ಸ್ಮಾರ್ಟ್‌ ಫೋನ್‌ ಗಳಲ್ಲಿ WhatsApp ವರ್ಕ್ ಆಗಲ್ಲ! – ಅಕ್ಟೋಬರ್ ನಿಂದ ವಾಟ್ಸಾಪ್ ನಲ್ಲಿ ಭಾರಿ ಬದಲಾವಣೆ?  

ಸ್ಮಾರ್ಟ್‌ ಫೋನ್‌ ಗಳಲ್ಲಿ WhatsApp ವರ್ಕ್ ಆಗಲ್ಲ! – ಅಕ್ಟೋಬರ್ ನಿಂದ ವಾಟ್ಸಾಪ್ ನಲ್ಲಿ ಭಾರಿ ಬದಲಾವಣೆ?  

ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​ಆ್ಯಪ್ ಆಗಾಗ ಅಪ್ಡೇಟ್ ಆಗುತ್ತಲೇ ಇರುತ್ತೆ. ಆಂಡ್ರಾಯ್ಡ್, ಐಒಎಸ್ ಮತ್ತು ವೆಬ್ ಸೇರಿದಂತೆ ಎಲ್ಲಾ ವಾಟ್ಸ್​ಆ್ಯಪ್ ಆವೃತ್ತಿಗಳು ಹೊಸ ಆಪರೇಟಿಂಗ್ ಸಿಸ್ಟಮ್‌ಗಳಿಗೆ ಹೊಂದಿಕೊಳ್ಳಲು ಪ್ರತಿ ತಿಂಗಳು ಹೊಸ ಸಿಸ್ಟಮ್ ನವೀಕರಣಗಳನ್ನು ಸ್ವೀಕರಿಸುತ್ತವೆ. ಇದೀಗ ಮುಂದಿನ ತಿಂಗಳಿನಿಂದ ವಾಟ್ಸಾಪ್ ನಲ್ಲಿ ಭಾರಿ ಬದಲಾವಣೆ ಆಗಲಿದೆ.

ಇದನ್ನೂ ಓದಿ:  ಸ್ಮಾರ್ಟ್ ಫೋನ್ ಪಕ್ಕದಲ್ಲಿ ಇಟ್ಟುಕೊಂಡು ಮಲಗಿದರೆ ಹುಷಾರ್ – ನಿಮಗೂ ಕಾಡಬಹುದು ಈ ಸಮಸ್ಯೆಗಳು

ವಾಟ್ಸಾಪ್ ಅನ್ನು ಕೋಟ್ಯಂತರ ಜನ ಬಳಸ್ತಿದ್ದಾರೆ.  ಆದ್ರೆ ಮುಂದಿನ ತಿಂಗಳಿಂದ ಕೆಲವು ಆಂಡ್ರಾಯ್ಡ್ ಫೋನ್‌ ಗಳು ಮತ್ತು ಐ ಫೋನ್‌ ಗಳಲ್ಲಿ ವಾಟ್ಸಾಪ್ ವರ್ಕ್ ಆಗಲ್ಲ. ಕೆಲವು ಹಳೆಯ ಸ್ಮಾರ್ಟ್ಫೋನ್ ಮಾಡೆಲ್‌ಗಳಿಗೆ ವಾಟ್ಸಾಪ್ ಬೆಂಬಲವನ್ನು ಕೊನೆಗೊಳಿಸುತ್ತಿದೆ. ಹಳೆಯ ಸ್ಮಾರ್ಟ್ಫೋನ್ಗಳಲ್ಲಿ 2023ರ ಅಕ್ಟೋಬರ್ 24 ರಿಂದ ವಾಟ್ಪಾಪ್ ವರ್ಕ್ ಆಗಲ್ಲ.  “Android OS ಆವೃತ್ತಿ 5.0 ಮತ್ತು ಹೊಸದನ್ನು ಮಾತ್ರ ಈ ಅಕ್ಟೋಬರ್ 24ರಿಂದ ಬೆಂಬಲಿಸಲಾಗುತ್ತದೆ” ಎಂದು WhatsApp ತನ್ನ ಸಪೋರ್ಟ್ ಪೇಜ್ನಲ್ಲಿ ಉಲ್ಲೇಖಿಸಿದೆ.

“ತಂತ್ರಜ್ಞಾನದಲ್ಲಿನ ಇತ್ತೀಚಿನ ಪ್ರಗತಿಯನ್ನು ಮುಂದುವರಿಸಲು, ನಮ್ಮ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ನಾವು ಹಳೆಯ ಆಪರೇಟಿಂಗ್ ಸಿಸ್ಟಮ್ಗಳನ್ನು ಬೆಂಬಲಿಸುವುದನ್ನು ವಾಡಿಕೆಯಂತೆ ನಿಲ್ಲಿಸುತ್ತೇವೆ. ನಿಮ್ಮ ಆಪರೇಟಿಂಗ್ ಸಿಸ್ಟಂ ಅನ್ನು ನಾವು ಬೆಂಬಲಿಸುವುದನ್ನು ನಿಲ್ಲಿಸಿದರೆ, ವಾಟ್ಸಾಪ್ ಬಳಸುವುದನ್ನು ಮುಂದುವರಿಸಲು ನಿಮ್ಮ ಸಾಧನವನ್ನು ಅಪ್ಗ್ರೇಡ್ ಮಾಡಲು ನಿಮಗೆ ಸೂಚನೆ ನೀಡಲಾಗುತ್ತದೆ ಎಂದು ವಾಟ್ಸಾಪ್‌ ಹೇಳಿದೆ. ಇದರರ್ಥ ನಿಮ್ಮ ಹಳೆೇ  ಆಂಡ್ರಾಯ್ಡ್ ಫೋನ್‌ಗಳಲ್ಲಿ ವಾಟ್ಸಾಪ್‌ ಇರಲ್ಲ ಅನ್ನೋದನ್ನು ಈ ಹೇಳಿಕೆ ಸ್ಪಷ್ಟಪಡಿಸುತ್ತದೆ.

ಈ Android ಫೋನ್‌ಗಳಲ್ಲಿ WhatsApp ಕಾರ್ಯನಿರ್ವಹಿಸುವುದಿಲ್ಲ!

  • ನೆಕ್ಸಸ್‌ 7 (Android 4.2 ಗೆ ಅಪ್‌ಗ್ರೇಡ್ ಮಾಡಬಹುದು)
  • ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್‌ 2
  • ಎಚ್‌ಟಿಸಿ ಒನ್‌
  • ಸೋನಿ ಎಕ್ಸ್‌ಪೀರಿಯಾ Z
  • ಎಲ್‌ಜಿ ಆಪ್ಟಿಮಸ್ G ಪ್ರೋ
  • ಸ್ಯಾಮ್ಸಂಗ್‌ ಗ್ಯಾಲಕ್ಸಿ S2
  • ಸ್ಯಾಮ್ಸಂಗ್ ಗ್ಯಾಲಕ್ಸಿ ನೆಕ್ಸಸ್‌
  • ಎಚ್‌ಟಿಸಿ ಸೆನ್ಸೇಶನ್
  • ಮೋಟೋರೊಲಾ ಡ್ರಾಯ್ಡ್‌ Razr
  • ಸೋನಿ ಎಕ್ಸ್‌ಪೀರಿಯಾ S2
  • ಮೋಟೋರೊಲಾ Xoom
  • ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ಯಾಬ್‌ 10.1
  • ಏಸಸ್‌ Eee ಪ್ಯಾಡ್ ಟ್ರಾನ್ಸ್‌ಫಾರ್ಮರ್‌
  • ಏಸರ್ ಐಕೋನಿಯಾ ಟ್ಯಾಬ್ A5003
  • ಸ್ಯಾಮ್ಸಂಗ್‌ ಗ್ಯಾಲಕ್ಸಿ S
  • ಎಚ್‌ಟಿಸಿ ಡಿಸೈರ್ HD
  • ಎಲ್‌ಜಿ ಆಪ್ಟಿಮಸ್‌ 2X
  • ಸೋನಿ ಎರಿಕ್ಸನ್‌ ಎಕ್ಸ್‌ಪೀರಿಯಾ Arc3

Shwetha M