ಪಾತಾಳಕ್ಕೆ ಕುಸಿದ ಪಾಪಿ ಪಾಕಿಸ್ತಾನ! – ದೇಶದಲ್ಲಿ ಕಡುಬಡತನ ಶೇ. 39.4ಕ್ಕೆ ಏರಿಕೆ!
ಇಸ್ಲಾಮಾಬಾದ್: ಭಾರತದ ಮೇಲೆ ಸದಾ ದ್ವೇಷ ಸಾಧಿಸುತ್ತಿರುವ ಪಾಪಿ ಪಾಕಿಸ್ತಾನದಲ್ಲಿ ಕಡು ಬಡತನದ ಸಂಖ್ಯೆ ಹೆಚ್ಚಾಗಿದೆ. ಕಳೆದ ಒಂದು ವರ್ಷದಲ್ಲಿ ಪಾಕಿಸ್ತಾನದಲ್ಲಿ ಕಡುಬಡತನ ಜನಸಂಖ್ಯೆ ಹೆಚ್ಚಾಗಿದ್ದು, ಶೇಕಡಾ 40 ರಷ್ಟು ಮಂದಿ ಕಡು ಬಡತನದಲ್ಲಿದ್ದಾರೆ ಎಂದು ವಿಶ್ವ ಬ್ಯಾಂಕ್ ವರದಿ ನೀಡಿದೆ.
ಕಳೆದ ಹಣಕಾಸು ವರ್ಷದಲ್ಲಿ ಪಾಪಿ ಪಾಕಿಸ್ತಾನದಲ್ಲಿ ಬಡತನ ಶೇಕಡಾ 39.4ಕ್ಕೆ ಏರಿದ್ದು, ಬರೋಬ್ಬರಿ 1.25 ಕೋಟಿಗೂ ಹೆಚ್ಚು ಜನರು ಬಡತನಕ್ಕೆ ಸಿಲುಕಿದ್ದಾರೆ. ಸುಮಾರು 95 ದಶಲಕ್ಷ ಪಾಕಿಸ್ತಾನಿಗಳು ಈಗ ಬಡತನದಲ್ಲಿದ್ದಾರೆ. ಆರ್ಥಿಕ ಸ್ಥಿರತೆ ಸಾಧಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪಾಕಿಸ್ತಾನವನ್ನು ವಿಶ್ವಬ್ಯಾಂಕ್ ಒತ್ತಾಯಿಸಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ವಿದೇಶದಲ್ಲಿರುವ ಖಲಿಸ್ತಾನ್ ಉಗ್ರರ ಹೆಡೆಮುರಿ ಕಟ್ಟಲು ಕೇಂದ್ರಸರ್ಕಾರ ಸಜ್ಜು! – OCI Card ರದ್ದಿಗೆ ಸೂಚಿಸಿದ ಭಾರತ!
ಆರ್ಥಿಕತೆಯ ಶೇಕಡಾ 7ಕ್ಕಿಂತ ಹೆಚ್ಚು ಹಣಕಾಸಿನ ಹೊಂದಾಣಿಕೆಯ ಮೂಲಕ ಆರ್ಥಿಕ ಸ್ಥಿರತೆ ಸಾಧಿಸುವ ಪ್ರಯತ್ನದಲ್ಲಿ ವ್ಯರ್ಥ ವೆಚ್ಚವನ್ನು ಕಡಿತಗೊಳಿಸುವಂತೆ ಪಾಕಿಸ್ತಾನವನ್ನು ಜಾಗತಿಕ ಸಾಲದಾತ ಒತ್ತಾಯಿಸಿದೆ. ಸರ್ಕಾರದ ಆದಾಯವನ್ನು ಬಲಪಡಿಸಲು ತೆರಿಗೆ ವಿನಾಯಿತಿ ಯನ್ನು ಹಿಂತೆಗೆದುಕೊಳ್ಳುವ ಮೂಲಕ ಮತ್ತು ರಿಯಲ್ ಎಸ್ಟೇಟ್ ಮತ್ತು ಕೃಷಿ ಕ್ಷೇತ್ರಗಳ ಮೇಲಿನ ತೆರಿಗೆ ಹೆಚ್ಚಿಸುವ ಮೂಲಕ ಆದಾಯ&ಜಿಡಿಪಿ ಅನುಪಾತವನ್ನು 5 ಪ್ರತಿಶತದಷ್ಟು ಸುಧಾರಿಸುವ ಕ್ರಮಗಳನ್ನು ವಿವರಿಸಿದೆ ಎಂದು ವರದಿಯಾಗಿದೆ.