ಪಿಸ್ತೂಲ್ ಟೀಮ್ ಇವೆಂಟ್ನಲ್ಲಿ ಚಿನ್ನಕ್ಕೆ ಗುರಿ – ಏಷ್ಯನ್ ಗೇಮ್ಸ್ನಲ್ಲಿ ಭಾರತಕ್ಕೆ ಮತ್ತೊಂದು ಸ್ವರ್ಣ
ಚೀನಾದ ಹ್ಯಾಂಗ್ಝೌನಲ್ಲಿ ಬುಧವಾರ ನಡೆದ ಏಷ್ಯನ್ ಗೇಮ್ಸ್ನಲ್ಲಿ ಭಾರತದ ಕ್ರೀಡಾಪಟುಗಳು ತಮ್ಮ ಪ್ರಾಬಲ್ಯ ಮೆರೆದಿದ್ದಾರೆ. ಭಾರತದ ಮನು ಭಾಕರ್, ಇಶಾ ಸಿಂಗ್ ಮತ್ತು ರಿದಮ್ ಸಾಂಗ್ವಾನ್ ಮಹಿಳೆಯರ 25 ಮೀಟರ್ ಶೂಟಿಂಗ್ನಲ್ಲಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಚೀನಾ ನೆಲದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನಲ್ಲಿ ಭಾರತದ ವನಿತಾ ಪಡೆ ಮತ್ತೊಂದು ಚಿನ್ನ ಬೇಟೆಯಾಡಿದ್ದಾರೆ.
ಇದನ್ನೂ ಓದಿ: ಏಕದಿನ ವಿಶ್ವಕಪ್ ಟೂರ್ನಿಯಿಂದ ಅಕ್ಷರ್ ಪಟೇಲ್ ಹೊರಕ್ಕೆ? – ಆರ್.ಅಶ್ವಿನ್ಗೆ ಸಿಗುತ್ತಾ ಚಾನ್ಸ್?
ಏಷ್ಯನ್ ಗೇಮ್ಸ್ 2023ರಲ್ಲಿ ಭಾರತ ಒಟ್ಟು ನಾಲ್ಕು ಚಿನ್ನದ ಪದಕ ಗೆದ್ದು ಬೀಗಿದೆ. ಅಲ್ಲದೆ ಕೇವಲ ಶೂಟಿಂಗ್ನಲ್ಲಿಯೇ ಭಾರತಕ್ಕೆ ಸಿಕ್ಕ ಎರಡನೇ ಚಿನ್ನದ ಪದಕ ಇದಾಗಿದೆ. ಇದಕ್ಕೂ ಮೊದಲು ಪುರುಷರ 10 ಮೀಟರ್ ಏರ್ ರೈಫಲ್ ಟೀಮ್ ಇವೆಂಟ್ನಲ್ಲಿ ಭಾರತ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿತ್ತು. ಆದರೆ, ಈ ಬಾರಿ ಭಾರತ ಚಿನ್ನಕ್ಕೆ ಗುರಿಯಾಗಿದ್ದು ರೈಫಲ್ನಿಂದಲ್ಲ, ಪಿಸ್ತೂಲ್ನಿಂದ. ಮಹಿಳೆಯರ 25 ಮೀಟರ್ ಪಿಸ್ತೂಲ್ ತಂಡ ಸ್ಪರ್ಧೆಯಲ್ಲಿ ಭಾರತದ ಮನು ಭಾಕರ್, ಇಶಾ ಸಿಂಗ್ ಮತ್ತು ರಿದಮ್ ಸಾಂಗ್ವಾನ್ ಒಟ್ಟಾಗಿ 1790 ಅಂಕಗಳನ್ನು ಗಳಿಸಿದರು. ಶೂಟಿಂಗ್ನಲ್ಲಿ ಚಿನ್ನ ಗೆದ್ದ ಭಾರತದ ಮೂವರು ಪುತ್ರಿಯರಲ್ಲಿ ಮನು ಭಾಕರ್ ಅತ್ಯಧಿಕ 590 ಅಂಕಗಳನ್ನು ಗಳಿಸಿದರು. ಈ ಟೀಮ್ ಈವೆಂಟ್ನಲ್ಲಿ ಭಾರತ ಚಿನ್ನದ ಪದಕ ಗೆದ್ದರೆ, ಚೀನಾ ಬೆಳ್ಳಿ ಪದಕ ಗೆದ್ದಿತು. ಹಾಗೆಯೇ ದಕ್ಷಿಣ ಕೊರಿಯಾ ಕಂಚಿನ ಪದಕವನ್ನು ಗೆದ್ದುಕೊಂಡಿತು.