ಸೊಪ್ಪು ಎಂದು ಗಾಂಜಾ ತಿಂದ ಕುರಿಗಳ ಹಿಂಡು! – 100 ಕೆಜಿ ಗಾಂಜಾ ಸ್ವಾಹ!
ಕುರಿಗಳನ್ನು ಮೇಯಲು ಬಿಟ್ಟರೆ ಸಿಕ್ಕ ಸಿಕ್ಕ ಗಿಡಗಳನ್ನೇಲ್ಲಾ ತಿಂದು ಬಿಡುತ್ತವೆ. ಭೂಮಿ ಮೇಲಿರುವ ಸಸ್ಯಗಳೆಲ್ಲಾ ತನ್ನದೇ ಸ್ವತ್ತು ಎಂಬಂತೆ ಗಡದ ಬುಡದವರೆಗೂ ತಿಂದು ಬಿಡುತ್ತವೆ. ಇಲ್ಲೊಬ್ಬ ಕುರಿಗಾಹಿ ತನ್ನ ಕುರಿಗಳ ಹಿಂಡನ್ನು ಮೇಯಲು ಬಿಟ್ಟಿದ್ದ. ಕೆಲ ಹೊತ್ತಿನ ನಂತರ ಆತನ ಕುರಿಗಳು ವಿಚಿತ್ರವಾಗಿ ವರ್ತಿಸಲು ಆರಂಭಿಸಿವೆ. ಕುರಿಗಳು ಏಕೆ ವಿಚಿತ್ರವಾಗಿ ವರ್ತಿಸುತ್ತಿವೆ ಎಂದು ಗ್ರೀನ್ಹೌಸ್ ನೋಡಿದಾಗ ಅಕ್ಷರಶಃ ದಂಗಾಗಿ ಹೋಗಿದ್ದಾನೆ.
ಏನಿದು ಘಟನೆ?
ಎಂದಿನಂತೆ ಕುರಿಗಾಹಿ ಕುರಿಗಳನ್ನು ಗ್ರೀನ್ ಹೌಸ್ಗೆ ಮೇಯಲು ಬಿಟ್ಟಿದ್ದಾನೆ. ಕೆಲ ಹೊತ್ತಿನ ಬಳಿಕ ಕುರಿಗಳು ಸರಿಯಾಗಿ ಮೇಯುತ್ತಿವೆಯೇ ಎಂದು ಪರೀಕ್ಷಿಸಲು ತೆರಳಿದ್ದಾನೆ. ಗ್ರೀನ್ಹೌಸ್ನಲ್ಲಿದ್ದ ಕುರಿಹಿಂಡು ವಿಚಿತ್ರವಾಗಿ ವರ್ತಿಸುತ್ತಿದ್ದವು. ಬಲು ಎತ್ತರಕ್ಕೆ ಜಿಗಿಯುತ್ತಿದ್ದವು. ಇದನ್ನು ಕಂಡ ಕುರಿಗಾಹಿಗೆ ಅನುಮಾನ ಬಂದಿದೆ. ಹೋಗಿ ಪರೀಕ್ಷಿಸಿದಾಗ ಒಂದು ಕ್ಷಣ ದಿಕ್ಕೇ ತೋಚದಂತೆ ನಿಂತಿದ್ದಾನೆ. ಏಕೆಂದರೆ ಕುರಿಗಳು ತಾವು ತಿನ್ನುತ್ತಿರುವುದು ಸೊಪ್ಪು ಎಂದುಕೊಂಡು ಗಾಂಜಾ ತಿಂದುಬಿಟ್ಟಿವೆ.
ಇದನ್ನೂ ಓದಿ: ಬರೋಬ್ಬರಿ 100 ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಕೊರಿಯೋಗ್ರಾಫರ್! – ಪೊಲೀಸರು ದಂಡ ವಿಧಿಸಿದ್ದೆಷ್ಟು ಗೊತ್ತಾ?
ಘಟನೆ ನಡೆದಿದ್ದು ಎಲ್ಲಿ?
ಗ್ರೀಸ್ನ ಥೆಸ್ಸಾಲಿಯ ಅಲ್ಮಿರೋಸ್ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಗ್ರೀಸ್, ಲಿಬಿಯಾ, ಟರ್ಕಿ ಮತ್ತು ಬಲ್ಗೇರಿಯಾವನ್ನು ಡೇನಿಯಲ್ ಚಂಡಮಾರುತವು ಅಪ್ಪಳಿಸಿದ ನಂತರ ಅಲ್ಮಿರೋಸ್ ಪಟ್ಟಣದ ಬಳಿ ಇರುವ ಗ್ರೀನ್ ಹೌಸ್ನಲ್ಲಿ ಕುರಿಗಳು ಆಶ್ರಯ ಪಡೆಯುತ್ತಿದ್ದವು. ಈ ವೇಳೆ ಮೇಯಲು ಬಿಟ್ಟಿದ್ದ ಸಂದರ್ಭದಲ್ಲಿ ಕುರಿಗಳ ಹಿಂಡು ಗಾಂಜಾ ತಿಂದಿವೆ. ಬರೋಬ್ಬರು 100 ಕೆಜಿ ಗಾಂಜಾವನ್ನು ಸ್ವಾಹಾ ಮಾಡಿವೆ.
ನಗಬೇಕೋ ಅಳಬೇಕೋ ಗೊತ್ತಾಗುತ್ತಿಲ್ಲ ಎಂದ ಕುರಿಗಾಹಿ!
‘ಪ್ರವಾಹದಿಂದಾಗಿ ನಾವು ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಇಂಥದ್ದರಲ್ಲಿ ಈ ಕುರಿಗಳು ಹೀಗೆ ಮಾಡಿವೆ. ಇದನ್ನು ನೋಡಿ ನನಗೆ ನಗಬೇಕೋ ಅಳಬೇಕೋ ಗೊತ್ತೇ ಆಗಲಿಲ್ಲ. ಈ ವಿಷಯವಾಗಿ ನಿಜಕ್ಕೂ ನನಗೆ ಏನು ಹೇಳಬೇಕು ಗೊತ್ತಾಗುತ್ತಿಲ್ಲ’ ಎಂದು ಹೇಳಿದ್ದಾನೆ.
ಗ್ರೀಸ್ನಲ್ಲಿ ಗಾಂಜಾ ಬೆಳೆಗೆ ಅನುಮತಿ ಇರುವುದೇಕೆ?
2017 ರಿಂದ ಔಷಧೀಯ ಉದ್ದೇಶಗಳಿಗಾಗಿ ಗ್ರೀಸ್ನಲ್ಲಿ ಗಾಂಜಾ ಕಾನೂನುಬದ್ಧವಾಗಿದೆ. 2023 ರಲ್ಲಿ ಮೊದಲ ಔಷಧೀಯ ಗಾಂಜಾ ಉತ್ಪಾದನಾ ಘಟಕವನ್ನು ಪ್ರಾರಂಭಿಸಿತು. ಔಷಧೀಯ ಬಳಕೆಗಾಗಿ ಗಾಂಜಾ ಬೆಳೆಸುತ್ತಿರುವುದರಿಂದ ದೇಶಕ್ಕೆ ಹೆಚ್ಚೆಚ್ಚು ಆರ್ಥಿಕ ಅವಕಾಶಗಳು ಒದಗಿವೆ.
1936 ರಲ್ಲಿ ಇದನ್ನು ನಿಷೇಧಿಸುವ ಮೊದಲು ಕೌಂಟಿಯಲ್ಲಿ ಗಾಂಜಾ ಬೆಳೆಸಿ ಬೆಳೆಸಿತು ಮತ್ತು ರಫ್ತು ಮಾಡಲಾಗುತ್ತಿತ್ತು. ಬ್ರಿಟನ್, ಜರ್ಮನಿ, ಇಟಲಿ ಮತ್ತು ಡೆನ್ಮಾರ್ಕ್ ಸೇರಿದಂತೆ ಸಾಕಷ್ಟು ದೇಶಗಳಲ್ಲಿ ಗಾಂಜಾ ಉತ್ಪನ್ನಗಳನ್ನು ವೈದ್ಯರು ಶಿಫಾರಸು ಮಾಡುತ್ತಾರೆ. ಉರುಗ್ವೆ ನಂತರ ಕೆನಡಾ 90 ವರ್ಷಗಳ ನಂತರ ಗಾಂಜಾ ನಿಷೇಧವನ್ನು ಹಿಂಪಡೆದು ಸಂಪೂರ್ಣ ಕಾನೂನುಬದ್ಧಗೊಳಿಸಿದ ವಿಶ್ವದ ಎರಡನೇ ದೇಶ ಎನ್ನಿಸಿಕೊಂಡಿದೆ.