತಾ ಸರ್ಕಾರ?

ಹೆಚ್ಚಾಗುತ್ತಿದೆ ನಾಯಿ ದಾಳಿ ಪ್ರಕರಣ – ಆಕ್ರಮಣಕಾರಿ ಶ್ವಾನಗಳ ದತ್ತು ನಿಷೇಧಿಸುತ್ತಾ ಸರ್ಕಾರ?

ಇತ್ತೀಚಿಗೆ ಶ್ವಾನ ದಾಳಿ ಹೆಚ್ಚಾಗುತ್ತಿದೆ. ಶ್ವಾನ ದಾಳಿಯಿಂದಾಗಿ ಈಗಾಗಲೇ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಹಲವು ದೇಶಗಳಲ್ಲಿ ಪಿಟ್‌ಬುಲ್‌, ರಾಟ್‌ವಿಲ್ಲರ್‌ಗಳಂತಹ ಆಕ್ರಮಣಕಾರಿ ಶ್ವಾನಗಳ ಸಾಕಾಣಿಕೆ ಹಾಗೂ ಮಾರಾಟವನ್ನು ಬ್ಯಾನ್‌ ಮಾಡಲಾಗಿದೆ. ಇದೀಗ ಗೋವಾದಲ್ಲಿ ಕೂಡ ಶ್ವಾನ ದಾಳಿ ಪ್ರಕರಣ ಹೆಚ್ಚಾಗುತ್ತಿದೆ. ಇದೀಗ ಗೋವಾ ಸರ್ಕಾರ ಶ್ವಾನ ದಾಳಿ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿದೆ.

ಗೋವಾದಲ್ಲಿ ಶ್ವಾನ ದಾಳಿ ಪ್ರಕರಣಗಳು ಹೆಚ್ಚಾಗುತ್ತಿದೆ. ನಾಯಿಗಳು ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡುತ್ತಿವೆ. ಇದೀಗ ಗೋವಾ ಸರ್ಕಾರ ಶ್ವಾನ ದಾಳಿ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಲು ಮುಂದಾಗಿದೆ. ಶ್ವಾನ ದಾಳಿಗಳನ್ನು ತಡೆಯಲು ಹೊಸ ನಿಯಮಗಳನ್ನು ರೂಪಿಸಲು ಮುಂದಾಗಿದೆ. ಆಕ್ರಮಣಕಾರಿ ಪ್ರವೃತ್ತಿಹೊಂದಿರುವ ತಳಿಯ ಶ್ವಾನಗಳನ್ನು ಶ್ವಾನಪ್ರಿಯರು ದತ್ತು ಪಡೆಯದಂತೆ ರಾಜ್ಯದಲ್ಲಿ ನಿರ್ಬಂಧ ವಿಧಿಸಲು ಚಿಂತನೆ ನಡೆಸಿದೆ.

ಇದನ್ನೂ ಓದಿ: ಅಕ್ಟೋಬರ್ ನಲ್ಲೂ 5 ಕೆಜಿ ಅಕ್ಕಿ ಬದಲಿಗೆ ಹಣ – ಸೆಪ್ಟೆಂಬರ್ ತಿಂಗಳ ದುಡ್ಡು ಇನ್ನೂ ಫಲಾನುಭವಿಗಳ ಖಾತೆಗೆ ಜಮೆ ಆಗಿಲ್ಲ 

ಈ ಬಗ್ಗೆ ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಮಾಹಿತಿ ನೀಡಿದ್ದಾರೆ. ಗೋವಾದಲ್ಲಿ ಶ್ವಾನ ದಾಳಿಗಳು ಹೆಚ್ಚುತ್ತಿದೆ. ಶ್ವಾನ ಪೋಷಕರು ಸಾಕು ಪ್ರಾಣಿಗಳಾಗಿ ಆಕ್ರಮಣಕಾರಿ ಶ್ವಾನಗಳನ್ನು ದತ್ತು ಪಡೆಯುತ್ತಿದ್ದಾರೆ. ಆದರೆ, ಕನಿಷ್ಠಪಕ್ಷ ಅವುಗಳಿಗೆ ಅಗತ್ಯ ಲಸಿಕೆಯನ್ನೂ ಹಾಕಿಸಿರುವುದಿಲ್ಲ. ಹೀಗಾಗಿ ಅಂಥ ತಳಿಗಳ ಶ್ವಾನಗಳನ್ನು ದತ್ತು ಪಡೆಯದಂತೆ ನಿರ್ಬಂಧಿಸಲು ಯೋಚಿಸುತ್ತಿದ್ದೇವೆ. ಇದರೊಂದಿಗೆ ಬೀದಿನಾಯಿಗಳ ಹಾವಳಿ ಬಗ್ಗೆಯೂ ಸಾವಂತ್‌ ಆತಂಕ ವ್ಯಕ್ತಪಡಿಸಿ, ರಾಜ್ಯದಲ್ಲಿ ಪ್ರತಿದಿನ 1 ಅಥವಾ ಎರಡು ರಸ್ತೆ ಅಪಘಾತಗಳು ಬೀದಿ ಶ್ವಾನಗಳ ಹಾವಳಿಯಿಂದಲೇ ದಾಖಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶ್ವಾನ ದಾಳಿ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

Shwetha M