ತೆರೆಯ ಮೇಲೆ ಅಬ್ಬರಿಸಲಿದೆ ‘ಕೆಜಿಎಫ್-3’! – ರಾಕಿಭಾಯ್ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್‌!

ತೆರೆಯ ಮೇಲೆ ಅಬ್ಬರಿಸಲಿದೆ ‘ಕೆಜಿಎಫ್-3’! – ರಾಕಿಭಾಯ್ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್‌!

ಕನ್ನಡ ಸಿನಿಮಾ ಇಂಡಸ್ಟ್ರಿಗೆ ‘ಕೆಜಿಎಫ್’ ರಿಯಲ್ ಗೋಲ್ಡ್. ಬರೀ ದುಡ್ಡು ಮಾಡಿದ ವಿಚಾರಕ್ಕೆ ಮಾತ್ರವಲ್ಲ, ಎಲ್ಲಾ ವಿಭಾಗದಲ್ಲೂ ‘ಕೆಜಿಎಫ್’ ಚಿತ್ರ ಹಿಂದಿನ ದಾಖಲೆಗಳನ್ನು ಮುರಿದು ಹಾಕಿದೆ. ಎರಡು ಭಾಗದಲ್ಲಿ ಬಿಡುಗಡೆ ಆಗಿರುವ ಕೆಜಿಎಫ್ ಕೋಟ್ಯಂತರ ಭಾರತೀಯ ಫ್ಯಾನ್ಸ್ ಹೃದಯ ಗೆದ್ದಿದೆ. ಆದರೆ ‘ಕೆಜಿಎಫ್-1’ & ‘ಕೆಜಿಎಫ್-2’ ನೋಡಿದ್ದ ಫ್ಯಾನ್ಸ್ ‘ಕೆಜಿಎಫ್-3’ ಯಾವಾಗ? ಅಂತಾ ಕಾಯುತ್ತಿದ್ದರು. ಅದ್ರಲ್ಲೂ ಯಶ್ ಕೆಜಿಎಫ್-2 ಬಳಿಕ ತಮ್ಮ ಮುಂದಿನ ಸಿನಿಮಾ ಕುರಿತು ಯಾವುದೇ ಮಾಹಿತಿ ನೀಡಿರಲಿಲ್ಲ. ಇದೀಗ ‘ಕೆಜಿಎಫ್-3’ ರಿಲೀಸ್ ಡೇಟ್ ಪಕ್ಕಾ ಆಗಿದೆ.

ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಮೂಡಿಸಿದ್ದ ಕೆಜಿಎಫ್ ದೇಶ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಈ ಸಿನಿಮಾ ಸಕ್ಕತ್‌ ಸೌಡ್‌ ಮಾಡಿದೆ. ಹೀಗಾಗಿ ಯಶ್‌ ಅಭಿಮಾನಿಗಳು ಕೆಜಿಎಫ್ ಚಾಪ್ಪರ್ -3 ಯಾವಾಗ ತೆರೆಗೆ ಬರಲಿದೆ ಅಂತಾ ಕಾತುರದಿಂದ ಕಾಯುತ್ತಿದ್ದರು. ಇದೀಗ  ತೆರೆಗೆ ಬರಲು ಸಜ್ಜಾಗುತ್ತಿದೆ ಎಂದು ಹೊಂಬಾಳೆ ಫಿಲ್ಸ್ ವಕ್ತಾರರು ಮಾಹಿತಿ ನೀಡಿದ್ದಾರೆ. ಕೆಜಿಎಫ್ ಚಾಪ್ಟರ್ -3ನ ಪ್ರೊಡಕ್ಷನ್ ಕೆಲಸಗಳು ಇದೇ ಡಿಸೆಂಬರ್‌ನಲ್ಲಿ ಆರಂಭವಾಗಲಿದ್ದು 2025ರಲ್ಲಿ ಚಿತ್ರ ತೆರೆಕಾಣಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: 800 ಸಿನಿಮಾದಲ್ಲಿ ನಟಿಸದಂತೆ ವಿಜಯ್ ಸೇತುಪತಿಗೆ ರಾಜಕಾರಣಿಯ ಒತ್ತಡ – ಕಾರಣ ಬಹಿರಂಗ ಪಡಿಸಿದ ಮುತ್ತಯ್ಯ ಮುರಳೀಧರನ್

‘ಡಿ.21ಕ್ಕೆ ಕೆಜಿಎಫ್ ಚಾಪ್ಟರ್ -1 ಬಿಡುಗಡೆಯಾಗಿ 5 ವರ್ಷವಾಗಲಿದೆ. ಅದೇ ದಿನ ಕಜಿಎಫ್ ಚಾಪ್ಪರ್-3 ಬಿಡುಗಡೆ ದಿನಾಂಕ ಘೋಷಿಸಲಾಗುತ್ತಿದೆ. ಕೆಜಿಎಫ್ ಚಾಪ್ಪರ್ -3 ಚಿತ್ರದ ನಿರ್ದೇಶಕ, ನಿರ್ಮಾಪಕ ಮತ್ತು ನಟರ ನಡುವ ಆರಂಭಿಕ ಸುತ್ತಿನ ಚರ್ಚೆ ನಡೆದಿದೆ ಮತ್ತು ಕಥಾಹಂದರವನ್ನು ಚರ್ಚಿಸಲಾಗಿದೆ. ಚಿತ್ರೀಕರಣವು ಅಕ್ಟೋಬರ್ 2024 ರಲ್ಲಿ ಪ್ರಾರಂಭವಾಗಲಿದೆ. ಚಿತ್ರವು 2025 ರಲ್ಲಿ ಬಿಡುಗಡೆಯಾಗಲಿದೆ. ಕೆಜಿಎಫ್ ಚಾಪ್ಟರ್ 3 ಬಿಡುಗಡೆಯ ದಿನಾಂಕದ ಕುರಿತು ಅಧಿಕೃತ ಪ್ರಕಟಣೆಯನ್ನು ಇದೇ ಡಿಸೆಂಬರ್‌ನಲ್ಲಿ ಮಾಡಲಾಗುತ್ತದೆ’ ಎಂದು ಹೊಂಬಾಳೆ ಫಿಲ್ಸ್ ವಕ್ತಾರರು ತಿಳಿಸಿದ್ದಾರೆ.

2018 ರ ಕೆಜಿಎಫ್ ಅಧ್ಯಾಯ 1ರೊಂದಿಗೆ ಪ್ರಾರಂಭವಾದ ಅಕ್ಷನ್‌ ಸ್ಟ್ಯಾಂಚೈಸ್, ನಂತರ 2022ರಲ್ಲಿ ಮುಂದುವರೆದಿತ್ತು, ಈಗ ಕೆಜಿಎಫ್ ಚಾಪ್ಟರ್ 3 ಬರುತ್ತಿದೆ. ಇದು ರಾಕಿ (ಯಶ್) ಮತ್ತು ಅವನ ಅಧಿಕಾರ ಮತ್ತು ಸಂಪತ್ತಿನ ಆನ್ವೇಷಣೆಯ ಸುತ್ತ ಹೆಣೆಯಲಾಗಿದೆ ಎಂದು ತಿಳಿಸಿದ್ದಾರೆ.

ಈಗಾಗಲೇ ಹೊಂಬಾಳೆ ಫಿಲ್ಸ್‌ನ 3 ಪ್ಯಾನ್ ಇಂಡಿಯಾ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದೆ. ಅವುಗಳೆಂದರೆ ಪ್ರಭಾಸ್ ನಟನೆಯ “ಸಲಾ‌?’ ಇದು ಡಿ.22 ರಂದು ಬಿಡುಗಡೆಯಾಗುತ್ತಿದೆ. ರಿಷಬ್‌ ಶೆಟ್ಟಿ ಅವರ “ಶಾಂತಾರ –2′ ಹಾಗೂ ಪೃಥ್ವಿರಾಜ ಸುಕುಮಾರನ್ ಅವರ ‘ಟೈಸನ್’ ಚಿತ್ರಗಳು ಬಿಡುಗಡೆಯಾಗಬೇಕಿದೆ. ಇವೆರಡು ಚಿತ್ರಗಳ ಬಿಡುಗಡೆ ದಿನಾಂಕ ಇನ್ನಷ್ಟೇ ಘೋಷಣೆಯಾಗಬೇಕಿದೆ.

Shwetha M