ಅಯೋಧ್ಯೆಯಲ್ಲಿ ತಲೆ ಎತ್ತಲಿದೆ ಬರೋಬ್ಬರಿ 100 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಕಾರಂಜಿ!

ಅಯೋಧ್ಯೆಯಲ್ಲಿ ತಲೆ ಎತ್ತಲಿದೆ ಬರೋಬ್ಬರಿ 100 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಕಾರಂಜಿ!

ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಭವ್ಯ ರಾಮಮಂದಿರ ಉದ್ಘಾಟನೆಗೆ ಸಜ್ಜಾಗಿದೆ. 2024ರ ಜನವರಿಯಲ್ಲಿ ರಾಮಮಂದಿರ ಲೋಕಾರ್ಪಣೆಗೊಳ್ಳಲಿದೆ. ಇದೀಗ ಅಯೋಧ್ಯೆಯಿಂದ ಮತ್ತೊಂದು ಗುಡ್‌ನ್ಯೂಸ್‌ ಹೊರ ಬಿದ್ದಿದೆ. ಅಯೋಧ್ಯೆಯ ಗುಪ್ತರ್ ಘಾಟ್ ಬಳಿ ಕಮಲದ ಆಕಾರದ ಕಾರಂಜಿ ನಿರ್ಮಿಸುವ ಯೋಜನೆಯನ್ನು ಇದೀಗ ಯುಪಿ ಸರ್ಕಾರ ಮುನ್ನೆಲೆಗೆ ತಂದಿದ್ದು, ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಚಿಂತನೆ ನಡೆಸಿದೆ.

ಹೌದು, ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರ ಸಂಕೀರ್ಣದ ಬಳಿ 100 ಕೋಟಿ ರೂಪಾಯಿ ಮೌಲ್ಯದ ಬೃಹತ್ ‘ಮಲ್ಟಿಮೀಡಿಯಾ ಶೋ ಫೌಂಟೇನ್’ ನಿರ್ಮಿಸಲು ಉತ್ತರ ಪ್ರದೇಶ ಸರ್ಕಾರ ಯೋಜನೆ ರೂಪಿಸಿದೆ. ಆಂಫಿಥಿಯೇಟರ್ ಶೈಲಿಯ ಆಸನ ವ್ಯವಸ್ಥೆಯಲ್ಲಿ ಒಂದು ಸಮಯದಲ್ಲಿ ಸುಮಾರು 25,000 ಜನರು ಈ ಮೆಗಾ ಕಾರಂಜಿಯನ್ನು ವೀಕ್ಷಿಸಲು ಸಾಧ್ಯವಾಗುತ್ತದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದ ಮೆರುಗು ಹೆಚ್ಚಿಸಲು ನಿಡ್ಡೋಡಿಯ ನಾಗಲಿಂಗ ಪುಷ್ಪ ಗಿಡಗಳ ರವಾನೆ!

ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿರುವ ಕಾರಂಜಿಯು ಕಮಲದ ಹೂವಿನ ಆಕಾರದಲ್ಲಿರುತ್ತದೆ. ಆ ಕಾರಂಜಿಯಿಂದ ಹರಿಯುವ ನೀರು ಸುಮಾರು 50 ಮೀಟರ್ ಎತ್ತರಕ್ಕೆ ಜಿಗಿಯುವಂತೆ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಈ ಮಹತ್ವಾಕಾಂಕ್ಷೆಯ ಯೋಜನೆಯು ರಾಮಮಂದಿರ ಉದ್ಘಾಟನೆಯ ನಂತರ ಪೂರ್ಣಗೊಳ್ಳಲಿದೆ ಎಂದು ವರದಿ ತಿಳಿಸಿದೆ.

ವಿಶಿಷ್ಟವಾದ ಕಾರಂಜಿ ಪ್ರಪಂಚದಾದ್ಯಂತ ಸಹಸ್ರಾರು ಸಂಖ್ಯೆಯ ಭಕ್ತರು ಮತ್ತು ಪ್ರವಾಸಿಗರನ್ನು ಆಕರ್ಷಿಸಲಿದೆ. ಇದು ದೇವಾಲಯದಿಂದ ಸುಮಾರು 1.5 ಕಿ.ಮೀ ದೂರದಲ್ಲಿದೆ. ಸದ್ಯ ಇದರ ಪ್ರಸ್ತಾವನೆಯು ಇನ್ನೂ ಆರಂಭಿಕ ಹಂತದಲ್ಲಿದ್ದು, ಅಯೋಧ್ಯೆ ಆಡಳಿತವು ಯೋಜನೆಗಾಗಿ ಭೂಮಿಯನ್ನು ಗುರುತಿಸಿದೆ. ಆದರೆ ಪ್ರಮುಖ ಜಾಗತಿಕ ಏಜೆನ್ಸಿಗಳನ್ನು ಒಳಗೊಂಡ ಹರಾಜು ಪ್ರಕ್ರಿಯೆಯು ಇನ್ನೂ ಪ್ರಾರಂಭವಾಗಿಲ್ಲ ಎಂದು ವರದಿಯಾಗಿದೆ.

Shwetha M