ಏಷ್ಯನ್ ಗೇಮ್ಸ್ ನಲ್ಲಿ ಮುಂದುವರಿದ ಭಾರತದ ಚಿನ್ನದ ಬೇಟೆ – ಏರ್ ಪಿಸ್ತೂಲ್ ನಲ್ಲಿ ಬಂಗಾರ ಗೆದ್ದ ಪಾಲಕ್
ಚೀನಾದ ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ 2023 ಏಷ್ಯನ್ ಗೇಮ್ಸ್ನಲ್ಲಿ ಭಾರತೀಯ ಸ್ಪರ್ಧಿಗಳು ಹಲವು ವಿಭಾಗಗಳಲ್ಲಿ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ. ಹಾಗೇ ಶೂಟರ್ಗಳ ಪದಕ ಬೇಟೆ ಮುಂದುವರೆದಿದೆ. 18 ವರ್ಷದ ಪಾಲಕ್ ಶುಕ್ರವಾರ 10 ಮೀಟರ್ ಏರ್ ಪಿಸ್ತೂಲ್ ಮಹಿಳೆಯರ ಫೈನಲ್ನಲ್ಲಿ 241.2 ಗೆಲುವಿನ ಸ್ಕೋರ್ನೊಂದಿಗೆ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಹ್ಯಾಂಗ್ಝೌನಲ್ಲಿ ಭಾರತಕ್ಕೆ ಸಿಕ್ಕ ಎಂಟನೇ ಚಿನ್ನ ಇದಾಗಿದೆ.
ಇದನ್ನೂ ಓದಿ : ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಮುಂದುವರೆದ ಪದಕ ಬೇಟೆ – 4ನೇ ಚಿನ್ನ ಸಮೇತ 8 ಪದಕ ದೋಚಿದ ಭಾರತೀಯ ಅಥ್ಲೀಟ್ಗಳು
2023 ರ ಏಷ್ಯನ್ ಗೇಮ್ಸ್ನ (Asian Games) ಶೂಟಿಂಗ್ನಲ್ಲಿ ಭಾರತದ ಉತ್ತಮ ಆಟ ಮುಂದುವರೆದಿದೆ. ಇಶಾ ಸಿಂಗ್ ಎರಡನೇ ಸ್ಥಾನ ಗಳಿಸಿ ಬೆಳ್ಳಿಯನ್ನು ತಂದುಕೊಟ್ಟರೆ, ಪಾಲಕ್ ಚಿನ್ನಕ್ಕೆ ಕೊರಳೊಡ್ಡಿದ್ದಾರೆ. 10 ಮೀಟರ್ ಏರ್ ಪಿಸ್ತೂಲ್ ಮಹಿಳೆಯರ ಫೈನಲ್ನಲ್ಲಿ ಭಾರತಕ್ಕೆ ಇದು ಡಬಲ್ ಧಮಾಕ ಎನ್ನಬಹುದು. 18 ವರ್ಷದ ಪಾಲಕ್ ಶುಕ್ರವಾರ 241.2 ಗೆಲುವಿನ ಸ್ಕೋರ್ನೊಂದಿಗೆ ಚಿನ್ನದ ಪದಕ ತಮ್ಮದಾಗಿಸಿದು. ಹ್ಯಾಂಗ್ಝೌನಲ್ಲಿ ಭಾರತಕ್ಕೆ ಸಿಕ್ಕ ಎಂಟನೇ ಚಿನ್ನ ಇದಾಗಿದೆ.
ಇನ್ನು ಸಾಕೇತ್ ಮೈನೇನಿ ಮತ್ತು ರಾಮ್ಕುಮಾರ್ ರಾಮನಾಥನ್ ಅವರು ಏಷ್ಯನ್ ಗೇಮ್ಸ್ 2023 ರ ಟೆನಿಸ್ ಪುರುಷರ ಡಬಲ್ಸ್ನಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ತೈವಾನ್ನ ಜೋಡಿಯಾದ ಜೇಸನ್ ಜಂಗ್ ಮತ್ತು ಯು-ಹ್ಸಿಯು ಹ್ಸು ವಿರುದ್ಧ 6-4, 6-4 ರಿಂದ ಸೋತು ಚಿನ್ನ ಗೆಲ್ಲುವಲ್ಲಿ ಎಡವಿ ಬೆಳ್ಳಿ ತಮ್ಮದಾಗಿಸಿಕೊಂಡರು.