ವಿದೇಶದಲ್ಲಿರುವ ಖಲಿಸ್ತಾನ್‌ ಉಗ್ರರ ಹೆಡೆಮುರಿ ಕಟ್ಟಲು ಕೇಂದ್ರಸರ್ಕಾರ ಸಜ್ಜು! – OCI Card ರದ್ದಿಗೆ ಸೂಚಿಸಿದ ಭಾರತ!

ವಿದೇಶದಲ್ಲಿರುವ ಖಲಿಸ್ತಾನ್‌ ಉಗ್ರರ ಹೆಡೆಮುರಿ ಕಟ್ಟಲು ಕೇಂದ್ರಸರ್ಕಾರ ಸಜ್ಜು! – OCI Card ರದ್ದಿಗೆ ಸೂಚಿಸಿದ ಭಾರತ!

ನವದೆಹಲಿ: ವಿದೇಶದಲ್ಲಿದ್ದುಕೊಂಡು ಭಾರತದ ವಿರುದ್ಧ ಕಿತಾಪತಿ ಮಾಡುತ್ತಿದ್ದ ಖಲಿಸ್ತಾನಿ ಉಗ್ರರೊಗೆ ಕೇಂದ್ರ ಸರ್ಕಾರ ಬಿಸಿ ಮುಟ್ಟಿಸಲು ಮುಂದಾಗಿದೆ. ವಿದೇಶದಲ್ಲಿ ಭಾರತದ ವಿರುದ್ಧ ವಿಕೃತಿ ಮೆರೆಯುತ್ತಿದ್ದ ಉಗ್ರರನ್ನು ಪತ್ತೆ ಹಚ್ಚಿ ಅವರ ಒಸಿಐ ಕಾರ್ಡ್‌ (OCI Card) ರದ್ದುಗೊಳಿಸುವಂತೆ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗೆ ಸೂಚಿಸಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಲೋಕಸಭಾ ಚುನಾವಣೆಯಲ್ಲಿ ನನ್ನ ವಿರುದ್ಧ ಸ್ಪರ್ಧೆ ಮಾಡಲಿ – ರಾಹುಲ್ ಗಾಂಧಿಗೆ ಅಸಾದುದ್ದೀನ್ ಓವೈಸಿ ನೇರ ಸವಾಲು

ಕೆನಡಾದಲ್ಲಿ ನೆಲೆಸಿರುವ ಖಲಿಸ್ತಾನಿ ಉಗ್ರ ಗುರುಪತ್‌ವಂತ್‌ ಸಿಂಗ್‌ ಪನ್ನು ಭಾರತದಲ್ಲಿ ಹೊಂದಿದ್ದ ಆಸ್ತಿಯನ್ನು ರಾಷ್ಟ್ರೀಯ ತನಿಖಾ ದಳ ಮುಟ್ಟುಗೋಲು ಹಾಕಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ಅಮೆರಿಕ, ಯುಕೆ, ಕೆನಡಾ, ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಎಲ್ಲಾ ಖಲಿಸ್ತಾನಿ ಉಗ್ರರನ್ನು ಪತ್ತೆ ಹಚ್ಚಿ ಅವರ ಒಸಿಐ ಕಾರ್ಡ್‌ ರದ್ದುಗೊಳಿಸುವಂತೆ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗೆ ಸೂಚಿಸಿದೆ . ಕೇಂದ್ರ ಸರ್ಕಾರ ಒಸಿಐ ಕಾರ್ಡ್‌ ರದ್ದುಗೊಳಿಸಿದರೆ ಅವರು ಮರಳಿ ಭಾರತಕ್ಕೆ ಬರಲು ಸಾಧ್ಯವಿಲ್ಲ.

ಏನಿದು ಒಸಿಐ ಕಾರ್ಡ್‌?

ಭಾರತೀಯ ಮೂಲದ ವಿದೇಶಿ ಪ್ರಜೆಗೆ ಭಾರತ ನೀಡಿದ ಕಾನೂನಿನ ಸ್ಥಾನಮಾನ ಓಸಿಐ. ಇದರಿಂದಾಗಿ ವ್ಯಕ್ತಿಗೆ ಭಾರತದ ಶಾಶ್ವತ ಪ್ರಜೆ ಎಂಬ ಸ್ಥಾನ ಸಿಗುವುದಾದರೂ ಪೌರತ್ವ ಸಿಗುವುದಿಲ್ಲ. ವೀಸಾ ಹೊಂದಿರುವವರಿಗಿಂತ ಓಸಿಐ ಕಾರ್ಡ್‌ ಹೆಚ್ಚಿನ ಪ್ರಯೋಜನ ನೀಡುತ್ತದೆ ಶಾಶ್ವತವಾಗಿ ಭಾರತದ ವೀಸಾ ಇವರಿಗೆ ಇರುತ್ತದೆ. ಎಷ್ಟು ಬಾರಿ ಬೇಕಾದರೂ ಇವರು ಭಾರತಕ್ಕೆ ಬರಬಹುದು. ಇಲ್ಲಿ ವಾಸ, ಕೆಲಸ ಹಾಗೂ ವ್ಯಾಪಾರವನ್ನು ಅನಿರ್ದಿಷ್ಟ ಕಾಲಾವಧಿಯವರೆಗೆ ಮುಂದುವರಿಸಬಹುದು.

Shwetha M