ಮಹಿಳೆಯರ ಸುರಕ್ಷತೆಗೆ ಬಂತು ‘ನಮ್ಮ ಬಿಎಂಟಿಸಿ’ ಮೊಬೈಲ್ ಆ್ಯಪ್ – ಫೋನ್‌ನಲ್ಲೇ ಟ್ರ್ಯಾಕ್ ಮಾಡಬಹುದು ಬಸ್ ಲೈವ್ ರೂಟ್!
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ರಜತ ಮಹೋತ್ಸವದ ಸಂಭ್ರಮದಲ್ಲಿದೆ. ಇದರ ಸ್ಮರಣಾರ್ಥಕವಾಗಿ ಬಿಎಂಟಿಸಿ ಮಹಿಳಾ ಸುರಕ್ಷತೆಯ ಆದ್ಯತೆ ಹಾಗೂ ಬಸ್ ಲೈವ್ ರೂಟ್ ಟ್ರ್ಯಾಕಿಂಗ್ ಸೌಲಭ್ಯ ಹೊಂದಿರುವ ‘ನಮ್ಮ ಬಿಎಂಟಿಸಿ’ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದೆ.
ನಿರ್ಭಯ ಯೋಜನೆಯಡಿ ‘ನಮ್ಮ ಬಿಎಂಟಿಸಿ’ ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಗಿದೆ. ನಮ್ಮ ಬಿಎಂಟಿಸಿ ಮೊಬೈಲ್ ಆ್ಯಪ್ ಹಾಗೂ ಲೋಗೋವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಖ್ಯಾತ ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಅನಾವರಣಗೊಳಿಸಿದ್ದಾರೆ.
ಇದನ್ನೂ ಓದಿ: ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಸ್ವರಾ ಭಾಸ್ಕರ್ – ವಿವಾದಕ್ಕೀಡಾಯ್ತು ಮಗಳ ಹೆಸರು!
ಪ್ರಸ್ತುತ 6,500ಕ್ಕೂ ಹೆಚ್ಚು ಬಸ್‌ಗಳಿದ್ದು, 5000 ಬಸ್‌ಗಳನ್ನು ಆ್ಯಪ್ ಮೂಲಕ ಟ್ರ್ಯಾಕ್ ಮಾಡುವ ವ್ಯವಸ್ಥೆ ಇದೆ. ಬಸ್‌ಗಳ ಸ್ಥಳ ತಿಳಿಯಲು ಎಐಎಸ್ 140, ಪ್ರಮಾಣಿತ 5000 ವಾಹನ ಟ್ರ್ಯಾಕಿಂಗ್ ಸಾಧನಗಳು, ಎಂಎನ್‌ವಿಆರ್ ವಿಡಿಯೋ ರೆಕಾರ್ಡರ್ ಮತ್ತು ಪ್ಯಾನಿಕ್ ಬಟನ್ ಹಾಗೂ ಕಣ್ಗಾವಲು ವ್ಯವಸ್ಥೆಯನ್ನು ಅಳವಡಿಸಲಾಗಿದೆ. 10,000 ಸಿಸಿಟಿವಿ ಕ್ಯಾಮೆರಾಗಳು, ಮಹಿಳಾ ಸುರಕ್ಷತೆಗೆ ಎಸ್‌ಒಎಸ್ ಫೀಚರ್‌ಗಳನ್ನು ಒಳಗೊಂಡಿದೆ. ಬಸ್‌ಗಳ ವೇಳಾಪಟ್ಟಿ, ಹತ್ತಿರದ ಬಸ್ ನಿಲ್ದಾಣ, ಲೈವ್ ರೂಟ್ ಟ್ರ್ಯಾಕ್, ಸಹಾಯವಾಣಿ, ಜರ್ನಿ ಪ್ಲಾನರ್ ಅವಕಾಶಗಳೂ ಇವೆ.
ಆ್ಯಪ್ ಗೂಗಲ್ ಪ್ಲೇಸ್ಟೋರ್‌ನಲ್ಲಿ ಲಭ್ಯವಿದ್ದು, ಪ್ರಯಾಣಿಕರು ಡೌನ್‌ಲೋಡ್, ಇನ್‌ಸ್ಟಾಲ್ ಮಾಡಿಕೊಂಡು ಬಳಸಬಹುದು ಎಂದು ಬಿಎಂಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.